Home News Central Gvt: 2 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಸಿರಪ್ ನೀಡಬೇಡಿ- ಪೋಷಕರಿಗೆ ಕೇಂದ್ರ ಸರ್ಕಾರ...

Central Gvt: 2 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಸಿರಪ್ ನೀಡಬೇಡಿ- ಪೋಷಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ!!

Hindu neighbor gifts plot of land

Hindu neighbour gifts land to Muslim journalist

Central Gvt: ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 11 ಮಕ್ಕಳು ಸಾವನ್ನಪ್ಪಿದ ನಂತರ, ಚಿಕ್ಕ ಮಕ್ಕಳಲ್ಲಿ ಕೆಮ್ಮಿನ ಸಿರಪ್‌’ಗಳ ಬಳಕೆಯ ವಿರುದ್ಧ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ಸಲಹಾ ಎಚ್ಚರಿಕೆಯನ್ನ ನೀಡಿದೆ.

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕೇವಲ ಎರಡು ವಾರಗಳಲ್ಲಿ 9 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಘಟನೆಯಿಂದ ಇಡೀ ಜಿಲ್ಲೆ ಬೆಚ್ಚಿಬಿದ್ದಿದೆ. ಇನ್ನು ಮಧ್ಯಪ್ರದೇಶ ಮತ್ತು ನೆರೆಯ ರಾಜಸ್ಥಾನದ ಆರೋಗ್ಯ ಅಧಿಕಾರಿಗಳು ಇತ್ತೀಚೆಗೆ ಸಿಕರ್‌ನಲ್ಲಿ ಇದೇ ರೀತಿಯ ಸಾವು ವರದಿಯಾದ ಸ್ಥಳದಲ್ಲಿ, ಅಂಗಾಂಗ ವೈಫಲ್ಯದ ಪ್ರಕರಣಗಳು ಕಲುಷಿತ ಕೆಮ್ಮಿನ ಸಿರಪ್‌ಗಳ ಸೇವನೆಗೆ ಸಂಬಂಧಿಸಿವೆ ಎಂದು ಶಂಕಿಸಿದ್ದಾರೆ.

ಅಲ್ಲದೆ ಈ ದುರಂತದ ನಂತರ, ಎರಡೂ ರಾಜ್ಯ ಸರ್ಕಾರಗಳು ತನಿಖೆಗೆ ಆದೇಶಿಸಿದ್ದು, ಔಷಧ ನಿಯಂತ್ರಕರು ಕೆಮ್ಮಿನ ಸಿರಪ್‌ನ ಬಳಕೆಯನ್ನು ನಿಷೇಧಿಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.

ಇನ್ನು ಯಾವುದೇ ವೈರಲ್ ರೋಗಿಗೆ ಖಾಸಗಿಯಾಗಿ ಚಿಕಿತ್ಸೆ ನೀಡಬಾರದು, ಬದಲಿಗೆ ನೇರವಾಗಿ ನಾಗರಿಕ ಆಸ್ಪತ್ರೆಗೆ ಕಳುಹಿಸಬೇಕು. ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್ಗಳ ಮಾದರಿಗಳಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪರೀಕ್ಷಾ ಫಲಿತಾಂಶಗಳು ಸಿರಪ್ಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಅಥವಾ ಎಥಿಲೀನ್ ಗ್ಲೈಕಾಲ್ (EG) – ಮೂತ್ರಪಿಂಡದ ತೀವ್ರ ಹಾನಿಯನ್ನುಂಟುಮಾಡುವ ರಾಸಾಯನಿಕಗಳನ್ನು ಒಳಗೊಂಡಿಲ್ಲ ಎಂದು ದೃಢಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ.