Home latest ಕೊರೊನಾ ಆರ್ಭಟ | ಎರಡು ಶಾಲೆ ಬಂದ್!!!

ಕೊರೊನಾ ಆರ್ಭಟ | ಎರಡು ಶಾಲೆ ಬಂದ್!!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನಲ್ಲಿ ಕೊರೋನಾ ಸೊಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಅದರಲ್ಲೂ ನಗರದ ಎರಡು ಖಾಸಗಿ ಶಾಲೆಯ ಮಕ್ಕಳಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ಹೌದು….ದಾಸರಹಳ್ಳಿಯ ಎರಡು ಖಾಸಗಿ ಶಾಲೆಗಳ ಮಕ್ಕಳಿಗೆ ಕೊರೋನಾ ವಕ್ಕರಿಸಿದೆ. 4 ಮತ್ತು 5 ತರಗತಿಯ ಒಟ್ಟು 21 ಮಕ್ಕಳಿಗೆ 6ನೇ ತರಗತಿಯ 10 ಮಕ್ಕಳಿಗೆ ಕೊರೊನಾ ಕಾಣಿಸಿಕೊಂಡಿದೆ. 31 ವಿದ್ಯಾರ್ಥಿಗಳಿಗೆ ಪಾಸಿಟಿವ್ ಎರಡು ಶಾಲೆಗ ಶಿಕ್ಷಕರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು, ಮಕ್ಕಳಿಗೆ ಸೋಂಕು ಬಂದ ಕೂಡಲೇ ಏನೂ ಆಗೊಲ್ಲ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಷ್ಟು ಲಸಿಕೆ ಆಗಿದೆ ಮಾಹಿತಿ ಪಡೆಯುತ್ತಿದ್ದೇವೆ. 15 ವರ್ಷ ಮೇಲ್ಪಟ್ಟರಿಗೂ ಲಸಿಕೆ ಆಗ್ತಿದೆ. ಸೋಂಕು ಬಂದ ಕೂಡಲೇ ಶಾಲೆ ಕ್ಲೋಸ್ ಮಾಡಬೇಕು ಎಂದರು.

ಕೊರೋನಾ ಪ್ರೊಟೋಕಾಲ್ ಪಾಲನೆ ಮಾಡಬೇಕು. ಸೋಂಕು ಬಂದ್ರು ಮಕ್ಕಳಿಗೆ ಹೆಚ್ಚು ಸಮಸ್ಯೆ ಆಗೊಲ್ಲ. ಯಾರು ಆತಂಕ ಪಡೆಯೋದು ಬೇಡ..ಇದು ಓಮಿಕ್ರಾನ್ ಉಪತಳಿ ಇದು. ಹೊಸ ಒಮಿಕ್ರಾನ್ ಉಪ ತಳಿ ನಮ್ಮಲ್ಲಿ ಪತ್ತೆ ಆಗಿಲ್ಲ. ಮಕ್ಕಳಿಗೆ ಸೋಂಕು ಬಂದರೆ ಆತಂಕ ಆಗೋದು ಸಹಜ.ಆದ್ರೆ ಯಾರೂ ಹೆಚ್ಚು ಆತಂಕ ಆಗೋದು ಬೇಡ. ಗಾಬರಿ ಆಗೋದು ಬೇಡ ಎಂದು ತಿಳಿಸಿದರು.

ನಿನ್ನೆ(ಸೋಮವಾರ) ಕೊರೋನಾ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಕೂಡ ಸಭೆ ನಡೆಸಿ ಅಗತ್ಯ ಕ್ರಮಗಳ ಭರವಸೆ ನೀಡಿದ್ದಾರೆ. ಐಐಟಿ ತಜ್ಞರ ಪ್ರಕಾರ ಜುಲೈನಲ್ಲಿ ನಾಲ್ಕನೇ ಸಾಧ್ಯತೆ ಎಂದಿದ್ದಾರೆ. ಈ ನಡುವೆ ಬೆಂಗಳೂರಲ್ಲಿ ರಾಜ್ಯದ ಸಿಂಹಪಾಲು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಆಸ್ಪತ್ರೆ ದಾಖಲಾತಿ ಕಡಿಮೆಯಿದ್ದರೂ ಕೂಡ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಮಾಸ್ಕ್ ಧರಿಸದೇ ಇದ್ದರೆ ದಂಡದ ಪ್ರಸ್ತಾಪ ಇದ್ದರೂ ಕೂಡ, ಸದ್ಯಕ್ಕೆ ಅದರ ಅಗತ್ಯ ಇಲ್ಲ ಎಂದು ಸಚಿವರ ಸ್ಪಷ್ಟಪಡಿಸಿದ್ದಾರೆ.