Home News Cheetah arrest: ತಂತಿ ಬೇಲಿಗೆ ಸಿಲಿಕಿಕೊಂಡಿದ್ದ ಚಿರತೆ ರಕ್ಷಣೆ – ನಾಗರಹೊಳೆ ಅರಣ್ಯಕ್ಕೆ ಸ್ಥಳಾಂತರ

Cheetah arrest: ತಂತಿ ಬೇಲಿಗೆ ಸಿಲಿಕಿಕೊಂಡಿದ್ದ ಚಿರತೆ ರಕ್ಷಣೆ – ನಾಗರಹೊಳೆ ಅರಣ್ಯಕ್ಕೆ ಸ್ಥಳಾಂತರ

Hindu neighbor gifts plot of land

Hindu neighbour gifts land to Muslim journalist

Cheetah arrest: ಕೊಡಗು(Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಮಾಳೇಟಿರ ಗೌತಮ್ ಅವರ ಕಾಫಿ ತೋಟದಲ್ಲಿ ತಂತಿ ಬೇಲಿಗೆ ಚಿರತೆಯೊಂದು ಸಿಲುಕಿಕೊಂಡಿರುವ ಘಟನೆ ನಡೆದಿದೆ. ತಂತಿ ಬೇಲಿಗೆ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಚಿರತೆ ಕೂಗಾಡುತ್ತಿದ್ದಾಗ ಕಾಫಿ ತೋಟದ ಮಾಲೀಕರಿಗೆ ಚೀರಾಟ ಕೇಳಿದೆ. ಇದನ್ನರಿತ ಮಾಲೀಕರು ವನ್ಯ ಜೀವಿ ಮಂಡಳಿಗೆ ಸುದ್ದಿ ಮುಟ್ಟಿಸಿದ್ದಾರೆ,

ಮಾಹಿತಿ ತಿಳಿದ ತಕ್ಷಣ ತಂಡವಾಗಿ ಬಂದ ಮಂಡಳಿ ಸದಸ್ಯರು ಅರವಳಿಕೆ ಮದ್ದು ನೀಡಿ ಚಿರತೆ ರಕ್ಷಣೆ ಮಾಡಿದ್ದಾರೆ. ಆ ಬಳಿಕ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ನಂತರ ಚಿರತೆಯನ್ನು ನಾಗರಹೊಳೆ ಅರಣ್ಯಕ್ಕೆ ಸ್ಥಳಾಂತರ ಮಾಡಲಾಯ್ತು.

ಕಾಫಿ ತೋಟದ ಮಾಲೀಕರ ಮಾಹಿತಿಯಿಂದ ಸ್ಥಳಕ್ಕೆ ಬಂದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ನೇತ್ರತ್ವದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯ್ತು. ಈ ಸಂದರ್ಭದಲ್ಲಿ ಪಶುವೈದ್ಯ ಪಶುವೈದ್ಯ ರಮೇಶ್, ACF ಗೋಪಾಲ್, RFO ಶಿವರಾಮ್, ಅರವಳಿಕೆ ತಜ್ಞ ರಂಜನ್ ಹಾಗೂ ಆರಣ್ಯಧಿಕಾರಿಗಳು ಭಾಗಿಯಾಗಿದ್ದರು.