Home News Diabetes: ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ: ಹಾಗಾದರೆ ಬೇರೇನು?

Diabetes: ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ: ಹಾಗಾದರೆ ಬೇರೇನು?

Diabetes

Hindu neighbor gifts plot of land

Hindu neighbour gifts land to Muslim journalist

Diabetes: ಬಿಡುವಿಲ್ಲದ ಜೀವನಶೈಲಿ(Life style) ಮತ್ತು ಅನಿಯಮಿತ ಆಹಾರ ಪದ್ಧತಿಗಳು(Food diet) ಅನೇಕ ರೋಗಗಳಿಗೆ(Disease) ಕಾರಣವಾಗುತ್ತವೆ, ಅವುಗಳಲ್ಲಿ ಒಂದು ಮಧುಮೇಹ. ನಿಮಗೆ ಹಲವೆಡೆ ಡಯಾಬಿಟೀಸ್ ರೋಗಿಗಳು ಖಂಡಿತಾ ಸಿಗುತ್ತಾರೆ, ಹೆಚ್ಚು ಸಕ್ಕರೆ(Sugar) ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಸಮಾಜದಲ್ಲಿ ಹೆಚ್ಚಿನ ಜನರಿದ್ದಾರೆ, ಅದಕ್ಕಾಗಿಯೇ ಹೆಚ್ಚು ಸಿಹಿ ತಿನ್ನಬೇಡಿ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಇದು ಸಂಪೂರ್ಣ ಸತ್ಯವಲ್ಲ.

ಸಿಹಿ ತಿಂಡಿಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ವೇಗವಾಗಿ ವೃದ್ಧಿಯಾಗುತ್ತದೆ ಹಾಗೂ ಇದು ಆರೋಗ್ಯವಂತ ವ್ಯಕ್ತಿಗಳಲ್ಲಿ ಹೆಚ್ಚು ಪ್ರಮಾಣದ ಇನ್ಸುಲಿನ್ ನ್ನು ತಕ್ಷಣ ಸ್ರವಿಸಲು ಪ್ರೇರೇಪಿಸುತ್ತದೆ. ಇದರಿಂದ ಮೇದೋಜೀರಕ ಗ್ರಂಥಿ ಹಾಗೂ ಚಯಾಪಚಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅಲ್ಲದೇ, ಸಿಹಿ ತಿಂಡಿಗಳಲ್ಲಿ ಸಾಮಾನ್ಯವಾಗಿ ಇತರ ಪೋಷಕಾಂಶಗಳು ಹಾಗೂ ನಾರಿನಂಶದ ಅಭಾವವಿರುತ್ತದೆ. ಇಂಥ ಆಹಾರ ಪದ್ಧತಿ ಮಧುಮೇಹ ಉಂಟಾಗಲು ಪೂರಕವಾಗುತ್ತದೆ. ಆದರೆ, ಮಧುಮೇಹ ಉಂಟಾಗಲು ಇದೊಂದೇ ಕಾರಣವಲ್ಲ.

ಸಾಮಾನ್ಯ ರಕ್ತದ ಸಕ್ಕರೆ ಹೊಂದಿರುವ ಜನರು ಸಿಹಿ ತಿನ್ನಬಹುದು. ಆದರೆ ಹಿತಮಿತವಾಗಿಯೇ ತಿನ್ನಬೇಕು. ಸಿಹಿತಿಂಡಿಗಳನ್ನು ತಿನ್ನದ ಅನೇಕ ಮಧುಮೇಹಿಗಳಿದ್ದಾರೆ ಮತ್ತು ಸಿಹಿತಿಂಡಿಗಳನ್ನು ಇಷ್ಟಪಡದವರೂ ಇದ್ದಾರೆ, ಆದರೂ ಅವರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹಾಗಾದರೆ ಮಧುಮೇಹಕ್ಕೆ ನಿಜವಾದ ಕಾರಣವೇನು?
ಮಧುಮೇಹ ಇನ್ಸುಲಿನ್ ನ ಕೊರತೆ ಅಥವಾ ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ ಎಂದು ಈಗ ಅನೇಕರಿಗೆ ತಿಳಿದಿದೆ. ಈ ಇನ್ಸುಲಿನ್ ಕೊರತೆ ಅಥವಾ ಪ್ರತಿರೋಧ ಸಂಭವಿಸಲು ಅನೇಕ ಅಂಶಗಳು ಪೂರಕವಾಗಿರುತ್ತವೆ. ಆಹಾರದ ಗುಣಮಟ್ಟ, ಅನಿಯಮಿತತೆ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಪರಿಸರ ಮಾಲಿನ್ಯ ಅಂದರೆ ನಾವು ಎಷ್ಟು ಕೃತ್ರಿಮ ರಾಸಾಯನಿಕ ಗಳಿಗೆ ನಮ್ಮನ್ನು ಒಡ್ಡಿಕೊಂಡಿದ್ದೇವೆ, ನಿಸರ್ಗದಿಂದ ನಾವು ಎಷ್ಟು ದೂರವಾಗಿದ್ದೇವೆ, ಅನಿಯಮಿತ ನಿದ್ರೆ ಅಥವಾ ನಿದ್ರಾನಾಶ, ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಪದೇಪದೇ ಸೇವಿಸುವ ಕೃತಿಮ ರಾಸಾಯನಿಕ (ಇಂಗ್ಲಿಷ್) ಔಷಧಿಗಳು, ಇತ್ಯಾದಿ ಅನೇಕ ಅಂಶಗಳು ಯಾವುದೇ ಕಾಯಿಲೆ ಸಂಭವಿಸಲು ಕಾರಣವಾಗುತ್ತವೆ.

ನಿದ್ರೆ– ಸಾಕಷ್ಟು ನಿದ್ದೆ ಮಾಡದವರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಕೆಲವೊಮ್ಮೆ ನಿದ್ರೆಯ ಕೊರತೆ ಇರುವುದು ಸಹಜ, ಆದರೆ ಸಮಯಕ್ಕೆ ಸರಿಯಾಗಿ ಅಥವಾ ಗಾಢವಾದ ನಿದ್ದೆ ಮಾಡದಿದ್ದರೆ ಅಂತಹವರು ಜಾಗ್ರತೆ ವಹಿಸಬೇಕು. ಮಧುಮೇಹದಿಂದ ಬಳಲುವ ಸಾಧ್ಯತೆಯಿದೆ.

ಬೊಜ್ಜು – ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟರೆ ಮಧುಮೇಹದ ಸಮಸ್ಯೆಯನ್ನು ದೂರವಿಡಬಹುದು.

ಒತ್ತಡ– ಒಬ್ಬ ವ್ಯಕ್ತಿಯು ನಿರಂತರ ಒತ್ತಡದಲ್ಲಿದ್ದರೆ ಆಗ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.

ಜಡ ಕೆಲಸ– ದಿನವಿಡೀ ಕಛೇರಿಯ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು ಮಧುಮೇಹದ ಅಪಾಯವನ್ನು 80% ವರೆಗೆ ಹೆಚ್ಚಿಸುತ್ತಾರೆ.

ವ್ಯಾಯಾಮದ ಕೊರತೆ– ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು ಕಡ್ಡಾಯ. ತಮ್ಮ ದಿನಚರಿಯಲ್ಲಿ ವ್ಯಾಯಾಮದ ಕೊರತೆ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು.
ಆದ್ದರಿಂದ ಸಮಗ್ರ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಆಧುನಿಕ ಕಾಲದ ಅನಿವಾರ್ಯತೆಯಾಗಿದೆ.