Home latest Ayodhya rama mandir: ಬರೀ 11 ದಿನದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಸಂಗ್ರವಹಾದ ಕಾಣಿಕೆ ಎಷ್ಟು...

Ayodhya rama mandir: ಬರೀ 11 ದಿನದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ಸಂಗ್ರವಹಾದ ಕಾಣಿಕೆ ಎಷ್ಟು ಗೊತ್ತಾ?! ಇದನ್ನು ನೀವು ನಂಬಲೂ ಸಾಧ್ಯವಿಲ್ಲ

Ayodhya rama mandir

Hindu neighbor gifts plot of land

Hindu neighbour gifts land to Muslim journalist

Ayodhya rama mandir: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲಕ ರಾಮನ (Balak Ram) ಪ್ರಾಣ ಪ್ರತಿಷ್ಠೆಯಾಗಿ 11 ದಿನಗಳು ಸಂದಿವೆ. ಈ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಬರೀ 11 ದಿನಕ್ಕೆ ಸುಮಾರು 11 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಮಂದಿರದ ಟ್ರಸ್ಟ್ ತಿಳಿಸಿದೆ.

ಇದನ್ನೂ ಓದಿ: Priyanka Chopra: 166 ಕೋಟಿ ಬೆಲೆಯ ಮನೆಯನ್ನು ಏಕಾಏಕಿ ತೊರೆದು ಬಂದು ಪ್ರಿಯಾಂಕ ಚೋಪ್ರಾ – ಕಾರಣ ತಿಳಿದರೆ ನೀವೂ ಶಾಕ್ ಆಗ್ತೀರಾ !!

ಹೌದು, ಅಯೋಧ್ಯೆಯ ರಾಮನ(Ayodhya rama mandir) ಪ್ರತಿಷ್ಠಾಪನೆ ಆದ ಬಳಿಕ ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂ.ಗಳನ್ನು ಕಾಣಿಕೆ ಪೆಟ್ಟಿಗೆಗಳಲ್ಲಿ ಭಕ್ತರು ಹಾಕಿದ್ದಾರೆ. ದೇಗುಲದ ಗರ್ಭಗುಡಿಯಲ್ಲಿ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದ್ದು, ಅದರಲ್ಲಿ ಭಕ್ತರು ದೇಣಿಗೆಯನ್ನು ನೀಡುತ್ತಾರೆ. ಜೊತೆಗೆ ಚೆಕ್ ಮತ್ತು ಆನ್‍ಲೈನ್ ಮೂಲಕ ಪಡೆದ ಮೊತ್ತ ಸುಮಾರು 3.50 ಕೋಟಿ ರೂ. ಆಗಿದೆ ಟ್ರಸ್ಟ್ ಮಾಹಿತಿ ನೀಡಿದೆ.

 

ಇನ್ನು ದೇಣಿಗೆ ಕೌಂಟರ್‌ನಲ್ಲಿ ದೇವಸ್ಥಾನದ ಟ್ರಸ್ಟ್‌ ನೌಕರರನ್ನು ನೇಮಿಸಲಾಗಿದ್ದು, ಸಂಜೆ ಕೌಂಟರ್‌ ಮುಚ್ಚಿದ ನಂತರ ಟ್ರಸ್ಟ್‌ ಕಚೇರಿಯಲ್ಲಿ ಸ್ವೀಕರಿಸಿದ ಕಾಣಿಕೆ ಮೊತ್ತದ ಲೆಕ್ಕವನ್ನು ನೀಡುತ್ತಾರೆ ಎಂದು ಕಾಣಿಕೆ, ದೇಣಿಗೆಗಳ ಲೆಕ್ಕಾಚಾರ ಮತ್ತು ಪಾರದರ್ಶಕತೆ ಬಗ್ಗೆ ವ್ಯವಹಾರಗಳನ್ನು ನೋಡಿಕೊಳ್ಳುವ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ.