Home News Xiaomi Smartphone: ಫ್ಲಿಪ್​ಕಾರ್ಟ್ ನೀಡುತ್ತಿದೆ ಭರ್ಜರಿ ಆಫರ್ | ಶಿಯೋಮಿಯ ಈ ಸ್ಮಾರ್ಟ್ ಫೋನ್ ಭಾರೀ...

Xiaomi Smartphone: ಫ್ಲಿಪ್​ಕಾರ್ಟ್ ನೀಡುತ್ತಿದೆ ಭರ್ಜರಿ ಆಫರ್ | ಶಿಯೋಮಿಯ ಈ ಸ್ಮಾರ್ಟ್ ಫೋನ್ ಭಾರೀ ಅಗ್ಗದ ಬೆಲೆಯಲ್ಲಿ ಲಭ್ಯ!!

Hindu neighbor gifts plot of land

Hindu neighbour gifts land to Muslim journalist

ಹೊಸ ವಿನ್ಯಾಸದ ಉತ್ತಮ ಫೀಚರ್ಸ್ ಇರುವಂತಹ ಸ್ಮಾರ್ಟ್ ಫೋನ್ ಬಂತೆಂದರೆ ಸಾಕು ಜನರು ಮುಗಿಬೀಳುತ್ತಾರೆ. ಆದರೆ ಎಲ್ಲರಿಗೂ ತಮಗೆ ಬೇಕಾದ ಮೊಬೈಲ್ ಕೊಳ್ಳಲು ಸಾಧ್ಯವಾಗೋದಿಲ್ಲ. ಹಾಗಾಗಿ ಇ-ಕಾಮರ್ಸ್​ ವೆಬ್​ಸೈಟ್ ಗಳು ಭರ್ಜರಿ ಆಫರ್ ಗಳನ್ನು ನೀಡಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಸ್ಮಾರ್ಟ್ ಫೋನ್ ಲಭ್ಯವಾಗುವಂತೆ ಮಾಡುತ್ತದೆ. ಸದ್ಯ ಫ್ಲಿಪ್​ಕಾರ್ಟ್​ ಎಲೆಕ್ಟ್ರಾನಿಕ್ಸ್​ ಸೇಲ್ (Flipkart Electronic Sale) ಆರಂಭವಾಗಿದ್ದು, ಈ ಮಾರಾಟದಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಬಿಗ್​ ಆಫರ್ಸ್​ಗಳು ಲಭ್ಯವಿದೆ.

ಅತ್ಯಂತ ಜನಪ್ರಿಯ ಇ-ಕಾಮರ್ಸ್ ವೆಬ್​ಸೈಟ್ ಆಗಿರುವ ಫ್ಲಿಪ್​ಕಾರ್ಟ್​​ ಇದೀಗ ಎಲೆಕ್ಟ್ರಾನಿಕ್ಸ್​ ಸೇಲ್​ ಅನ್ನು ಆರಂಭಿಸಿದೆ. ಈ ಸೇಲ್​ನಲ್ಲಿ ಶಿಯೋಮಿ ಕಂಪೆನಿಯ ಸ್ಮಾರ್ಟ್​​ಫೋನ್​ಗಳ ಮೇಲೆ ವಿಶೇಷ ಆಫರ್ ನೀಡಿದ್ದು, ನೀವು ಸ್ಮಾರ್ಟ್​​ಫೋನ್ ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಇದು ಉತ್ತಮ ಅವಕಾಶವಾಗಿದೆ. ಇನ್ನು ಈ ಸೇಲ್ ನಲ್ಲಿ ಯಾವ ಸ್ಮಾರ್ಟ್​​ಫೋನ್​ ಮೇಲೆ ರಿಯಾಯಿತಿ ಲಭ್ಯವಾಗಲಿದೆ ಎಂಬುದನ್ನು ನೋಡೋಣ.

ಶಿಯೋಮಿ 11ಐ ಹೈಪರ್​ಚಾರ್ಜ್​ ಸ್ಮಾರ್ಟ್​​ಫೋನ್​ :

ಫ್ಲಿಪ್​ಕಾರ್ಟ್​​ ಆರಂಭಿಸಿರುವ ಈ ಎಲೆಕ್ಟ್ರಾನಿಕ್​ ಸೇಲ್​ನಲ್ಲಿ ಶಿಯೋಮಿ 11ಐ ಹೈಪರ್​ಚಾರ್ಜ್​ ಸ್ಮಾರ್ಟ್​​ಫೋನ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಶಿಯೋಮಿ ಕಂಪೆನಿಯ ಈ ಸ್ಮಾರ್ಟ್​​ಫೋನ್​ನ ಮೂಲ ಬೆಲೆ 31,999 ರೂಪಾಯಿ ಆಗಿದೆ. ಆದರೆ ನೀವು ಈ ಸ್ಮಾರ್ಟ್​​ಫೋನ್ ಅನ್ನು ರಿಯಾಯಿತಿಯಲ್ಲಿ ಕೇವಲ 24,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಈ ಸ್ಮಾರ್ಟ್​​ಫೋನ್​ನ ಮೇಲೆ ಬ್ಯಾಂಕ್​ ಹಾಗೂ ಎಕ್ಸ್​​ಚೇಂಜ್​ ಆಫರ್ ಕೂಡ ಲಭ್ಯವಿದೆ.

ಎಕ್ಸ್​​ಚೇಂಜ್​ ಆಫರ್​ : ಈ ಸ್ಮಾರ್ಟ್ ಫೋನ್ ಅನ್ನು ಎಕ್ಸ್​​ಚೇಂಜ್ ಆಫರ್ ಮೂಲಕ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ನೀವು ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್​​ಚೇಂಜ್ ಮಾಡಿ ಹೊಸ ಫೋನ್ ಖರೀದಿಸಿದರೆ ನಿಮ್ಮ ಹಳೆಯ ಫೋನ್​ಗೆ 23,000 ರೂ. ಎಕ್ಸ್​​ಚೇಂಜ್ ಆಫರ್ ಸಿಗಲಿದೆ. ಆದರೆ ಇದು ನಿಮ್ಮ ಹಳೆಯ ಫೋನ್​ನ ಗುಣಮಟ್ಟ ಮತ್ತು ಮಾದರಿಯ ಆಧಾರದ ಮೇಲೆ ನಿರ್ಧಾರವಾಗಲಿದೆ.

ಬ್ಯಾಂಕ್ ಆಫರ್ಸ್​ : ನೀವು ಬ್ಯಾಂಕ್ ರಿಯಾಯಿತಿ ಮೂಲಕ ಶಿಯೋಮಿ 11ಐ ಹೈಪರ್​ಚಾರ್ಜ್​ ಸ್ಮಾರ್ಟ್​​​ಫೋನ್ ಅನ್ನು ಖರೀದಿಸಲು ಬಯಸಿದರೆ, ಇದರ​ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಯಾವುದೇ ಬ್ಯಾಂಕ್​ನ ಡೆಬಿಟ್ ಅಥವಾ ಕ್ರೆಡಿಟ್​ ಕಾರ್ಡ್​ ಬಳಸಿ ಖರೀದಿಸಿದರೆ, 3 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ಲಭ್ಯವಾಗುತ್ತದೆ. ಇನ್ನು ಕೋಟಕ್​​ ಬ್ಯಾಂಕ್​ನ ಡೆಬಿಟ್​ ಮತ್ತು ಕ್ರೆಡಿಟ್​​ ಕಾರ್ಡ್​​ ಬಳಸಿ ಖರೀದಿಸಿದರೆ, ನೀವು 750 ರೂಪಾಯಿಗಳಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.