Home latest ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸಲು ಹೋಗಿ ಯುವಕನ ಯಡವಟ್ಟು । ಖಾಸಗಿ ಭಾಗಕ್ಕೆ ಬಲವಾಗಿ ಚುಚ್ಚಿಕೊಂಡ ಗಾಜು

ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸಲು ಹೋಗಿ ಯುವಕನ ಯಡವಟ್ಟು । ಖಾಸಗಿ ಭಾಗಕ್ಕೆ ಬಲವಾಗಿ ಚುಚ್ಚಿಕೊಂಡ ಗಾಜು

Hindu neighbor gifts plot of land

Hindu neighbour gifts land to Muslim journalist

ಪ್ರಯೋಗಶಾಲಿ ವಿಡಿಯೋ ಮಾಡುವ ಭರದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿನೂತನ ಪ್ರಯೋಗಶಾಲಿ ವಿಡಿಯೋ ಮಾಡಲು ಹೋದ ಯುವಕನು ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸಿದ್ದಾನೆ. ಈ ವೇಳೆ, ಗಾಜು ಸಿಡಿದು ಯುವಕನ ಖಾಸಗಿ ಭಾಗಕ್ಕೆ ಚುಚ್ಚಿಕೊಂಡಿದೆ. ಆಗ ತೀವ್ರ ರಕ್ತಸ್ರಾವವಾಗಿ ಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಘಟನೆಯ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಶುಕ್ರವಾರ ತಡರಾತ್ರಿ ಭರತ್‌ಪುರದ ಹಲೈನಾ ಪಟ್ಟಣದ ಇಂದಿರಾ ಕಾಲೋನಿಯಲ್ಲಿ ಕೆಲವು ಯುವಕರು ಪಾತ್ರೆಯೊಳಗೆ ಪಟಾಕಿಗಳನ್ನಿಟ್ಟು ಸಿಡಿಸುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ 20 ವರ್ಷದ ಬಿಟ್ಟು ಎಂಬಾತ ಗಾಜಿನೊಳಗೆ ಪಟಾಕಿಗಳನ್ನಿಟ್ಟು ಸಿಡಿಸಲು ನಿರ್ಧರಿಸಿದ್ದಾನೆ. ಕೇವಲ ವಿಡಿಯೋ ಮಾಡಲು ಗ್ಲಾಸ್ ನೊಳಗೆ ಪಟಾಕಿಗಳನ್ನು ಸಿಡಿಸಲು ಮುಂದಾಗಿದ್ದ. ಗ್ಲಾಸ್​ ಕೆಳಗೆ ಪಟಾಕಿ ಸಿಡಿಸಿದಾಗ ಗಾಜು ಛಿದ್ರಗೊಂಡು ಅದರ ಒಂದು ಭಾಗ ಹಾರಿ ಬಂದು ಯುವಕನ ಖಾಸಗಿ ಭಾಗಕ್ಕೆ ಸಿಕ್ಕಿ ಕೊಂದಿಡಿಫ್. ಗಾಜು ತಗುಲಿ ತೀವ್ರ ರಕ್ತಸ್ರಾವವಾಗಲು ಪ್ರಾರಂಭಿಸಿದ್ದು, ಸ್ಥಳದಲ್ಲೇ ಯುವಕ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಮತ್ತು ಪೋಷಕರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಇದೀಗ ಯುವಕನ ಪರಿಸ್ಥಿತಿ ಚಿಂತಾಜನಕ ವಾಗಿದೆ.