Home News Rape Case: ಭಯಾನಕ ಘಟನೆ – ಅಪ್ರಾಪ್ತರು, ಮುದುಕಿಯರು ಎನ್ನದೆ ಬರೋಬ್ಬರಿ 87 ಮಹಿಳೆಯರ ಮೇಲೆ...

Rape Case: ಭಯಾನಕ ಘಟನೆ – ಅಪ್ರಾಪ್ತರು, ಮುದುಕಿಯರು ಎನ್ನದೆ ಬರೋಬ್ಬರಿ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ವೈದ್ಯ !!

Hindu neighbor gifts plot of land

Hindu neighbour gifts land to Muslim journalist

Rape Case: 14 ರಿಂದ 67 ವರ್ಷ ವಯಸ್ಸಿನ 87 ಮಹಿಳೆಯರ ಮೇಲೆ ವೈದ್ಯನೊಬ್ಬ ಅತ್ಯಾಚಾರ ಎಸಗಿರುವಂತಹ ಅಘತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ನಾರ್ವೆಯಲ್ಲಿ(Norway )20 ವರ್ಷಗಳ ಅವಧಿಯಲ್ಲಿ ವೈದ್ಯ ಈ ಕೃತ್ಯ ಎಸಗಿದ್ದಾನೆ. ಶಸ್ತ್ರಚಿಕಿತ್ಸೆ ಮಾಡುವ ನೆಪದಲ್ಲಿ ಅವರ ಮನೆಗಳಲ್ಲಿ ಬೆತ್ತಲೆ ವಿಡಿಯೋ ಚಿತ್ರೀಕರಿಸಿದ ಆರೋಪ ಕೂಡ ಕೇಳಿಬಂದಿದೆ. ಈ ಪ್ರಕರಣವನ್ನು ನಾರ್ವೆಯ ಇತಿಹಾಸದಲ್ಲಿ ಅತಿದೊಡ್ಡ ಲೈಂಗಿಕ ದೌರ್ಜನ್ಯ ಹಗರಣ ಎಂದು ಹೇಳಲಾಗಿದೆ.

ಪುರಸಭೆಯ ಮಾಜಿ ಅಧೀಕ್ಷಕರಾಗಿರು 55 ವರ್ಷದ ಅರ್ನೆ ಬೈ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಲೈಂಗಿಕ ಸಂಪರ್ಕ ಸಾಧಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಅತ್ಯಾಚಾರಕ್ಕೊಳಗಾದಾಗ ಅತ್ಯಂತ ಹಿರಿಯ ಮಹಿಳೆಗೆ 67 ವರ್ಷ ವಯಸ್ಸಾಗಿತ್ತು ಮತ್ತು ಅತ್ಯಂತ ಕಿರಿಯ ಬಲಿಪಶುಗಳು 14 ಮತ್ತು 15 ವರ್ಷ ವಯಸ್ಸಿನವರಾಗಿದ್ದರು ಎಂದು ವರದಿ ತಿಳಿಸಿದೆ.

ಸಧ್ಯ ಅಧಿಕಾರ ದುರುಪಯೋಗ ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡಿದ್ದು, 21 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ರೋಗಿಗಳಿಗೆ ತಿಳಿಯದಂತೆ ನಡೆಸಿದ ಸ್ತ್ರೀರೋಗ ಪರೀಕ್ಷೆಗಳ ರೆಕಾರ್ಡಿಂಗ್ಗಳನ್ನು ಒಳಗೊಂಡಿರುವ 6,000 ಗಂಟೆಗಳ ವೀಡಿಯೊ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.