Home News ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಿರ್ಗಮನ ಆಡಳಿತಾಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಸರ್ವರ ಸಹಕಾರದೊಂದಿಗಿನ ಒಗ್ಗಟ್ಟಿನ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಿರ್ಗಮನ ಆಡಳಿತಾಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಸರ್ವರ ಸಹಕಾರದೊಂದಿಗಿನ ಒಗ್ಗಟ್ಟಿನ ಕಾರ್ಯವೈಖರಿ ಪ್ರಗತಿಗೆ ಬುನಾದಿ- ಜುಬಿನ್ ಮೊಹಾಪಾತ್ರ

Hindu neighbor gifts plot of land

Hindu neighbour gifts land to Muslim journalist

Kadaba : ಅಧಿಕಾರಿಗಳ, ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಸಮ್ಮಿಲನವು ಉತ್ತಮ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಬುನಾದಿಯಾಗುತ್ತದೆ.ಸರ್ವರ ಸಹಕಾರ ಮತ್ತು ಒಗ್ಗಟ್ಟಿನ ಕಾರ್ಯವೈಖರಿ ಪ್ರಗತಿಗೆ ಮುನ್ನುಡಿಯಾಗುತ್ತದೆ.ಅಧಿಕಾರಿಯೋರ್ವರ ಶ್ರಮವು ಮಾತ್ರ ಅಭಿವೃದ್ಧಿಗೆ ಕಾರಣವಲ್ಲ ಬದಲಾಗಿ ಅಧಿಕಾರಿಗಳಿಗೆ ಸಹಕಾರ ನೀಡುವ ತಂಡ ಔನತ್ಯಕ್ಕೆ ಅಡಿಗಲ್ಲಾಗುತ್ತದೆ. ಪುಣ್ಯ ಕ್ಷೇತ್ರ ಕುಕ್ಕೆಯ ಶ್ರೀ ದೇವಳದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಲು ದೊರಕಿದ ಅವಕಾಶ ಜೀವಿತಾವಧಿಯ ಸೌಭಾಗ್ಯ ಎಂದು ಭಾವಿಸಿದ್ದೇನೆ. ಪ್ರಾಮಾಣಿಕ ಮತ್ತು ಜನಸ್ನೇಹಿ ಕಾರ್ಯನಿರ್ವಹಣೆ ಸರ್ವರಿಗೂ ಪ್ರೀಯವಾಗುತ್ತದೆ ಎಂಬುದು ನಮ್ಮ ಮನಸಿನಲ್ಲಿ ಇರಬೇಕಾದುದು ಅತ್ಯಗತ್ಯ ಎಂದು ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ನಿರ್ಗಮನ ಆಡಳಿತಾಧಿಕಾರಿ ಮತ್ತು ರಾಯಚೂರು ನಗರಪಾಲಿಕೆಯ ನೂತನ ಆಯುಕ್ತ ಜುಬಿನ್ ಮೊಹಾಪಾತ್ರಾ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದು ಪ್ರಸ್ತುತ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಆಡಳಿಆಧಿಕಾರಿಗಳಿಗೆ ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೌರವಾರ್ಪಣೆ:
ಜುಬಿನ್ ಮೊಹಪಾತ್ರಾ ಮತ್ತು ಅವರ ತಂದೆ ರವೀಂದ್ರನಾಥ ಮೊಹಾಪಾತ್ರಾ ಅವರನ್ನು ಶ್ರೀ ದೇವಳದ ವತಿಯಿಂದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸನ್ಮಾನಿಸಿ ಗೌರವಿಸಿದರು.ಬಳಿಕ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ, ಎಸ್‌ಎಸ್‌ಪಿಯು ಕಾಲೇಜಿನ ವತಿಯಿಂದ ಪ್ರಾಚಾರ್ಯ ಸೋಮಶೇಖರ ನಾಯಕ್, ಕೆಎಸ್‌ಎಸ್‌ಕಾಲೇಜು ವತಿಯಿಂದ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ, ತಾಲೂಕು ಕಟ್ಟಡ ಕಾರ್ಮಿಕರ ಸಂಘದಿಂದ ರಾಜ್ಯ ಕಟ್ಟಡ ಕಾರ್ಮಿಕ ಮಂಡಳಿ ಅಧ್ಯಕ್ಷ ಕೆ.ಪಿ.ಜಾನಿ ಮತ್ತು ಪ್ರಮುಖರಾದ ಡಾ.ರವಿಕ್ಕೆಪದವು, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವತಿಯಿಂದ ಅಧ್ಯಕ್ಷ ವಿಶ್ವನಾಥ ನಡುತೋಟ ಗೌರವಿಸಿದರು.

ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿ ನಿರೂಪಿಸಿದರು.