Home Karnataka State Politics Updates Happy News | ನಾಳೆ ಈ ಮುಖ್ಯಮಂತ್ರಿಗೆ ಮದುವೆ !

Happy News | ನಾಳೆ ಈ ಮುಖ್ಯಮಂತ್ರಿಗೆ ಮದುವೆ !

Hindu neighbor gifts plot of land

Hindu neighbour gifts land to Muslim journalist

ಮದುವೆ ಎನ್ನುವುದು ಜೀವನದಲ್ಲಿ ಒಂದು ಬಾರಿ ಆಗುವ ಕಾಲವೊಂದಿತ್ತು. ಆದರೆ ಈಗ ಒಂದಲ್ಲ ಹಲವಾರು ಬಾರಿ ಮದುವೆಯಾಗುವ ಘಟನೆಗಳು, ಸಂದರ್ಭಗಳು ನಡೆಯುವ ಪ್ರಸಂಗಗಳನ್ನು ನಾವು ನೋಡಿದ್ದೇವೆ. ಈಗ ಇಲ್ಲಿ ನಾವು ಹೇಳಲು ಹೊರಟಿರುವುದು ಕೂಡಾ ಮದುವೆ ವಿಷಯ. ಅದು ಕೂಡಾ ಯಾರಿಗೆ ಗೊತ್ತೇ? ಮುಖ್ಯಮಂತ್ರಿಗೆ. ಆಶ್ಚರ್ಯವಾಗುತ್ತಿದೆಯಾ? ಆದರೆ ಇದು ನಿಜವಾಗಲೂ ನಡೆಯುವ ವಿಷಯವೇ.

ಪಂಜಾಬ್ ನ ಮುಖ್ಯಮಂತ್ರಿ ಭಗವಂತ್ ಮಾನ್ ಎಂಬುವವರೇ ಈಗ ಮದುಮಗನಾಗಲು ಹೊರಟಿರುವ ಹುಡುಗ. ಮುಖ್ಯಮಂತ್ರಿ ಆಗೋ ಮೊದಲು ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದ ಭಗವಂತ್ ಮಾನ್ ಅವರು ಈಗ ಮುಖ್ಯಮಂತ್ರಿ ಸ್ಥಾನ ಸಿಕ್ಕ ನಂತರ ಎರಡನೇ ಮದುವೆಗೆ ತಯಾರಿ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಮಾನ್ ಅವರು ನಾಳೆ ಡಾ.ಗುರುಪ್ರೀತ್ ಕೌರ್ ಎಂಬ ಚಿರಯೌವನದ ಯುವತಿಯನ್ನು ಮದುವೆಯಾಗಲಿದ್ದಾರೆ. ಚಂಡೀಗಢದಲ್ಲಿ ಮದುವೆಯನ್ನು ಆಯೋಜಿಸಲಾಗುತ್ತಿದೆ.

ಪಂಜಾಬ್ ಸಿಎಂ ಭಗವಂತ್ ಅವರು ಈ ಮೊದಲು ಇಂದ್ರಪ್ರೀತ್ ಕೌರ್ ಎಂಬುವರ ಜತೆ ಮದುವೆ ಆಗಿತ್ತು. ಇವರಿಬ್ಬರ ಸಂಬಂಧ 2015ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಮದುವೆ ಮುರಿದು ಬಿದ್ದಿತ್ತು. ಪಂಜಾಬ್ ಸಿಎಂ ಭಗವಂತ್ ಮಾನೆ ಆರು ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಯುನೈಟೆಡ್ ಸ್ಟೇಟ್ನಲ್ಲಿ ವಾಸಿಸುತ್ತಿದ್ದಾರೆ.

ಈಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ನಾಳೆ ಅಂದರೆ ಗುರುವಾರ ಕುಟುಂಬಸ್ಥರ ಸಮ್ಮುಖದಲ್ಲಿ 2ನೇ ಮದುವೆಯಾಗಲಿದ್ದಾರೆ.
ಚಂಡೀಗಢದ ತಮ್ಮ ನಿವಾಸದಲ್ಲಿ ಡಾ. ಗುರುಪ್ರಿತ್ ಕೌರ್ ಜತೆ ಪಂಜಾಬ್ ಸಿಎಂ ಸಪ್ತಪದಿ ತುಳಿಯಲಿದ್ದಾರೆ.

6 ವರ್ಷದಿಂದ ಏಕಾಂಗಿಯಾಗಿದ್ದ ಭಗವಂತ್ ಮಾನ್ ಅವರು ಇದೀಗ ಮತ್ತೊಮ್ಮೆ ಸಂಸಾರಸ್ಥರಾಗಲು ಹೊರಟಿದ್ದಾರೆ. ಆದರೂ ಮುಖ್ಯಮಂತ್ರಿಗೇ ಮದುವೆ ಎಂದಾಗ ಜನರಲ್ಲಿ ಸಹಜವಾಗಿ ಕುತೂಹಲವಿರುವುದು ಸಾಮಾನ್ಯ.