Home News ಒಂದೇ ದಿನ 9 ಲಕ್ಷ ಕೋಟಿ ಕಮಾಯಿ: ಮಸ್ಕ್‌ ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ...

ಒಂದೇ ದಿನ 9 ಲಕ್ಷ ಕೋಟಿ ಕಮಾಯಿ: ಮಸ್ಕ್‌ ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ ಎಲಿಸನ್, ಯಾರೀತ ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

Washington: ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಏಕಾಏಕಿ ಸಂಚಲನ ಉಂಟಾಗಿದೆ. ಜಗತ್ತಿನ ಅತ್ಯಂತ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್’ರನ್ನು ಸದ್ಯದಲ್ಲಿ ಹಿಂದಿಕ್ಕುವುದು ಅಸಾಧ್ಯ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಟೆಕ್ ದೈತ್ಯ, ಒರಾಕಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಲ್ಯಾರಿ ಎಲಿಸನ್‌. ಈ ಮೂಲಕ ಜಗತ್ತಿನ ಅತಿ ಶ್ರಿಮಂತರ ಪಟ್ಟಿಯಲ್ಲಿ ಮಸ್ಕ್‌’ರ ಸುಮಾರು ಒಂದು ವರ್ಷದ ಅಧಿಪತ್ಯಕ್ಕೆ ತೆರೆಬಿದ್ದಿದೆ. ಇದೇ ಮೊತ್ತ ಮೊದಲ ಬಾರಿಗೆ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ, ಈ ಸ್ಥಾನಕ್ಕೇರಲು ನಡೆದ ಬೆಳವಣಿಗೆ ಮಾತ್ರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಒರಾಕಲ್ ತನ್ನ ತ್ರೈಮಾಸಿಕ ಫಲಿತಾಂಶವು ನಿರೀಕ್ಷೆಗಿಂತ ತುಂಬಾ ಉತ್ತಮವಾಗಿ ಬಂದ ಹಿನ್ನೆಲೆಯಲ್ಲಿ, ಲ್ಯಾರಿ ಎಲಿಸನ್ ರ ಸಂಪತ್ತು ಒಂದೇ ದಿನದಲ್ಲಿ ಬರೋಬ್ಬರಿ 101 ಬಿಲಿಯನ್ ಡಾಲರ್‌ಗೆ ನೆಗೆದಿದೆ. ಅಂದರೆ ಅವರ ಸಂಪತ್ತಿನಲ್ಲಿ ಸುಮಾರು 8.9 ಲಕ್ಷ ಕೋಟಿ ರೂ.ಗಳಷ್ಟು ಏರಿಕೆ ಕಂಡಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಎಲಿಸನ್ ಅವರ ಈಗಿನ ಒಟ್ಟು ಸಂಪತ್ತು 393 ಬಿಲಿಯನ್ ಡಾಲರ್‌ಗಳಿಗೆ ಉಬ್ಬಿಕೊಂಡಿದೆ. ಆ ಮೂಲಕ 385 ಬಿಲಿಯನ್ ಡಾಲರ್ ಸಂಪತ್ತಿನ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ದಾಖಲಾದ ಅತಿದೊಡ್ಡ ಏಕದಿನದ ಏರಿಕೆಯಾಗಿದೆ ಅನ್ನೋದು ಗಮನಾರ್ಹ.

ಒರಾಕಲ್ ಕಂಪನಿಯ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ವ್ಯವಹಾರ ಇನ್ನಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಪರಿಣಾಮ ಕಂಪನಿಯ ಷೇರುಗಳು ಒಂದೇ ದಿನದಲ್ಲಿ ಬರೋಬ್ಬರಿ 41 ಪ್ರತಿಶತ ಏರಿಕೆ ಕಂಡಿವೆ. ಇದು ಈ ಕಂಪನಿಯ ಇತಿಹಾಸದಲ್ಲಿಯೇ ಅತಿದೊಡ್ಡ ಏಕದಿನದ ಜಿಗಿತ. ಅಷ್ಟೇ ಅಲ್ಲ, ಇದೊಂದು ವಿಶಿಷ್ಟ ಏರಿಕೆ ಕೂಡಾ. ಯಾವುದೇ ಬೃಹತ್ ಕಂಪನಿಯೊಂದರ ಷೇರು ಬೆಲೆಯಲ್ಲಾದ ಅಪರೂಪದ ಏರಿಕೆ ಇದಾಗಿದೆ. ಇದರ ಪರಿಣಾಮ ಎಲಿಸನ್‌ ಆಸ್ತಿಯಲ್ಲೂ ಏರಿಕೆ ಕಂಡು ಬಂದಿದೆ.

ಒರಾಕಲ್‌ ಅಧ್ಯಕ್ಷ ಮತ್ತು ಸಿಇಒ ಆಗಿರುವ 81 ವರ್ಷದ ಎಳಿಸನ್ ಅವರ ಹೆಚ್ಚಿನ ಸಂಪತ್ತು ಇದೇ ಷೇರುಗಳಿಂದ ಬಂದಿದೆ. 2021ರಲ್ಲಿ ಮೊದಲ ಬಾರಿಗೆ ಈ ಸ್ಥಾನಕ್ಕೇರಿದ್ದರು ಮಸ್ಕ್. ಆದರೆ ಮಧ್ಯೆ ಒಮ್ಮೆ ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಬರ್ನಾರ್ಡ್ ಅರ್ನಾಲ್ಟ್ರವರು ಮಸ್ಕ್’ರನ್ನು ಹಿಂದಿಕ್ಕಿದ್ದರು. ಆದರೆ ಕಳೆದ ವರ್ಷ ಮತ್ತೆ ಅಗ್ರಸ್ಥಾನಕ್ಕೇರಿದ್ದ ಮಸ್ಕ್, ಇದೀಗ ತಮ್ಮ ಸ್ಥಾನವನ್ನು ಒಂದೇ ದಿನ 101 ಬಿಲಿಯನ್ ಗಳಿಸಿದ ಎಲಿಸನ್‌ಗೆ ಬಿಟ್ಟುಕೊಟ್ಟಿದ್ದಾರೆ.