Home News ರಾಜ್ಯದಲ್ಲಿ ನಡೆಯಿತೊಂದು ಆನೆಯ ಕಿಡ್ನಾಪ್ ಪ್ರಯತ್ನ !! | ಸರ್ಕಸ್ ಕಂಪನಿಗಾಗಿ ಮಠದ ಆನೆಯನ್ನೇ ಕದ್ದರೇ...

ರಾಜ್ಯದಲ್ಲಿ ನಡೆಯಿತೊಂದು ಆನೆಯ ಕಿಡ್ನಾಪ್ ಪ್ರಯತ್ನ !! | ಸರ್ಕಸ್ ಕಂಪನಿಗಾಗಿ ಮಠದ ಆನೆಯನ್ನೇ ಕದ್ದರೇ ಅರಣ್ಯಾಧಿಕಾರಿ ??

Hindu neighbor gifts plot of land

Hindu neighbour gifts land to Muslim journalist

ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ ಎಂಬ ಮಾತಿದೆ. ಒಂದು ವೇಳೆ ಅಡಿಕೆಯನ್ನಾದರೂ ಕದಿಯಬಹುದು, ಆದರೆ ಆನೆಯನ್ನು ಕದಿಯುವುದು ಹೇಗೆ?? ಇಂತಹ ಪ್ರಯತ್ನ ಇಲ್ಲಿಯವರೆಗೆ ಎಲ್ಲೂ ನಡೆದಿಲ್ಲ. ಆದರೆ ಇಲ್ಲೊಂದು ಕಡೆ ಆ ಪ್ರಯತ್ನವೂ ನಡೆದು ಹೋಗಿದೆ. ಹೌದು, ತುಮಕೂರಿನ ಮಠವೊಂದರ ಆನೆಯನ್ನು ಕದಿಯಲು ಅರಣ್ಯ ಅಧಿಕಾರಿಗಳೇ ಯತ್ನಿಸಿದ್ದಾರೆ ಗಂಭೀರ ಆರೋಪ ಕೇಳಿಬಂದಿದೆ.

ಕರಿಬಸವಸ್ವಾಮಿ ಮಠದಲ್ಲಿ 29 ವರ್ಷದಿಂದ ಒಂದು ಹೆಣ್ಣಾನೆಯನ್ನು ಸಾಕಿದ್ದರು. ಇದು ಯಾರಿಗೂ ಉಪಟಳ ಕೊಡದೆ ತುಂಬಾ ಸೌಮ್ಯ ಸ್ವಭಾವದ್ದಾಗಿತ್ತು. ಹಾಗಾಗಿ ಇಂತಹ ಆನೆಯನ್ನ ಸರ್ಕಸ್ ಕಂಪನಿಗಳಲ್ಲಿ ಬಳಸಿಕೊಂಡ ಒಳ್ಳೆಯ ರೆಸ್ಪಾನ್ಸ್ ಸಿಗುತ್ತೆ ಎಂದು ಅರಣ್ಯ ಅಧಿಕಾರಿಗಳ ಈ ಆನೆಯನ್ನು ಕದಿಯಲು ಯತ್ನಿಸಿದ್ದಾರೆ ಎಂದು ಮಠದ ಸಿಬ್ಬಂದಿ ಆರೋಪಿಸಿದ್ದಾರೆ.

ಕರಿಬಸವಸ್ವಾಮಿ ಮಠದ ಆನೆಯ ಹೊಟ್ಟೆಯಲ್ಲಿ ಗಡ್ಡೆ ಇದೆ. ಬನ್ನೇರಘಟ್ಟದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಅರಣ್ಯ ಅಧಿಕಾರಿಗಳು ಬಳ್ಳಾರಿಯಿಂದ ಕರೆದುಕೊಂಡು ಹೋಗಿದ್ದರು. ಮಾರ್ಗಮಧ್ಯೆ ದಾಬಸ್ ಪೇಟೆ ಬಳಿ ಆನೆಯ ಮಾವುತರ ಮೇಲೆ ಹಲ್ಲೆ ಮಾಡಿ ಅವರನ್ನು ಕೆಳಗಿಳಿಸಿ ಆನೆಯ ಅಪಹರಣಕ್ಕೆ ಯತ್ನಿಸಿದ್ದಾರೆ. ಬಳಿಕ ಕುಣಿಗಲ್‌ನ ಹಳ್ಳಿಯೊಂದರಲ್ಲಿ ಆನೆಯನ್ನು ಬಚ್ಚಿಟ್ಟಿದ್ದರು ಎಂದು ಮಾವುತರು ದೂರಿದ್ದಾರೆ.

ಸದ್ಯ ಈ ಆನೆ ತುಮಕೂರು ಹೊರವಲಯದಲ್ಲಿ ಪತ್ತೆಯಾಗಿದ್ದು, ಲಾರಿ ಮೂಲಕ ಆನೆಯನ್ನು ವಾಪಸ್ ಮಠಕ್ಕೆ ಕರೆತರಲಾಗಿದೆ.