Home News ಹಳೇ ಹುಡುಗಿಯ ಮದುವೆ ಕಾಟ,‌ಮನೆ ಬಿಟ್ಟು ಹೋದ ಯುವಕ! ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ!

ಹಳೇ ಹುಡುಗಿಯ ಮದುವೆ ಕಾಟ,‌ಮನೆ ಬಿಟ್ಟು ಹೋದ ಯುವಕ! ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಪ್ರೀತಿ-ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಘಟನೆಗಳು ನಡೆಯುತ್ತಿದೆ. ಹಿಂದೆ ಹುಡುಗರೆಲ್ಲಾ ಹುಡುಗಿಯ ಬೆನ್ನ ಹಿಂದೆ ಬಿದ್ದು ಅವಳನ್ನು ಕಾಡಿಸಿ-ಪೀಡಿಸಿ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದರೂ. ಈಗ ಕಾಲ ಬದಲಾಗಿದೆ ಹುಡುಗಿಯೇ ಹುಡುಗನ ಬೆನ್ನ ಹಿಂದೆ ಬಿದ್ದಿದ್ದಾಳೆ. ಇಲ್ಲೊಂದು ಕಡೆ ಇಂತಹದೆ ಘಟನೆ ನಡೆದಿದ್ದೂ, ಹುಡುಗಿಯ ಕಾಟಕ್ಕೆ ಹುಡುಗ ಮನೆಯನ್ನೇ ಬಿಟ್ಟು ಹೋಗಿದ್ದಾನೆ!

ಹೌದು, ಮೂಲತಃ ಜೇವರ್ಗಿ ತಾಲೂಕಿನ ಹರವಾಳದ ನಿವಾಸಿಯೊಬ್ಬನು ಕಾಣೆಯಾಗಿದ್ದೂ, ಈತ ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಹುಡುಗಿಯನ್ನು ಮದುವೆಗಾಗಿ ಸ್ನೇಹಿತರ ಜತೆಗೂಡಿ ನೋಡಲು ಹೋಗಿದ್ದನು. ಆ ವೇಳೆ ಹುಡುಗ ಚೆನ್ನಾಗಿಲ್ಲ ಎಂದು ಆಕೆಯು ಆತನನ್ನು ತಿರಸ್ಕಾರ ಮಾಡಿದ್ದಳು. ಇದಾದ ನಂತರ ಆತ ಹುಮನಾಬಾದ್‌ ತಾಲೂಕಿನಲ್ಲಿ ಮತ್ತೊಂದು ಹುಡುಗಿಯನ್ನು ನೋಡಿದ್ದ. ಆ ನಂತರ ಇಬ್ಬರ ಮನೆಯವರು ಪರಸ್ಪರ ಒಪ್ಪಿಗೆಯಿಂದ ಅದ್ಧೂರಿಯಾಗಿ ಅ.28ರಂದು ನಿಶ್ಚಿತಾರ್ಥ ಮಾಡಿಸಿದರು.

ಆದರೆ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ, ರಿಜೆಕ್ಟ್ ಮಾಡಿದ ಹುಡುಗಿಯೇ ಈಗ ಮದುವೆಯಾಗುವಂತೆ ಒತ್ತಡ ಹೇರಿದ್ದಾಳೆ. ಎರಡನೇ ಹುಡುಗಿಯೊಂದಿಗೆ ನಿಶ್ಚಿತಾರ್ಥದ ಕೆಲ ದಿನಗಳ ನಂತರ ಮತ್ತೆ ಮೊದಲನೇ ಹುಡಗಿ ಭೇಟಿಯಾಗಿದ್ದೂ, ಈ ವೇಳೆ ಮತ್ತೆ ಇಬ್ಬರ ನಡುವೆ ಸ್ನೇಹ ಕುದುರಿದೆ. ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಮನೆಯವರು ಮದುವೆಗೆ ಸಿದ್ಧತೆ ನಡೆಸಿದ್ದರು. ಈ ವಿಷಯ ಮೊದಲ ಹುಡುಗಿಗೆ ಮರೆಪ್ಪ ತಿಳಿಸಿದ್ದಾನೆ. ನಿಶ್ಚಿತಾರ್ಥ ಮುರಿದುಕೊಂಡು ಮದುವೆ ಮಾಡಿಕೊಳ್ಳುವಂತೆ ಯುವಕನಿಗೆ ದುಂಬಾಲು ಬಿದಿದ್ದಳು. ಹಳೆ ಹುಡುಗಿಯ ಹೊಸ ಕಾಟಕ್ಕೆ ಬೇಸತ್ತು ನ. 13ರಿಂದ ಮನೆ ಬಿಟ್ಟು ಪರಾರಿಯಾಗಿದ್ದಾನೆ.

ಮನೆಯಿಂದ ಹೋಗುವ ಮೊದಲು 5 ಪುಟಗಳ ಪತ್ರ ಬರೆದಿಟ್ಟಿದ್ದಾನೆ. ಎಷ್ಟೇ ಸಂಕಷ್ಟ ಬಂದರೂ ಅಣ್ಣನ ಹಾಗೂ ಅಕ್ಕನ ಮಕ್ಕಳಿಗೆ ವಿದ್ಯಾಭ್ಯಾಸ ನಿಲ್ಲಿಸಬೇಡಿ ಎಂದು ಸಲಹೆ ನೀಡಿದ್ದಾನೆ. ದೇವರ ಹೆಸರಲ್ಲಿ ವೆಚ್ಚ ಮಾಡದಿರಿ. ನನ್ನಿಂದ ಮನೆಯ ಹೆಸರು ಬರುತ್ತದೆ ಎಂದು ಅಂದುಕೊಂಡಿದ್ದೀರಿ, ಆದರೆ, ಅದು ಸಾಧ್ಯವಾಗದಕ್ಕೆ ಕ್ಷಮೆ ಇರಲಿ. ತನ್ನ ಗುತ್ತಿಗೆ ಆಧಾರದ ನೌಕರಿಯನ್ನು ತನ್ನ ಸ್ನೇಹಿತನಿಗೆ ನೀಡುವಂತೆ ಮನವಿ ಮಾಡಿದ್ದಾನೆ. ಮೊದಲ ಹುಡಗಿಗೆ ನಾನಾ ರೀತಿಯಲ್ಲಿ ತಿಳಿಸಿ ಹೇಳಿದರೂ ಆಕೆ ಕೇಳುತ್ತಿಲ್ಲ. ಆದ್ದರಿಂದ ನಿಶ್ಚಿತಾರ್ಥ ಮಾಡಿಕೊಂಡ ಎರಡನೇ ಹುಡುಗಿಯ ಮನೆಯವರು ದೊಡ್ಡ ಗೌರವಸ್ಥರಾಗಿದ್ದು ಅವರಿಗೂ ಮೋಸ ಮಾಡಲು ಸಾಧ್ಯವಿಲ್ಲ. ಇನ್ನೊಂದೆಡೆ ಎರಡನೇ ಹುಡುಗಿ ಬೇಡ ಎನ್ನಲು ಧೈರ್ಯ ಸಾಲುತ್ತಿಲ್ಲ. ಇದೆಲ್ಲವನ್ನು ಎದುರಿಸಲು ಸಾಧ್ಯವಾಗದೆ ನಾನು ಶೂನ್ಯದ ಕಡೆ ಸಾಗಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ. ನ.13ರಂದು ಮನೆ ಬಿಡುವುದಕ್ಕೆ ಮುನ್ನು ಸಾಕಷ್ಟು ಯೋಚಿಸಿದ್ದಾನೆ ಎಂಬುದು ಮೇಲ್ನೊಟಕ್ಕೆ ಕಂಡುಬರುತ್ತದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.