Home News Bantwala: ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಪ್ರಕರಣ; ಪರಿಹಾರ ಹಿಂಪಡೆಯಲು ಡಿಸಿಗೆ ಕೋರ್ಟ್‌ ಆದೇಶ

Bantwala: ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಪ್ರಕರಣ; ಪರಿಹಾರ ಹಿಂಪಡೆಯಲು ಡಿಸಿಗೆ ಕೋರ್ಟ್‌ ಆದೇಶ

Karnataka High Court

Hindu neighbor gifts plot of land

Hindu neighbour gifts land to Muslim journalist

Mangaluru: ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲು ಮಾಡಿ, ಪರಿಹಾರ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮಂಗಳೂರಿನ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಅಲ್ಲದೆ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಪರಿಹಾರ ಪಡೆದರೆ ಅದನ್ನು ವಾಪಾಸ್‌ ಪಡೆಯುವ ಅಧಿಕಾರವಿದೆ ಎಂದು ನ್ಯಾಯಾಧೀಶರು ನಿರ್ದೇಶನದಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ಕಾವಳಪಡೂರಿನ ತೇಜಸ್‌ (27) ವಿರುದ್ಧ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮನೆಯವರು ದೂರನ್ನು ನೀಡಿದ್ದರು.

2024, ಮಾ.21 ರಂದು ತೇಜಸ್‌ ಬಾಲಕಿಯ ಅಜ್ಜನ ಮನೆಗೆ ಅಕ್ರಮ ಪ್ರವೇಶ ಮಾಡಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂದರ್ಭದಲ್ಲಿ ಬಾಲಕಿಯ ರಕ್ಷಣೆಗೆ ಬಂದಿದ್ದ ಆಕೆಯ ಮಾವ ಮತ್ತು ಅಜ್ಜಿಗೆ ಹಲ್ಲೆ ಮಾಡಿದ್ದ. ಜೊತೆಗೆ ಜಾತಿನಿಂದನೆ ಕೂಡಾ ಮಾಡಿದ್ದು. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 2024, ಮಾ.23 ರಂದು ಪ್ರಕರಣ ದಾಖಲು ಮಾಡಲಾಗಿತ್ತು.

ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರಿಗೆ 2.50ಲಕ್ಷ ರೂ. ಪರಿಹಾರ ಕೂಡಾ ನೀಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೊಂದು ಸುಳ್ಳು ದೂರು ಎಂದು ತಿಳಿದು ಬಂದಿದೆ. ತೇಜಸ್‌ನಿಂದ ಸಾಲ, ಚಿನ್ನಾಭರಣವನ್ನು ಸಂತ್ರಸ್ತೆಯ ಬಾಲಕಿಯ ತಾಯಿ ಪಡೆದುಕೊಂಡಿದ್ದು, ಅದನ್ನು ಆತ ವಾಪಸ್‌ ಕೇಳಿದ್ದಕ್ಕೆ ಆತನ ವಿರುದ್ಧವೇ ದೂರು ದಾಖಲಾಗಿರುವುದು ಸಾಕ್ಷ್ಯ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ದೂರುದಾರರು ಸುಳ್ಳುದೂರು ದಾಖಲಿಸಿದ್ದು, ಹಾಗೂ ಇದರಿಂದ ಪಡೆದುಕೊಂಡಿರುವ ಪರಿಹಾರವನ್ನು ಜಿಲ್ಲಾಧಿಕಾರಿಯವರು ವಾಪಸ್‌ ಪಡೆಯಬೇಕು ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.