Home News Viral Post : ‘ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ’ – ಮತ್ತೆ ಪೋಸ್ಟ್ ಹಾಕಿ...

Viral Post : ‘ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ’ – ಮತ್ತೆ ಪೋಸ್ಟ್ ಹಾಕಿ ಕನ್ನಡಿಗರನ್ನು ಕೆಣಕಿದ ನಾರ್ಥಿಗಳು

Hindu neighbor gifts plot of land

Hindu neighbour gifts land to Muslim journalist

Viral Post: ಕನ್ನಡಿಗರನ್ನು ಸದಾ ಅವಮಾನ, ಅವಹೇಳನ ಮಾಡುವುದು ಕೆಲವರಿಗೆ ಮೈಗೆ ಅಂಟಿರುವ ರೋಗವಾಗಿದೆ. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, “ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ” ಎಂದು ನಾರ್ಥಿಗಳು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಕನ್ನಡಿಗರನ್ನು ಗೇಲಿ ಮಾಡುತ್ತಿದ್ದಾರೆ.

 

ಹೌದು, ಎಕ್ಸ್‌ನಲ್ಲಿ (ಟ್ವಿಟರ್‌) ಭಾರತದ ಪ್ರೋಟೀನ್ ಸೇವನೆ ಕುರಿತಾದ ರಾಜ್ಯವಾರು ಸರಾಸರಿ ಪಟ್ಟಿ ಹೊಂದಿರುವ ಫೋಟೋ ಹಂಚಿಕೊಳ್ಳಲಾಗಿದೆ. ಭಾರತದ ಜನರು ಪ್ರತಿದಿನ ಸರಾಸರಿ ಎಷ್ಟು ಪ್ರೋಟೀನ್ ಸೇವಿಸುತ್ತಿದ್ದಾರೆ ಎಂಬುದರ ಬಗ್ಗೆ ಆ ನಕ್ಷೆ ಇದ್ದು, ಇದರಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರೋಟೀನ್ ಸೇವನೆ ಪ್ರಮಾಣ ಕಡಿಮೆ ಇದೆ ಎಂದು ಸೂಚಿಸಿದೆ. ಈ ಫೋಟೋ ಹಂಚಿಕೊಂಡಿರುವ ಕೆಲ ಉತ್ತರ ಭಾರತೀಯರು, ಕನ್ನಡಿಗರನ್ನು ಇದೇ ವಿಚಾರವಾಗಿ ಕಾಮೆಂಟ್‌ಗಳಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ.

 

“cobb” ಖಾತೆಯಲ್ಲಿ ‘ಕನ್ನಡಿಗರಿಗಿಂತ ನಾಯಿಗಳು ಉತ್ತಮ ಜೀವನ ನಡೆಸುತ್ತವೆ..’ ಎಂದು ಗೇಲಿ ಮಾಡಿದ್ದಾನೆ. ‘ಬೆಂಗಳೂರಿನ ಬೀದಿ ನಾಯಿಗಳು ಕನ್ನಡಿಗರಿಗಿಂತ ಹೆಚ್ಚು ಪ್ರೋಟೀನ್ ತಿನ್ನುತ್ತವೆ ಎಂದು ನನಗೆ ಖಚಿತವಾಗಿದೆʼ ಎಂದು ಒಬ್ಬ ಹೇಳಿದ್ದಾನೆ. ಉತ್ತರ ಭಾರತೀಯರೆಲ್ಲ ಈ ಪೋಸ್ಟ್‌ಗೆ ಕಾಮೆಂಟ್‌ ಮಾಡುತ್ತಿದ್ದು, ಕನ್ನಡಿಗರನ್ನು ಅಣಕಿಸುತ್ತಿದ್ದಾರೆ. ಆ ಪೋಸ್ಟ್‌ಗೆ ಹಲವು ಮಂದಿ ಕಾಮೆಂಟ್‌ ಮಾಡಿ, ಬೆಂಗಳೂರು, ಕರ್ನಾಟಕ ಹಾಗೂ ಕನ್ನಡಿಗರನ್ನು ಗೇಲಿ ಮಾಡಿದ್ದಾರೆ.