Home News ಬೀದಿನಾಯಿಗಳ ಉಪಟಳಕ್ಕೆ ತತ್ತರಿಸಿದ ಜನ | ಮೆಗಾಪ್ಲ್ಯಾನ್ ಮಾಡಿದ ಸಾರ್ವಜನಿಕರು | ಸೂಪರ್ ಐಡಿಯಾ ವರ್ಕೌಟ್...

ಬೀದಿನಾಯಿಗಳ ಉಪಟಳಕ್ಕೆ ತತ್ತರಿಸಿದ ಜನ | ಮೆಗಾಪ್ಲ್ಯಾನ್ ಮಾಡಿದ ಸಾರ್ವಜನಿಕರು | ಸೂಪರ್ ಐಡಿಯಾ ವರ್ಕೌಟ್ !!

Homeless dog standing on the street somewhere in India

Hindu neighbor gifts plot of land

Hindu neighbour gifts land to Muslim journalist

ಧಾರವಾಡ : ಬೀದಿ ನಾಯಿಗಳ ಹಾವಳಿ ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಾಗಿದ್ದು, ಬೀದಿ ನಾಯಿಗಳ ಕಾಟ ತಪ್ಪಿಸಲು ಮೆಗಾ ಪ್ಲ್ಯಾನ್‌ ಮಾಡಲಾಗಿದ್ದು,  ಬಣ್ಣದ ನೀರಿನ ಮೂಲಕ ಪರಿಹಾರ ಕಂಡು ಕೊಂಡಿದ್ದಾರೆ..ಅರೇ ಏನಿದು ಬಣ್ಣ ನೀರಿನ ಪರಿಹಾರ ಅಂತಾ ಯೋಚಿಸುತ್ತಿದ್ದಿರಾ? ಈ ಸ್ಟೋರಿ ಕಂಪ್ಲೀಟ್‌ ಓದಿ

ಬೀದಿನಾಯಿಗಳ ಉಪಟಳಕ್ಕೆ ಧಾರವಾಡ ಜಿಲ್ಲೆಯ ವಿದ್ಯಾ ಕಾಶಿಯ ಜನ ಕಂಗಾಲಾಗಿದ್ದಾರೆ. ಬೀದಿ ನಾಯಿಗಳು ಹಾಡ ಹಗಲೇ ಮಕ್ಕಳ ಮೇಲೆ ವಯೋವೃದ್ಧರ ಮೇಲೆ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ರಾತ್ರಿ ವೇಳೆ ನಿರಂತರವಾಗಿ ಬೊಗಳುವುದು ಹಾಗೂ ಮನೆ ಮುಂದೆ ಅಂಗಡಿಗಳ ಮುಂದೆ ಹೊಲಸು ಮಾಡುವುದರಿಂದ ಧಾರವಾಡ ಜನರ ನೆಮ್ಮದಿಯನ್ನು ಹಾಳು ಮಾಡಿವೆ.

ಬೀದಿ ನಾಯಿಗಳ ಹಾವಳಿ ತಪ್ಪಿಸಲು ಧಾರವಾಡ ನಗರದ ಜನ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಹತೋಟಿಗೆ ಬರದ ಕಾರಣ ಈ ಕುರಿತು ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಗೆ ಎಷ್ಟೋ ಬಾರಿ ಮನವಿಗಳನ್ನು ಸಲ್ಲಿಸಿದರು. ಅದು ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತಿದ್ದ ಧಾರವಾಡದ ಜನ ಹೊಸ ತಂತ್ರದ ಮೊರೆ ಹೋಗಿದ್ದು, ಅದು ಬೀದಿನಾಯಿಗಳ ಕಾಟ ತಪ್ಪಿಸುವುದು ಅಷ್ಟೇ ಅಲ್ಲ ನೋಡುಗರ ಆಶ್ಚರ್ಯಕ್ಕೆ ಕಾರಣವಾಗಿದೆ.

ಕೆಂಪು ಬಣ್ಣದ ನೀರಿಗೆ ಬೆದರಿದ ಬೀದಿ ನಾಯಿಗಳು ಈ ಒಂದು ಹೊಸ ಐಡಿಯಾ ವಿದ್ಯಾ ಕಾಶಿಯ ಜನರಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದ ಬೀದಿ ನಾಯಿಗಳ ಉಪಟಳದಿಂದ ನಗರದ ಜನರಿಗೆ ಕೊಂಚ ಮಟ್ಟಿಗೆಯಲ್ಲ ಸಂಪೂರ್ಣವಾಗಿ ನೆಮ್ಮದಿ ದೊರತಿದೆ.
ಧಾರವಾಡ ನಗರದ ಜನರ ಈ ತಂತ್ರ ಅವರ ಕೈ ಹಿಡಿದಿದೆ. ಅಷ್ಟಕ್ಕೂ ಅದೇನು ಮಹಾನ ತಂತ್ರ ಮಾಟ ಮಂತ್ರ ಅಲ್ಲ. ಕೇವಲ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಕೆಂಪು ಬಣ್ಣದ ನೀರು ತುಂಬಿಸಿ ಮನೆಯ ಮುಂದೆ, ಮನೆಯ ಗೇಟ್ ಮುಂದೆ ಕಟ್ಟುವುದು. ಇದರಿಂದ ನಾಯಿಗಳು ಹತ್ತಿರವೂ ಸುಳಿಯುದಿಲ್ಲ ಎಂದು ನಗರದ ಜನ ಹೇಳುತ್ತಿದ್ದಾರೆ.

ಬೀದಿ ನಾಯಿಗಳ ಕಾಟಕ್ಕೆ ಬಣ್ಣದ ನೀರಿನ ಪರಿಹಾರ

ಈಗ ನಗರದ ಪ್ರತಿಯೊಂದು ಸ್ಲಂ, ಸಣ್ಣ ಸಣ್ಣ ಬಡಾವಣೆ, ಪ್ರತಿಷ್ಠಿತ ಬಡಾವಣೆ ಹಾಗೂ ಶಾಪಿಂಗ್ ಮಾಲ್ ಆಫೀಸ್‌ಗಳ ಮುಂದೆ ಈ ಬಣ್ಣದ ನೀರು ತುಂಬಿರುವ ಬಾಟಲಿಗಳನ್ನು ಕಾಣಬಹುದು. ಈ ಮೂಲಕ ಬೀದಿನಾಯಿಗಳ ಸಮಸ್ಯೆಗೆ ನಗರದ ಜನರು ಪರಿಹಾರ ಕಂಡುಕೊಂಡಿದ್ದಾರೆ. ಕೆಂಪು ಬಣ್ಣದ ನೀರು ತುಂಬಿದ ಪ್ಲಾಸ್ಟಿಕ್ ಬಾಟಲ್‍ಗಳೇ ಬೀದಿ ನಾಯಿಗಳ ಕಾಟಕ್ಕೆ ಪರಿಹಾರವಾಗಿವೆ.
ಲಕ್ಷ್ಮೀ ಸಿಂಗನಕೇರಿ, ಮೆಹಬೂಬನಗರ, ಮಾಳಾಪುರ, ಬನಶ್ರೀ ನಗರ, ಆದರ್ಶ ನಗರ, ಸಂಪಿಗೆ ನಗರ ಸೇರಿದಂತೆ ನಾಯಿಗಳ ಕಾಟ ಹೆಚ್ಚಾಗಿರುವ ವಿವಿಧ ಬಡಾವಣೆಗಳಲ್ಲಿ ಮನೆಯ ಮುಂದೆ ಮರ ಗಿಡಗಳಿಗೆ ಬಣ್ಣದ ನೀರು ತುಂಬಿದ ಬಾಟಲಿಗಳನ್ನು ಕಟ್ಟಲಾಗಿದೆ.