

Shivrajkumar: ಹ್ಯಾಟ್ರಿಕ್ ಹೀರೋ ಕನ್ನಡಿಗರ ಮನೆ ಮಗ ಶಿವರಾಜ್ ಕುಮಾರ್(Shivrajkumar)ಅವರಿಗೆ ಯಶಸ್ವಿಯಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಾಗಿದೆ. ಅಭಿಮಾನಿಗಳ ಹಾರೈಕೆಯಿಂದ, ಪ್ರೀತಿ ವಿಶ್ವಾಸದಿಂದ, ವೈದ್ಯರ ಶತ ಪ್ರಯತ್ನದಿಂದಾಗಿ ಸತ್ಯ ಗುಣಮುಖರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯ ಬಳಿಕವೂ ಹೆಚ್ಚು ರೆಸ್ಟ್ ಕೂಡ ಪಡೆಯದೇ ಮತ್ತೆ ನಟನೆಗೆ ಮರಳಿದ್ದಾರೆ. ಈ ನಡುವೆ ಶಿವಣ್ಣ ಅವರು ತಮ್ಮ ಕುಟುಂಬದ ಕುರಿತಾಗಿ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಹೌದು, ಕ್ಯಾನ್ಸರ್ ಗೆದ್ದು ಬಂದ ಶಿವಣ್ಣ ಅವರು, ಇದೀಗ ಹಲವಾರ ಸಂದರ್ಶನಗಳಲ್ಲಿ ಕ್ಯಾನ್ಸರ್ ಬಗ್ಗೆ ಹೇಳಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಕುಟುಂಬದಲ್ಲಿ ಹಲವರಿಗೆ ಕ್ಯಾನ್ಸರ್ ಇದ್ದ ವಿಷಯವನ್ನು ನಟ ಶಿವರಾಜ್ ಕುಮಾರ್ ಅವರು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ಕೂಡ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದೇ ಕಾರಣಕ್ಕೆ ಶಿವಣ್ಣ ಅವರಿಗೂ ಬಂದಿರಲಿಕ್ಕೆ ಸಾಕು ಎಂಬ ಅನಿಸಿಕೆ ನಟನ ಈ ಮಾತಿನಿಂದ ಈಗ ಬಯಲಾಗಿದೆ.
ನನ್ನ ತಾಯಿ, ತಂಗಿ ಪೂರ್ಣಿಮಾ, ನನ್ನ ಕಸಿನ್ಸ್ ಎಲ್ಲರಿಗೂ ಕ್ಯಾನ್ಸರ್ ಇತ್ತು, ಅದಕ್ಕಾಗಿಯೇ ನನಗೆ ಕ್ಯಾನ್ಸರ್ ಬಂದಿದೆ ಎಂದು ತಿಳಿದಾಗ ಇನ್ನೇನು ಮಾಡೋಕೆ ಆಗತ್ತೆ ಎಂದುಕೊಂಡುಬಿಟ್ಟಿದ್ದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.













