Home News Mysore Dasara: ಮೈಸೂರು ದಸರಾದ 11 ದಿನದಲ್ಲಿ ಸಂಗ್ರಹವಾದ ಕಸ ಎಷ್ಟು ಗೊತ್ತಾ? – ಪಾಲಿಕೆ...

Mysore Dasara: ಮೈಸೂರು ದಸರಾದ 11 ದಿನದಲ್ಲಿ ಸಂಗ್ರಹವಾದ ಕಸ ಎಷ್ಟು ಗೊತ್ತಾ? – ಪಾಲಿಕೆ ಪೌರ ಕಾರ್ಮಿಕರ ‘ಯಶಸ್ವಿ ಸ್ವಚ್ಛತಾ’ ಕಾರ್ಯ

Hindu neighbor gifts plot of land

Hindu neighbour gifts land to Muslim journalist

Mysore Dasara: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹನ್ನೊಂದು ದಿನದ ಅವಧಿಯಲ್ಲಿ ಮೈಸೂರು ನಗರದಾದ್ಯಂತ ಸುಮಾರು 2000 ಟನ್ ಕಸ ಸಂಗ್ರಹಣೆಯಾಗಿದೆ.

ದಸರಾ ಸ್ವಚ್ಛತಾ ನಿರ್ವಹಣೆಗಾಗಿ ನಗರ ಪಾಲಿಕೆ ವತಿಯಿಂದ ಹಾಲಿ ಇರುವ ಪೌರಕಾರ್ಮಿಕರ ಜೊತೆಗೆ ಹೆಚ್ಚುವರಿ ಯಾಗಿ 500 ಮಂದಿ ಪೌರಕಾರ್ಮಿಕ ರನ್ನು ನಿಯೋಜಿಸಲಾಗಿತ್ತು. ದಿನನಿತ್ಯ ಮೂರು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರು, ದಸರಾ ಆಹಾರ ಮೇಳ, ಫಲ-ಪುಷ್ಪ ಪ್ರದರ್ಶನ, ಯುವ ಸಂಭ್ರಮ ಇನ್ನಿತರೆ ದಸರಾ ಕಾರ್ಯಕ್ರಮಗಳಲ್ಲಿ ಸ್ವಚ್ಛತೆ ಕಾರ್ಯವನ್ನು ಆಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಪ್ರತಿದಿನ ಮೈಸೂರಿನಲ್ಲಿ 50 ರಿಂದ 60 ಟನ್ ಕಸ ಸಂಗ್ರಹವಾದರೆ, ದಸರಾ ಸಂದರ್ಭದಲ್ಲಿ ಪ್ರತಿನಿತ್ಯ 90 ರಿಂದ 100 ಟನ್ ಕಸ ಸಂಗ್ರಹಣೆಯಾಗಿದೆ. ಅದರಲ್ಲೂ ಆಹಾರ ಮೇಳದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಒಂದೇ ಜಾಗದಲ್ಲಿ 300 ಟನ್‌ಗೂ ಅಧಿಕ ಕಸ ಸಂಗ್ರಹವಾಗಿದೆ ಎಂದು ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ರಾಜಮಾರ್ಗದಲ್ಲಿ ಸ್ವಚ್ಛತೆ: ಜಗತ್ ಪ್ರಸಿದ್ದ ‘ಜಂಬೂ ಸವಾರಿ’ ಸಾಗುವ ಮಾರ್ಗದಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಗುರುವಾರ ರಾತ್ರಿಯಿಂದಲೇ ಆರಂಭಿಸಿ, ಶುಕ್ರವಾರ ಮಧ್ಯಾಹ್ನದ ವೇಳೆಗೆ ಎಂದಿನಂತೆ ಸ್ವಚ್ಛತೆಯಿಂದ ಕೂಡಿರುವಂತೆ ಮಾಡಲಾಯಿತು.

ರಾಜಮಾರ್ಗದ ವ್ಯಾಪ್ತಿಯಲ್ಲಿ ಬರುವ ಪ್ರತೀ ವಾರ್ಡ್‌ಗಳಿಂದ 6 ರಿಂದ 10 ಮಂದಿಯನ್ನು ಕಸ ವಿಲೇವಾರಿಗಾಗಿ ನಿಯೋ ಜನೆ ಮಾಡಲಾಗಿತ್ತು. ಜಂಬೂಸವಾರಿ ಮುಗಿದು ವಾಹನ ಸಂಚಾರ ವಿರಳವಾಗು ತ್ತಿದ್ದಂತೆ ಸ್ವಚ್ಚತಾ ಕಾರ್ಯ ಆರಂಭಿಸಿ, ಎಲ್ಲರ ಸಹಕಾರದಿಂದ ಸಾಧ್ಯವಾಯಿತು. ಬೆಳಗಾಗುವಷ್ಟರಲ್ಲಿ ಬಹುತೇಕ ರಸ್ತೆಯನ್ನು ಗುಡಿಸಿ, ಕಸ ವಿಲೇವಾರಿ ಮಾಡಲಾಗಿತ್ತು.

ಬೆಳಗ್ಗೆ 10 ಗಂಟೆ ವೇಳೆಗೆ ರಾಜ ಮಾರ್ಗದ ತಿಲಕನಗರ ಸಿಗ್ನಲ್ ವರೆಗೆ 10-15 ಲೋಡ್ ಕಸ ವಿಲೇವಾರಿ ಮಾಡಲಾಗಿತ್ತು. ನಂತರ ಮಧ್ಯಾಹ್ನದ ವೇಳೆಗೆ ಬನ್ನಿಮಂಟಪದಿಂದ ಅರಮನೆ ಉತ್ತರ ದ್ವಾರದವರೆಗೆ ರಾಶಿ ರಾಶಿ ಬಿದ್ದಿದ್ದ ಕಸವನ್ನು ಸಂಪೂರ್ಣ ವಾಗಿ ವಿಲೇವಾರಿ ಮಾಡಲಾಯಿತು.

ಈ ವರ್ಷದ ದಸರಾ ಕಾರ್ಯಕ್ರಮ ಗಳೆಲ್ಲವೂ ಜನದಟ್ಟಣೆಯಿಂದ ಕೂಡಿದ್ದು, ಎಲ್ಲಿಯೂ ಲೋಪವಾಗದೆ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದಾರೆ. ಆಹಾರ ಮೇಳದಲ್ಲಿ ಕಸ ವಿಲೇವಾರಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಎಲ್ಲಿಯ ಕಸ ಬೀಳದಂತೆ ನಿರ್ವಹಣೆ ಮಾಡಿದ್ದೇವೆ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ, ಡಾ.ವೆಂಕಟೇಶ್ ತಿಳಿಸಿದರು.