Home News DRDO Scholarship: ಈ ವರ್ಷದ ಕೊನೆಯ ಸ್ಕಾಲರ್‌ಶಿಪ್‌ | ವಿದ್ಯಾರ್ಥಿಗಳಿಗೆ ದೊರೆಯುತ್ತೆ 1 ಲಕ್ಷ ರೂಪಾಯಿ

DRDO Scholarship: ಈ ವರ್ಷದ ಕೊನೆಯ ಸ್ಕಾಲರ್‌ಶಿಪ್‌ | ವಿದ್ಯಾರ್ಥಿಗಳಿಗೆ ದೊರೆಯುತ್ತೆ 1 ಲಕ್ಷ ರೂಪಾಯಿ

Hindu neighbor gifts plot of land

Hindu neighbour gifts land to Muslim journalist

ಮಗು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇಳಿರುತ್ತೇವೆ. ಹಾಗೆಯೇ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪೂರೈಸಿದರೆ ಮುಂದೆ ಭವ್ಯ ಭಾರತದ ಅಭಿವೃದ್ಧಿಗೆ ಕಾರಣರಾಗಬಲ್ಲರು. ಅಲ್ಲದೆ ಶಿಕ್ಷಣ ಎಂಬುದು ವಿದ್ಯಾರ್ಥಿಗೆ ಹೊರೆ ಆಗಿರಬಾರದು. ಆ ಕುರಿತಾಗಿ ಮಕ್ಕಳ ಬಗೆಗಿನ ಹೆಚ್ಚಿನ ಗಮನ ಹರಿಸಲು ಸರ್ಕಾರ ನಿರ್ಧರಿಸಿದೆ. ಇಂದಿನ ಮಕ್ಕಳು ಮುಂದಿನ ಭವಿಷ್ಯ ರೂಪಿಸುವವರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ DRDO ಸ್ಕಾಲರ್‌ಶಿಪ್ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ಈ ವಿದ್ಯಾರ್ಥಿ ಯೋಜನೆಯು ಪದವಿಪೂರ್ವ (BE/B.Tech) ಮೊದಲ ವರ್ಷದಲ್ಲಿ ಅಥವಾ ಸ್ನಾತಕೋತ್ತರ (M.Tech/ME) ಕೋರ್ಸ್‌ಗಳಾಗಿದ್ದರೆ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ.

DRDO ವಿದ್ಯಾರ್ಥಿವೇತನ 2022 ಪಡೆಯಲು ಇರಬೇಕಾದ ಅರ್ಹತೆಗಳು :

  • ಭಾರತೀಯ ಪ್ರಜೆಯಾಗಿರಬೇಕು.
  • ಏರೋಸ್ಪೇಸ್ ಎಂಜಿನಿಯರಿಂಗ್ / ಏರೋನಾಟಿಕಲ್ ಎಂಜಿನಿಯರಿಂಗ್ / ಬಾಹ್ಯಾಕಾಶ ಎಂಜಿನಿಯರಿಂಗ್ ಮತ್ತು ರಾಕರಿ / ಏರ್‌ಕ್ರಾಫ್ಟ್ ಎಂಜಿನಿಯರಿಂಗ್ / ಏವಿಯಾನಿಕ್ಸ್ ಸ್ಟ್ರೀಮ್‌ನಲ್ಲಿ ಯುಜಿ / ಪಿಜಿ ಕೋರ್ಸ್​ ಮಾಡುತ್ತಿರುವ ಹುಡುಗಿಯರಾಗಿರಬೇಕು.

DRDO ಸ್ಕಾಲರ್‌ಶಿಪ್ 2022 ಪ್ರಯೋಜನ
UG ವಿದ್ಯಾರ್ಥಿಗಳಿಗೆ INR 1,20,000 ಹಣ ದೊರೆಯುತ್ತದೆ. ನೀವು ಯು.ಜಿ ಅಥವಾ ಪಿ.ಜಿ ಯಾವ ಕೋರ್ಸ್​ ಮಾಡುತ್ತಿದ್ದರೂ ಸಹ ಪ್ರಥಮ ವರ್ಷದವರಾಗಿರಬೇಕು. ಆಗ ಮಾತ್ರ ಈ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತದೆ.

DRDO ವಿದ್ಯಾರ್ಥಿವೇತನ 2022 ಪಡೆಯಲು ಬೇಕಾಗುವ ದಾಖಲೆಗಳು :

  • ಪ್ರಮಾಣಪತ್ರ.
  • ಆಧಾರ್ ಕಾರ್ಡ್
  • ಪ್ರವೇಶ ಪುರಾವೆ
  • ಶುಲ್ಕದ ವಿವರಗಳು
  • ಸಂಸ್ಥೆಯಿಂದ ಪ್ರಮಾಣಪತ್ರ
  • ನಿಮ್ಮ ಉಲ್ಲೇಖಕ್ಕಾಗಿ ಅಂತಿಮವಾಗಿ ಸಲ್ಲಿಸಿದ ಅಪ್ಲಿಕೇಷನ್​
  • ಈ ಮೇಲೆ ನೀಡಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಕಲರ್​ ಫೋಟೋ
    ಈ ಮೇಲೆ ನೀಡಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.

DRDO ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವ ವಿಧಾನ :
DRDO ವಿದ್ಯಾರ್ಥಿವೇತನ ಅಧಿಕೃತ ವೆಬ್‌ಸೈಟ್ ಅಂದರೆ drdo.gov.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಕ್ರಮಗಳು :

  • ಆನ್​ಲೈನ್​ ಅಪ್ಲಿಕೇಷನ್​ ತೆರೆಯಿರಿ.
  • ನೋಂದಣಿ ಫಾರ್ಮ್ ಭರ್ತಿ ಮಾಡಿ.
  • ಎಲ್ಲಾ ಪ್ರಮುಖ ದಾಖಲೆಗೂ ಸಹ ನಿಮ್ಮ ಇತ್ತೀಚಿನ ಭಾವ ಚಿತ್ರ ಲಗತ್ತಿಸಿ.
  • ಅರ್ಜಿ ಸಲ್ಲಿಸಿದ ಮೇಲೆ ಸೇವ್​ ಮಾಡಿ
  • ಸೇವ್​ ಮಾಡಿರುವ ದಾಖಲೆಯ ಹಾರ್ಡ್​ ಕಾಫಿ ತೆಗೆದುಕೊಳ್ಳಿ.

ಈ ವರ್ಷದ ಅಂತಿಮ ವಿದ್ಯಾರ್ಥಿವೇತನ ಇದಾಗಿದ್ದು. ನೀವು ಈ ವರ್ಷ ಯಾವುದೇ ವಿದ್ಯಾರ್ಥಿವೇತನಕ್ಕೂ ಅರ್ಜಿ ಸಲ್ಲಿಸದೇ ಇದ್ದರೆ ಖಂಡಿತವಾಗಿ ಈ ಸ್ಕಾಲರ್ಶಿಪ್​ಗೆ ಅರ್ಜಿ ಸಲ್ಲಿಸಿ. 1ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಅದಲ್ಲದೆ ಡಿಆರ್‌ಡಿಒ ರಕ್ಷಣಾ ವೃತ್ತಿಯನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಹುಡುಗಿಯರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಅರ್ಹವಾಗಿರುತ್ತದೆ ಎಂದು ಮಾಹಿತಿ ನೀಡಲಾಗಿದೆ.