Home News Mangalore: ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕಂಠ ಪೂರ್ತಿ ಕುಡಿದು ಬಂದ ವೈದ್ಯ! ವಿಡಿಯೋ ವೈರಲ್

Mangalore: ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕಂಠ ಪೂರ್ತಿ ಕುಡಿದು ಬಂದ ವೈದ್ಯ! ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Mangalore: ಮಂಗಳೂರಿನ (Mangalore)AJ ಖಾಸಗಿ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಯುವ ಪಿಜಿ ವೈದ್ಯ ರಾತ್ರಿ ವೇಳೆ ಕಂಠ ಪೂರ್ತಿ ಕುಡಿದು ಕರ್ತವ್ಯಕ್ಕೆ ಹಾಜರಾದ ಘಟನೆ ನಡೆದಿದ್ದು ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ರಾತ್ರಿ ವೇಳೆ ಕುಡಿದು ಬಂದಿರುವ ವೈದ್ಯನನ್ನು ರೋಗಿಗಳ ಸಂಬಂಧಿಕರು ಗಮನಿಸಿ, ವಿಡಿಯೋ ಮಾಡಿ ಪ್ರಶ್ನೆ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವ ವೈದ್ಯ ಜಿಟಿ ಜಿಟಿ ಮಳೆಯ ಮದ್ಯೆ ಎಲ್ಲೊ ಕುಡಿದು ತೂರಾಡಿ ಎಲ್ಲಿಯೋ ಬಿದ್ದು ಬಟ್ಟೆಯೆಲ್ಲಾ ಕೆಸರು ಮಣ್ಣು ಮೆತ್ತಿಕೊಂಡು, ದೇಹದ ಮೇಲೆ ಕಂಟ್ರೋಲ್ ಇಲ್ಲದೆ ಡಾಕ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಒಳಗಿನ ಮೂಲೆಯಲ್ಲಿ ಕುಳಿತಿದ್ದ  ರೋಗಿಯ ಸಂಬಂಧಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪ್ರಶ್ನಿಸಿದ್ದಾರೆ. ಸೆಕ್ಯುರಿಟಿ ಬಳಿ ಕೇಳಿದಾಗ, ಆತ ಡ್ಯೂಟಿ ಡಾಕ್ಟರ್ ಎಂದು ಹೇಳುವುದು ವಿಡಿಯೋದಲ್ಲಿದೆ. ನೀವು ಯಾರು ಎಂದು ಕೇಳಿದಾಗ ಅತ ಕಷ್ಟದಲ್ಲಿ ನಾನು ಇಲ್ಲಿನ ಡಾಕ್ಟರ್ ಎಂದು ಹೇಳಿದ್ದಾನೆ. ಆತನಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಕೂಡಾ ಇರಲಿಲ್ಲ ಎಂದು ಕಾಣುತ್ತದೆ. ಕೊನೆಗೆ ಆತನನ್ನು ಸೆಕ್ಯೂರಿಟಿ ಗಾರ್ಡ್ ಹೊರಗಡೆ ಕಳುಹಿಸಿದ್ದಾರೆ.

ಈ ಘಟನೆ ಮಂಗಳೂರು ನಗರದ ಪ್ರತಿಷ್ಠಿತ ಎ ಜೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ನಡೆದಿದ್ದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುತ್ತಿದ್ದು ಮೆಡಿಕಲ್ ಕಾಲೇಜು ಆಸ್ಪತ್ರೆಯ ರೋಗಿಗಳ ಗತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.