Home News Bagalakote : ಚಡ್ಡಿ ಗ್ಯಾಂಗ್ ಹಾವಳಿ – ಅಮೆರಿಕದಲ್ಲಿ ಕುಳಿತು ಬಾಗಲಕೋಟೆ ಮನೆಯ ಕಳ್ಳತನ ತಪ್ಪಿಸಿದ...

Bagalakote : ಚಡ್ಡಿ ಗ್ಯಾಂಗ್ ಹಾವಳಿ – ಅಮೆರಿಕದಲ್ಲಿ ಕುಳಿತು ಬಾಗಲಕೋಟೆ ಮನೆಯ ಕಳ್ಳತನ ತಪ್ಪಿಸಿದ ಯುವತಿ

Hindu neighbor gifts plot of land

Hindu neighbour gifts land to Muslim journalist

Bagalakote : ಟೆಕ್ಕಿ ಯುವತಿಯೊಬ್ಬರು ಅಮೆರಿಕದಲ್ಲಿ ಕುಳಿತೇ ಕರ್ನಾಟಕದ ಬಾಗಲಕೋಟೆಯ ಮುಧೋಳದಲ್ಲಿರುವ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿದ್ದು, ಈ ಸುದ್ದಿ ಭಾರಿ ವೈರಲಾಗುತ್ತಿದೆ.

ಹೌದು, ಮುಧೋಳ ನಗರದ ಸಿದ್ರಾಮೇಶ್ವರ ಕಾಲೋನಿಯಲ್ಲಿ ನೆಲೆಸಿರುವ ನಿವೃತ್ತ ಎಂಜಿನಿಯರ್‌ ಹನಮಂತಗೌಡ ಅವರ ಪುತ್ರಿ ಶೃತಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ವಿದೇಶದಲ್ಲಿದ್ದರೂ ಸಮಯಪ್ರಜ್ಞೆ ಮೆರೆಯುವ ಮೂಲಕ ಮನೆಗೆ ನುಗ್ಗಿದ್ದ ಕಳ್ಳರನ್ನು ಓಡಿಸುವಲ್ಲಿ ಶೃತಿ ಯಶಸ್ವಿಯಾಗಿದ್ದಾರೆ.

ಏನಿದು ಘಟನೆ?

ಅಮೇರಿಕದಲ್ಲಿ ನೆಲೆಸಿರುವ ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಸಂಕಪ್ಪನವರ ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ .ಕೆಲ ವರ್ಷಗಳ ಹಿಂದೆ ಸ್ವದೇಶ ಆಗಮಿಸಿದ್ದಾಗ ಶೃತಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಳವಡಿಸಿದ್ದು ಮಾತ್ರವಲ್ಲ ಅದರ ದೃಶ್ಯ ತನ್ನ ಮೊಬೈಲಿಗೆ ಬರುವಂತೆ ಸಿಂಕ್‌ ಮಾಡಿದ್ದರು. ಶ್ರುತಿ ತನ್ನ ಮೊಬೈಲ್ಗೆ ಸಿಸಿ ಕ್ಯಾಮರಾ ಕನೆಕ್ಟ್ ಮಾಡಿಕೊಂದ್ದು, ಅಲ್ಲಿಂದಲೇ ಮನೆಯವರನ್ನು ಗಮನಿಸುತ್ತಿದ್ದರು ಮುಧೋಳದಲ್ಲಿ ಮಧ್ಯರಾತ್ರಿ ಆಗಿದ್ದರೆ ಅಮೆರಿಕದಲ್ಲಿ ಮಧಾಹ್ನದ 3:30ರ ಸಮಯವದು. ಹೀಗೆ ಮೊಬೈಲ್‌ ನೋಡುತ್ತಿದ್ದಾಗ ಮನೆಗೆ ಕಳ್ಳರು ನುಗ್ಗಿದ ದೃಶ್ಯವನ್ನು ನೋಡಿ ಕೂಡಲೇ ಶೃತಿ ಪೋಷಕರಿಗೆ ಕರೆ ಮಾಡಿದ್ದಾರೆ.

ತಕ್ಷಣ ಎಚ್ಚೆತ್ತ ಪೋಷಕರು ಬಾಗಿಲು ತೆರೆಯದೇ ಮನೆಯ ಎಲ್ಲಾ ಲೈಟ್ ಆನ್‌ ಮಾಡಿ ಕೂಗಾಡಿದ್ದಾರೆ. ದಿಢೀರ್‌ ಮನೆಯ ಲೈಟ್‌ ಆನ್‌ ಆಗಿದ್ದನ್ನು ಕಂಡು ಕಳ್ಳರು ಶಾಕ್‌ಗೆ ಒಳಗಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಎಚ್ಚೆತ್ತ ಹನುಮಂತಗೌಡ, ಮನೆ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ.

ಇದೀಗ ಚಡ್ಡಿ ಗ್ಯಾಂಗ್ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಮುಧೋಳ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಮುಧೋಳ ಕಳ್ಳತನ ಪ್ರಕರಣ ಅಮೆರಿಕದಿಂದ ಬಯಲಾಗಿದ್ದು, ಪೊಲೀಸರು ಚಡ್ಡಿ ಗ್ಯಾಂಗ್ ಅನ್ನು ಆದಷ್ಟು ಬೇಗ ಹಿಡಿದು, ಮುಂದೆ ಆಗಬಹುದಾದ ಇನ್ನಷ್ಟು ಕಳ್ಳತನ ಪ್ರಕರಣಗಳನ್ನು ತಡೆಯಬೇಕಾಗಿದೆ.

Terrorists Entry: ನೇಪಾಳ ಗಡಿಯ ಮೂಲಕ ಬಿಹಾರ ಪ್ರವೇಶಿಸಿದ 3 ಪಾಕ್ ಭಯೋತ್ಪಾದಕರು – ಹೈ ಅಲರ್ಟ್ ಘೋಷಣೆ