Home latest ಯಕ್ಷಗಾನ ವೇಷಧಾರಿಗೆ ರಂಗ ಸ್ಥಳ ಪ್ರವೇಶ ಆಗುತ್ತಿದ್ದಂತೆ ದೈವ ಆವೇಷ!!!

ಯಕ್ಷಗಾನ ವೇಷಧಾರಿಗೆ ರಂಗ ಸ್ಥಳ ಪ್ರವೇಶ ಆಗುತ್ತಿದ್ದಂತೆ ದೈವ ಆವೇಷ!!!

Hindu neighbor gifts plot of land

Hindu neighbour gifts land to Muslim journalist

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಯಕ್ಷಗಾನದ ವೇಳೆ ವೇಷಧಾರಿಗೆ ಮೈ ಮೇಲೆ ದೈವ ಆವೇಷವಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಪ್ರೇಕ್ಷಕರು ಹತ್ತು ನಿಮಿಷದವರೆಗೆ ಪಾತ್ರಧಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಕೊನೆಗೆ ಚೌಕಿಯಿಂದ ದೇವರ ತೀರ್ಥ ಹಾಕಿದ ಬಳಿಕ ಕಲಾವಿದ ಮೊದಲ ಸ್ಥಿತಿಗೆ ಬಂದಿದ್ದಾರೆ.

ಮಡಮಕ್ಕಿ ಮೇಳದವರಿಂದ ಹೆಬ್ರಿ ಸಮೀಪದ ಬೆಪ್ದೆ ಎಂಬಲ್ಲಿ ಮಡಮಕ್ಕಿ ಕ್ಷೇತ್ರ ಮಹಾತ್ಮೆ ನಡೆಯುತ್ತಿತ್ತು. ಈ ವೇಳೆ ಮೇಳದ ಕಲಾವಿದ ವೀರಭದ್ರಸ್ವಾಮಿ ಎಂಬುವವರು ಕೋಟೆರಾಯನ ವೇಷ ಧರಿಸಿ, ರಂಗಸ್ಥಳ ಪ್ರವೇಶ ಆಗುತ್ತಿದ್ದಂತೆ ದೈವ ಆವೇಷ ಬಂದಂತೆ ವರ್ತಿಸಿದ್ದಾರೆ.