Home News E Aadhaar: ಶೀಘ್ರವೇ ಬರಲಿದೆ ಇ-ಆಧಾರ್‌: ಏನಿದು ಹೊಸ ವ್ಯವಸ್ಥೆ?

E Aadhaar: ಶೀಘ್ರವೇ ಬರಲಿದೆ ಇ-ಆಧಾರ್‌: ಏನಿದು ಹೊಸ ವ್ಯವಸ್ಥೆ?

Hindu neighbor gifts plot of land

Hindu neighbour gifts land to Muslim journalist

E Aadhaar: ಇನ್ಮುಂದೆ ನೀವು ಆಧಾರ್‌ನ ಪ್ರತಿಯನ್ನು ಒದಗಿಸುವ ಅಗತ್ಯವಿರುವುದಿಲ್ಲ. ಅದರ ಬದಲಿಗೆ ಕ್ಯೂಆರ್ ಕೋಡ್ ಆಧಾರಿತ ಹೊಸ ತಂತ್ರಾಂಶವನ್ನು ಬಳಸಿಕೊಂಡು ವಿದ್ಯುನ್ಮಾನ ಆಧಾರ್‌ ಸಂಖ್ಯೆಯನ್ನು ಪೂರ್ಣವಾಗಿ ಅಥವಾ ಕೊನೆಯ ಸಂಖ್ಯೆಗಳು ಮಾತ್ರ ಕಾಣುವಂತೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

 

ನವೆಂಬರ್ ವೇಳೆಗೆ, ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸುವುದನ್ನು ಹೊರತುಪಡಿಸಿ, ವಿಳಾಸವನ್ನು ನವೀಕರಿಸಲು ಮತ್ತು ಇತರ ವಿವರಗಳನ್ನು ಸಲ್ಲಿಸಲು ನೀವು ಆಧಾರ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಏಕೆಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಜನನ ಪ್ರಮಾಣಪತ್ರಗಳು, ಅಂಕಪಟ್ಟಿಗಳು, ಚಾಲನಾ ಪರವಾನಗಿಗಳು, ಪ್ಯಾನ್ ಕಾರ್ಡ್‌ಗಳು ಮತ್ತು ಪಾಸ್ಪೋರ್ಟ್‌ ಸೇರಿದಂತೆ ಪ್ರಮಾಣೀಕೃತ ದಾಖಲೆಗಳನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಆಧಾರ್‌ನ ಮಾಹಿತಿಯನ್ನು ಪರಿಷ್ಕರಿಸುವ ಮತ್ತೊಂದು ಪ್ರಮುಖ ನವೀಕರಣವನ್ನು ತರಲು ಯುಐಡಿಎಐ ಯೋಜಿಸಿದೆ.

ಈ ತಂತ್ರಾಂಶ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು, ಪೂರ್ಣ ಮತ್ತು ಮೆಮಾಚಿದ ಆವೃತ್ತಿಗಳನ್ನು ಒಳಗೊಂಡಂತೆ, QR ಕೋಡ್ ಮೂಲಕ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.