Home News Sharath Shetty’s murder case: ಶರತ್ ಶೆಟ್ಟಿಕೊಲೆ ಪ್ರಕರಣ‌ ಸಂಬಂಧಿಸಿ ದೈವದ ಮೊರೆ ಹೋದ ಕುಟುಂಬಸ್ಥರು...

Sharath Shetty’s murder case: ಶರತ್ ಶೆಟ್ಟಿಕೊಲೆ ಪ್ರಕರಣ‌ ಸಂಬಂಧಿಸಿ ದೈವದ ಮೊರೆ ಹೋದ ಕುಟುಂಬಸ್ಥರು : ಪಂಜುರ್ಲಿ ದೈವ ಭರವಸೆ ನೀಡಿದ್ದೇನು ಗೊತ್ತಾ?

Sharath Shetty's murder case

Hindu neighbor gifts plot of land

Hindu neighbour gifts land to Muslim journalist

Sharath Shetty’s murder case: ಉಡುಪಿ : ಶರತ್ ಶೆಟ್ಟಿ (42) ಕೊಲೆ ಪ್ರಕರಣ‌ ( Sarath Shetty’s murder case) ಸಂಬಂಧಿಸಿ ಕುಟುಂಬಸ್ಥರು ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋಗಿದ್ದಾರೆ, ಅಷ್ಟೇ ಅಲ್ಲದೇ ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಲಾಗಿದೆ ಎಎಂದು ವರದಿಯಾಗಿದೆ.

ಸದಾ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಶರತ್ ವಿ. ಶೆಟ್ಟಿಪಾಂಗಾಳ ಅವರ ಕೊಲೆಯಾಗಿ ತಿಂಗಳು ಕಳೆದ್ರೂ, ಕೊಲೆ ಸಂಬಂಧಿಸಿ ಹಲವು ಮಂದಿಯ ಬಂಧಿಸಲಾಗಿದೆ. ಆದ್ರೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಇದರಿಂದ ಬೇಸತ್ತು ಪಾಂಗಾಳ ಶರತ್ ವಿ. ಶೆಟ್ಟಿ ಕುಟುಂಬಸ್ಥರು ನಿನ್ನೆ ಉಡುಪಿ ಜಿಲ್ಲೆ ಕಾಪು ತಾಲೂಕಿನಲ್ಲಿ ಕುಟುಂಬಸ್ಥರು  ನಿನ್ನೆ ರಾತ್ರಿ ನಡೆದ ವರ್ತೆ ಪಂಜುರ್ಲಿ ದೈವದ ಕೋಲದಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಅದಕ್ಕೆ ಪ್ರತ್ಯತ್ತರವಾಗಿ ಶರತ್ ಶೆಟ್ಟಿ ಸಾವಿನಂತೆ ಕೊಲೆಗಾರರನ್ನು  ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಿದೆ ಎಂದು ವರದಿಯಾಗಿದೆ.

ಶರತ್ ಶೆಟ್ಟಿ (42) ಕೊಲೆ ಆಗಿದ್ದೇಗೆ ಗೊತ್ತಾ?

ಇವರು ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು, ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೈವದ ಅಭಯ ನೀಡಿದ್ದೇನು ಗೊತ್ತಾ?
ಶರತ್ ಶೆಟ್ಟಿಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ನಿನ್ನೆ ರಾತ್ರಿ ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿ ನೇಮೋತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಶರತ್ ಶೆಟ್ಟಿ ಕೊಲೆ ಆರೋಪಿಗಳು ಪಾತಾಳದಲ್ಲಿ ಅಡಗಿ ಕುಳಿತರೂ ಹುಡುಕುತ್ತೇನೆ. ಈ ವೇಳೆ ಶರತ್ ಶೆಟ್ಟಿ ಯಾವ ರೀತಿ ಸಾಯುವಂತಾಯಿತು ಅದೇ ರೀತಿ ಅವರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಿದ ಪಂಜುರ್ಲಿ ದೈವ.

ಈ ಸಂದರ್ಭ ಶ್ರೀಮತಿ ಮತ್ತು ಶ್ರೀ ಹರಿಶ್ಚಂದ್ರ ಶೆಟ್ಟಿ ಮತ್ತು ಕುಟುಂಬಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.