Home latest ತಗ್ಗುತ್ತಿದೆ ಬಾವಲಿಗಳ ಸಂಖ್ಯೆ!!!

ತಗ್ಗುತ್ತಿದೆ ಬಾವಲಿಗಳ ಸಂಖ್ಯೆ!!!

Hindu neighbor gifts plot of land

Hindu neighbour gifts land to Muslim journalist

ಬಾವಲಿಗಳ ಸಂಖ್ಯೆ ಇತ್ತೀಚಿನ ದಿನದಲ್ಲಿ ಇಡೀ ವಿಶ್ವದಲ್ಲಿ ಗಣನೀಯವಾಗಿ ತಗ್ಗುತ್ತಿದೆ. ಮಾನವನ ಜೀವನದ ಮೇಲೆ ಬಾವಲಿಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪರಿಣಾಮ ಬೀಳುತ್ತದೆ. ಈ ಹಂತದಲ್ಲಿ ಕ್ಷೀಣಿಸುತ್ತಿರುವ ಬಾವಲಿಗಳ ಸಂಖ್ಯೆ ನಿಜಕ್ಕೂ ಆತಂಕಕಾರಿಯಾಗಿದೆ ಎಂದೇ ಹೇಳಬಹುದು.

ಎಲ್ಲರಿಗೂ ಗೊತ್ತಿರುವ ಹಾಗೇ, ಬಾವಲಿಗಳು ರಾತ್ರಿ ಮಾತ್ರ ಕ್ರಿಯಾಶೀಲವಾಗಿರುತ್ತವೆ. ಹಾಗಾಗಿ ಅವುಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಆರೋಗ್ಯಕರ ಪರಿಸರ ವ್ಯವಸ್ಥೆಯ ಕಾರ್ಯನಿರ್ವಹಣೆಗಾಗಿ ಬಾವಲಿಗಳು ನಿರ್ಣಾಯಕವಾಗಿವೆ.

ಉತ್ತರ ಅಮೆರಿಕದಲ್ಲಿ ಹಲವು ದಶಕಗಳಿಂದ ಬಾವಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹಾಗೇ ನೋಡಿದರೆ ಇತರೆ ದೇಶಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಪರಿಸರದಲ್ಲಿ ಪೋಷಕಾಂಶಗಳ ಚಕ್ರದ ಸೂಕ್ತ ನಿರ್ವಹಣೆ ಹಾಗೂ ಗಿಡಗಳಲ್ಲಿ ಪರಾಗಸ್ಪರ್ಶಕ್ಕೆ ಅವುಗಳು ಸಹಕಾರಿಯಾಗಿವೆ. ಬಾವುಲಿಗಳು ಕೃಷಿ ಕೀಟಗಳನ್ನು ತಿನ್ನುತ್ತವೆ. ಹಾಗಾಗಿ ಇದು ಕೀಟನಾಶಕಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಅವುಗಳು ನಮ್ಮ ಪರಿಸರ ವ್ಯವಸ್ಥೆಗೆ ಅಗಾಧವಾದ ಸಹಾಯವನ್ನು ಮಾಡುತ್ತವೆ.

ಅಲ್ಲದೇ ಇತರ ಕಾರಣಗಳಿಗೂ ಅವುಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಪರಿಸರ ವ್ಯವಸ್ಥೆಗೆ ಅಗತ್ಯವಿರುವ ಬಾವಲಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಾಳಜಿ ಹೆಚ್ಚಾಗುವಂತೆ ಮಾಡಿದೆ.