Home News Yogaraj Bhat: ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ಚಿತ್ರ ತಂಡದಿಂದ ಎಡವಟ್ಟು: ಭಟ್‌ ವಿರುದ್ಧ ಎಫ್‌ಐಆರ್‌!

Yogaraj Bhat: ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ಚಿತ್ರ ತಂಡದಿಂದ ಎಡವಟ್ಟು: ಭಟ್‌ ವಿರುದ್ಧ ಎಫ್‌ಐಆರ್‌!

Hindu neighbor gifts plot of land

Hindu neighbour gifts land to Muslim journalist

Yogaraj Bhat: ಸೆಪ್ಟೆಂಬರ್ 3 ರಂದು ಚಿತ್ರೀಕರಣದ ವೇಳೆ ಲೈಟ್ ಬಾಯ್ ಮೃತಪಟ್ಟಿದ್ದು, ಚಿತ್ರ ತಂಡವು ಮುನ್ನೆಚ್ಚರಿಕೆ ಕೈಗೊಳ್ಳದ ಕಾರಣ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) , ಮ್ಯಾನೇಜ‌ರ್ ಸೇರಿ ಮೂವರ ವಿರುದ್ಧ ಎಫ್‌ಐಆ‌ರ್ ದಾಖಲು ಮಾಡಲಾಗಿದೆ.

ಸೆಪ್ಟೆಂಬರ್ 3 ರಂದು ‘ಮನದ ಕಡಲು’ ಸಿನಿಮಾ ಚಿತ್ರೀಕರಣದ ವೇಳೆ ಅಚಾನಕ್ ಆಗಿ 30 ಅಡಿ ಎತ್ತರದ ಏಣಿಯಿಂದ ಬಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೋಹನ್ ಕುಮಾರ್ ಎಂಬ ಲೈಟ್ ಬಾಯ್ ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಅವನನ್ನು ಗೊರಗುಂಟೆ ಪಾಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾನೆ.

ಇದೀಗ ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪ ಅಡಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ವ್ಯವಸ್ಥಾಪಕ ಸುರೇಶ್ ಸೇರಿ ಮೂವರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .