Home News ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ !! | ಹೋಟೆಲ್ ನಲ್ಲಿ ಇನ್ನು ಕಾಫಿ, ತಿಂಡಿ...

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ !! | ಹೋಟೆಲ್ ನಲ್ಲಿ ಇನ್ನು ಕಾಫಿ, ತಿಂಡಿ ಎಲ್ಲವೂ ದುಬಾರಿ

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ದಿನಬಳಕೆ ವಸ್ತುಗಳ ಏರಿಕೆ ಮಾಮೂಲಾಗಿದೆ. ಬೆಲೆ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ಇದು ಇದೀಗ ಮತ್ತೊಂದು ಶಾಕ್ ಸುದ್ದಿ ಹೊರಬಿದ್ದಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಮೇಲಿನ ದರ ಹೆಚ್ಚಳದಿಂದಾಗಿ ಕಾಫಿ, ತಿಂಡಿ, ಊಟದ ಬಿಲ್ ಏರಿಕೆಗೆ ಮುಂದಾಗಿದ್ದ ರಾಜ್ಯದ ಹೋಟೆಲ್‌ಗಳು ಸೋಮವಾರದಿಂದಲೇ ಹೊಸ ದರವನ್ನು ಜಾರಿಗೆ ತರಲಿವೆ.

ಇಡ್ಲಿ(2ಕ್ಕೆ), ರವೆ ಇಡ್ಲಿ, ಪೂರಿ, ಪೊಂಗಲ್, ಪಲಾವ್, ಟೊಮ್ಯಾಟೊ ಬಾತ್, ಮಸಾಲೆ ದೋಸೆ, ಈರುಳ್ಳಿ ದೋ ಚಾನೆಲ್ ಊಟ, ಅನ್ನ ಸಾಂಬಾರ್ ಹಾಗೂ ಫೈಡ್ ರೈಸ್ ಸೇರಿ ಸೆ ವಿವಿಧ ಬಗೆಯ ತಿಂಡಿಗಳ ಬೆಲೆ ಈಗಿರುವ ದರಕ್ಕಿಂತ 5-7 ರೂ. ಹೆಚ್ಚಿಸುವುದಾಗಿ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಮಾಹಿತಿ ನೀಡಿದೆ.

ಮಿನಿ ಕಾಫಿ ಸೇರಿ ಸಣ್ಣ ಪದಾರ್ಥಗಳ ಮೇಲೆ 1-2 ರೂ. ಹೆಚ್ಚಿಸಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಊಟ ತಿಂಡಿಗಳ ಮೇಲೆ ದರ ಹೆಚ್ಚಿಸಲಾಗಿಲ್ಲ. ಈಗ ಎಲ್ಪಿಜಿ, ವಿದ್ಯುತ್ ಶುಲ್ಕ ಹೆಚ್ಚಳ ಮತ್ತು ಊಟ ತಯಾರಿಸುವ ಪರಿಣಿತ ಸಿಬ್ಬಂದಿ ವೇತನ ಏರಿಕೆಯಿಂದಾಗಿ ಅನಿವಾರ್ಯವಾಗಿ ಊಟ ತಿಂಡಿಗಳ ಮೇಲೆ ದರ ಹೆಚ್ಚಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ 8 ಸಾವಿರ ಸೇರಿದಂತೆ ರಾಜ್ಯದಲ್ಲಿ ಅಂದಾಜು 40 ಸಾವಿರ ಹೋಟೆಲ್‌ಗಳಿವೆ. ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮ ನಿಧಾನವಾಗಿ ಚೇತರಿಕೆಯತ್ತ ಸಾಗುತ್ತಿದ್ದರೂ ಎಲ್ಪಿಜಿ ದರ ಏರಿಕೆಯಿಂದಾಗಿ ಮತ್ತಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಬೆಲೆ ಏರಿಕೆ ಮಾಡದಿದ್ದರೆ ಆರ್ಥಿಕ ನಷ್ಟ ಅನುಭವಿಸಿ ಹೋಟೆಲ್‌ಗಳಿಗೆ ಬೀಗ ಹಾಕಬೇಕಾಗುತ್ತದೆ. ಹಾಗಾಗಿ, ಎಲ್ಲರ ಜೊತೆ ಚರ್ಚಿಸಿ ಊಟ ತಿಂಡಿಗಳ ಮೇಲೆ 5 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಹೆಚ್ಚು ದರ ಏರಿಸಿದರೆ ಗ್ರಾಹಕರ ಸಂಖ್ಯೆ ಕಡಿಮೆ ಆಗಬಹುದು. ಹಾಗಾಗಿ, ಸ್ವಲ್ಪ ಮಾತ್ರದ ಹೆಚ್ಚಿಸಲಾಗುತ್ತಿದೆ ಎಂದು ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.