Home latest ಮಂಗಳಮುಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮದ್ಯದ ನಶೆಯಲ್ಲಿದ್ದ ಯುವಕ | ಕೋಪಗೊಂಡ ಮಂಗಳಮುಖಿಯಿಂದ ಸಾರ್ವಜನಿಕವಾಗಿಯೇ ಧರ್ಮದೇಟು

ಮಂಗಳಮುಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮದ್ಯದ ನಶೆಯಲ್ಲಿದ್ದ ಯುವಕ | ಕೋಪಗೊಂಡ ಮಂಗಳಮುಖಿಯಿಂದ ಸಾರ್ವಜನಿಕವಾಗಿಯೇ ಧರ್ಮದೇಟು

Hindu neighbor gifts plot of land

Hindu neighbour gifts land to Muslim journalist

ಮದ್ಯದ ನಶೆಯಲ್ಲಿದ್ದ ಯುವಕನೋರ್ವ ಮಂಗಳಮುಖಿಯೊಂದಿಗೆ ಅಸಭ್ಯ ವರ್ತಿಸಿದ್ದು, ಕೋಪಗೊಂಡ ಮಂಗಳಮುಖಿ ಸಾರ್ವಜನಿಕವಾಗಿ ಧರ್ಮದೇಟು ನೀಡಿದ ಘಟನೆ ಬೆಳಗಾವಿಯ ಜಿಲ್ಲೆಯ ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದ ಬಳಿ ನಡೆದಿದೆ.

ರಾತ್ರಿ ಮನೆಗೆ ಮರಳುತ್ತಿದ್ದ ಮಂಗಳಮುಖಿಗೆ ಅವಾಚ್ಯವಾಗಿ ನಿಂದಿಸಿ ಯುವಕ ಅಸಭ್ಯ ವರ್ತನೆ ಮಾಡಿದ್ದಾನೆ. ಇದನ್ನ ಸಹಿಸಿಕೊಳ್ಳದ ಮಂಗಳಮುಖಿ ಕೋಪಗೊಂಡು ಕೂಡಲೇ ಸಾರ್ವಜನಿಕವಾಗಿಯೇ ಧರ್ಮದೇಟು ನೀಡಿದ್ದಾರೆ. ಅಸಭ್ಯವಾಗಿ ವರ್ತಿಸಿದ ಯುವಕ ದೇಗುಲಹಳ್ಳಿ ಗ್ರಾಮದವನಾಗಿದ್ದು, ಈತನನ್ನು ಕೂಡಲೇ ಕಿತ್ತೂರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾತ್ರಿಯಾದರೆ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಮಹಿಳೆಯರು, ಮಕ್ಕಳು, ಮಂಗಳಮುಖಿಯರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಇನ್ನಾದರೂ ಪುಂಡರ ವಿರುದ್ಧ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.