Home News Kadaba News: ಕಡಬ: ಕುಡಿದು ಬಾರ್ ಎದುರಲ್ಲಿ ಬಿದ್ದ ಗ್ರಾಮಕರಣಿಕ!

Kadaba News: ಕಡಬ: ಕುಡಿದು ಬಾರ್ ಎದುರಲ್ಲಿ ಬಿದ್ದ ಗ್ರಾಮಕರಣಿಕ!

Kadaba News:

Hindu neighbor gifts plot of land

Hindu neighbour gifts land to Muslim journalist

Kadaba News: ಗ್ರಾಮಕರಣಿಕರೊಬ್ಬರು ಕಂಠ ಪೂರ್ತಿ ಕುಡಿದು ಬಾರ್ ಮುಂದೆಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ.
ಎ.19 ರ ಸಂಜೆ ಕಂಠ ಪೂರ್ತಿ ಬಿದ್ದಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲ ಸಮಯದ ಬಳಿಕ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೇ ಆತನನ್ನು ಮನೆಗೆ ತಲುಪಿಸಿರುವುದಾಗಿ ತಿಳಿದು ಬಂದಿದೆ.
ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಪಾನಮತ್ತರಾಗಿಯೇ ಕಚೇರಿಗೆ ಬರುತ್ತಿರುವುದಾಗಿ ಗ್ರಾಮದ ಜನರು ಈ ಹಿಂದೆ ಆರೋಪಿಸಿದ್ದರು. ಈತ ಪಾನಮತ್ತನಾಗಿ ಸಾರ್ವ ಜನಿಕ ಸ್ಥಳದಲ್ಲಿ ಬೀಳುತ್ತಿರುವುದರಿಂದ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಜುಗರಪಡುವಂತಾಗಿದೆ .
ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಡಬ ಕಂದಾಯ ಇಲಾಖೆ ವ್ಯಾಪ್ತಿಯ ಗೋಳಿತ್ತೊಟ್ಟು ಗ್ರಾಮದ ಗ್ರಾಮಕರಣಿಕ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದೆ.

15 ದಿನಗಳ ಹಿಂದೆಯಷ್ಟೇ ಕುಡಿದು ಬಿದ್ದು ಕಣ್ಣಿಗೆ ಗಾಯವಾಗಿ ಬಿದ್ದು ಮಂಗಳವಾರ ವಷ್ಟೇ ಆಸ್ಪತ್ರೆ ಯಿಂದ ಬಿಡುಗಡೆ ಆಗಿ ಕಡಬಕ್ಕೆ(Kadaba News) ಬಂದಿದ್ದರು.