Home News Crime News: ಚಕ್ಕುಲಿ ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಪುಟ್ಟ ಮಗು ಸಾವು!

Crime News: ಚಕ್ಕುಲಿ ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷದ ಪುಟ್ಟ ಮಗು ಸಾವು!

Crime News

Hindu neighbor gifts plot of land

Hindu neighbour gifts land to Muslim journalist

ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಈ ಘಟನೆ ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ.

ವೈಷ್ಣವ್‌ ಎಂಬಾತನೇ ಮೃತ ಬಾಲಕ. ಅವಳಿ ಮಕ್ಕಳಲ್ಲಿ ಒಬ್ಬ ಈ ಮಗು. ಈ ಘಟನೆ ನಡೆದ ವೇಳೆ ಮಗು ಮತ್ತು ಮಗುವಿನ ತಾಯಿ ಮಾತ್ರ ಮನೆಯಲ್ಲಿದ್ದರೆನ್ನಲಾಗಿದೆ. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್‌ ಆಗಿದ್ದು, ಪಾಲಕ್ಕಾಡ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆಂದು ಹೋಗಿದ್ದರು.

ಚಕ್ಕುಲಿ ತಿಂದುಕೊಂಡು ಆಟವಾಡುತ್ತಿದ್ದ ಮಗು ಏಕಾ ಏಕಿ ನುಂಗಿ ಬಿಟ್ಟಿದ್ದು, ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡಿದೆ. ಕೂಡಲೇ ಉಸಿರಾಡಲು ಆಗಲಿಲ್ಲ. ಕೂಡಲೇ ಮಗುವನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನು ಓದಿ: Rishab Shetty Remuneration: ಕಾಂತಾರ-2 ಗೆ ರಿಷಬ್ ಶೆಟ್ಟಿ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?! ಅಬ್ಬಬ್ಬಾ.. ನೀವಿದನ್ನು ಊಹಿಸಲೂ ಸಾಧ್ಯವಿಲ್ಲ!!