Home News BJP Mahila Morcha: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ಪುತ್ರಿ ಸಾವು!

BJP Mahila Morcha: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ಪುತ್ರಿ ಸಾವು!

Hindu neighbor gifts plot of land

Hindu neighbour gifts land to Muslim journalist

BJP Mahila Morcha: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರ ಮಗಳು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ದುರ್ಗ್‌ ಜಿಲ್ಲೆಯಲ್ಲಿ ಶುಕ್ರವಾರ (ಮಾ.14) ನಡೆದಿದೆ.

ಬಿಜೆಪಿಯ ಭಿಲಾಯಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ಸ್ವೀಟಿ ಕೌಶಿಕ್‌ ಅವರ ಪುತ್ರಿ ರಿಚಾ (23) ಮೃತ ದುರ್ದೈವಿ.

ಶುಕ್ರವಾರ ತನ್ನ ಗೆಳೆಯರ ಜೊತೆ ಹೋಳಿ ಸಂಭ್ರಮಾಚರಣೆ ಮಾಡಿದ್ದು, ಮಧ್ಯಾಹ್ನ ಕಾರಿನಲ್ಲಿ ಹೋಟೆಲ್‌ಗೆ ಊಟಕ್ಕೆ ಹೋಗುತ್ತಿದ್ದಾಗ ದುರ್ಗ್‌ರಾಜನಂದಗಾಂವ್‌ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ರಿಚಾ ತಲೆಗೆ ಗಂಭೀರ ಗಾಯವಾಗಿದ್ದು, ರಾಯ್‌ಪುರ ರಾಮಕೃಷ್ಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಆಕೆಯ ಜೊತೆಗಿದ್ದ ಮೂವರು ಗೆಳೆಯರಿಗೂ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.