Home News ನಾಯಿ ಜೊತೆ ಸಪ್ತಪದಿ ತುಳಿದು, ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡ ಮಹಿಳೆ!! | ಬಾಲ ಅಲ್ಲಾಡಿಸುವ...

ನಾಯಿ ಜೊತೆ ಸಪ್ತಪದಿ ತುಳಿದು, ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡ ಮಹಿಳೆ!! | ಬಾಲ ಅಲ್ಲಾಡಿಸುವ ಮೂಲಕ ಮದುವೆಗೆ ಒಪ್ಪಿಗೆ ನೀಡಿತಂತೆ ಆ ಶ್ವಾನ

Hindu neighbor gifts plot of land

Hindu neighbour gifts land to Muslim journalist

ಎರಡು ಜೀವಗಳು ಬೆಸೆಯುವಂತಹ ವಿಶೇಷ ಬಂಧನವೇ ಮದುವೆ. ಮದುವೆ ಎನ್ನುವುದು ಹುಡುಗ ಹಾಗೂ ಹುಡುಗಿಯ ಜೀವನದ ಪ್ರಮುಖ ಘಟ್ಟ. ಇದು ಜೀವಮಾನವಿಡಿ ಎರಡು ಜೀವಗಳನ್ನು ಜೊತೆಯಾಗಿ ಇಡುವಂತದ್ದು. ಹಾಗಾಗಿ ಮದುವೆ ಎಂಬ ಬಂಧನಕ್ಕೆ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ಸ್ಥಾನವಿದೆ.

ಹಾಗೆಯೇ ಪ್ರತಿಯೊಬ್ಬರಿಗೂ ತನ್ನ ಮದುವೆ ಬಗ್ಗೆ ನೂರಾರು ಕನಸುಗಳಿರುತ್ತದೆ. ಈ ವಿಚಾರದಲ್ಲಿ ಯುವತಿಯರ ಆಸೆ ಆಕಾಂಕ್ಷೆಗಳಿಗೆ ಮಿತಿಯೇ ಇಲ್ಲ. ತಾನು ಮದುವೆ ಆಗುವ ಹುಡುಗ ಹಾಗಿರಬೇಕು, ಹೀಗಿರಬೇಕು ಎಂದೆಲ್ಲ ದೇವರಿಗೆ ಹರಿಕೆ ಕಟ್ಟಿದ್ದನ್ನೂ ನೋಡಿರುತ್ತೇವೆ. ಅದಲ್ಲದೆ ಮದುವೆ ಹೀಗಾಗಬೇಕು, ಹಾಗಾಗಬೇಕು ಎಂಬ ಆಕಾಂಕ್ಷೆಗಳಿರುವುದೂ ಸಹಜ.

ಇಂತಹ ಪವಿತ್ರ ಬಂಧನ ಇತ್ತೀಚಿನ ದಿನಗಳಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ಮಾತ್ರ ಅತ್ಯಂತ ನೋವಿನ ಸಂಗತಿ. ಅದಕ್ಕೆ ಉದಾಹರಣೆಯಂತಿದೆ ಈ ಘಟನೆ. ಇಲ್ಲೊಬ್ಬಳು ಮಹಿಳೆ ತನ್ನ ಗಂಡನಿಗೆ ವಿಚ್ಛೇದನ ನೀಡಿ ತಾನು ಸಾಕಿದ್ದ ನಾಯಿಯನ್ನೇ ಮದುವೆ ಆಗಿದ್ದಾಳೆ.

ಹೌದು, ಇದು ವಿಚಿತ್ರ ಎನ್ನಿಸಿದರೂ ಸತ್ಯ. ನಾಯಿಯನ್ನು ಮದುವೆ ಆದ ಮಹಿಳೆ ಹೆಸರು ಅಮಂಡಾ ರಾಕ್ಟರ್ಸ್. ಇದಕ್ಕೂ ಮೊದಲು ವ್ಯಕ್ತಿಯೊಬ್ಬರ ಜೊತೆ ಅಮಂಡಾ ರಾಡ್ಡರ್ಸ್‌ಳ ಮದುವೆ ಆಗಿತ್ತು. ಇದೀಗ ಗಂಡನಿಗೆ ಡಿವೋರ್ಸ್ ಕೊಟ್ಟು ನಾಯಿ ಜೊತೆ ಕ್ರೈಸ್ತ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾಳೆ.

ನಾಯಿ ಜೊತೆ ಮದುವೆ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಅಮಂಡಾ ರಾಡ್ಡರ್ಸ್, ನಾನು ನನ್ನ ಸಂಗಾತಿಯಿಂದ ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗಲಿಲ್ಲ. ನನ್ನ ಮುದ್ದಿನ ನಾಯಿ ಶಬಾ ಯಾವಾಗಲೂ ನನ್ನ ಸಂತೋಷವನ್ನೇ ಬಯಸುತ್ತದೆ. ಹೀಗಾಗಿ ನಾನು ನನ್ನ ಮದುವೆ ವಿಷಯವನ್ನು ಅದರ ಬಳಿ ಹೇಳಿಕೊಂಡೆ. ಬಾಲ ಅಲ್ಲಾಡಿಸಿ ನಾಯಿ ಒಪ್ಪಿಗೆ ಕೊಟ್ಟಿತು ಎಂದಿದ್ದಾರೆ. ಒಟ್ಟಿನಲ್ಲಿ ಅಮಂಡಾ ರಾಡ್ಡರ್ಸ್ ನಾಯಿ ಜೊತೆ ಮದುವೆ ಆಗುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಈ ಹಿಂದೆ ಭಾರತದಲ್ಲಿಯೇ 18 ವರ್ಷದ ಯುವತಿಯೊಬ್ಬಳ ಮದುವೆ ಕೂಡ ನಾಯಿ ಜೊತೆ ಆಗಿತ್ತು. ಆದರೆ ಈ ಮದುವೆ ಆಗಿದ್ದು ಮಾತ್ರ ಯುವತಿ ಜಾತಕದಲ್ಲಿದ್ದ ದೋಷವನ್ನು ಸರಿ ಮಾಡಿಕೊಳ್ಳಲು. ಜಾರ್ಖಂಡ್ ರಾಜ್ಯದ ಮಂಗಳಿಮುಂಡ ಎಂಬಾಕೆ ಮೊದಲು ಸಾಕು ನಾಯಿ ಜೊತೆ ಮದುವೆ ಮಾಡಿಕೊಂಡಿದ್ದಳು. ಬಳಿಕ ಯುವಕನೊಂದಿಗೆ ಸಪ್ತಪದಿ ತುಳಿದಿದ್ದಳು.