Home News ಬೆಕ್ಕಿಗೆ ಆಟ ಚಿರತೆಗೆ ಪ್ರಾಣಸಂಕಟ!!ಬೆಕ್ಕು ಹಾಗೂ ಚಿರತೆ ನಡುವೆ ನಡೆದ ಜಟಾಪಟಿಯಲ್ಲಿ ಚಿರತೆ ಬಾವಿಗೆ!!

ಬೆಕ್ಕಿಗೆ ಆಟ ಚಿರತೆಗೆ ಪ್ರಾಣಸಂಕಟ!!ಬೆಕ್ಕು ಹಾಗೂ ಚಿರತೆ ನಡುವೆ ನಡೆದ ಜಟಾಪಟಿಯಲ್ಲಿ ಚಿರತೆ ಬಾವಿಗೆ!!

Hindu neighbor gifts plot of land

Hindu neighbour gifts land to Muslim journalist

ಯಾವುದೇ ಒಬ್ಬ ವ್ಯಕ್ತಿ ಎಂತಹುದೇ ಬೇಸರದಲ್ಲಿ ಇದ್ದರೂ ಈಗಿನ ಕಾಲದಲ್ಲಿ ಅದು ಹೆಚ್ಚು ಕಾಲ ಇರುವುದಿಲ್ಲ. ಇದಕ್ಕೆ ಕಾರಣವೇ ಜಾಲತಾಣಗಳಲ್ಲಿ ಬರುವ ಹಾಸ್ಯ ವಿಡಿಯೋಗಳು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ, ಅದರಂತೆ ಇಲ್ಲೊಂದು ಬೆಕ್ಕು ತನ್ನ ಸಾಮರ್ಥ್ಯವನ್ನು ಯಾವ ರೀತಿ ಬುದ್ಧಿವಂತಿಗೆಯಿಂದ ತೋರ್ಪಡಿಸಿದೆ ಎಂಬುದು ಇದೊಂದು ವಿಡಿಯೋ ಮೂಲಕ ಎಲ್ಲರ ಮನ ಗೆದ್ದಿದೆ.

ಪ್ರಾಣಿಗಳ ನಡುವಿನ ತುಂಟಾಟ, ಕೀಟಲೆ ಜತೆಗೆ ಹಾಸ್ಯದ ಕೆಲವು ಪ್ರಸಂಗಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ. ಅಂಥಹುದೇ ಒಂದು ಚಿರತೆ ಮತ್ತು ಬೆಕ್ಕಿನ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಚಿರತೆ ಮತ್ತು ಬೆಕ್ಕಿನ ನಡುವಿನ ಜಟಾಪಟಿಯ ವಿಡಿಯೋ ಸಕ್ಕತ್ ಮಜಾ ತರಿಸಿದೆ. ಚಿರತೆ ಮತ್ತು ಬೆಕ್ಕುವಿನ ಭರ್ಜರಿ ಫೈಟ್ ನಡೆಯುತ್ತಿದೆ. ಬಾವಿಯ ಅಂಚಿನಲ್ಲಿ ನಡೆಯುತ್ತಿರುವ ಬೆಕ್ಕು, ಚಿರತೆಯ ಫೈಟ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಕೆರಳಿಸುವಂತಿದೆ ಈ ವಿಡಿಯೋ.

ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಚಿರತೆಯನ್ನು ವಿಡಿಯೋದಲ್ಲಿ ನೋಡಬಹುದು. ಚಾಲಾಕಿ ಬೆಕ್ಕು ದೈತ್ಯಾಕಾರದ ಚಿರತೆಯನ್ನೇ ಬಾವಿಗೆ ಬೀಳಿಸಿದೆ. ಚುರುಕುತನದಿಂದ ಹಾರಿ ತಪ್ಪಿಸಿಕೊಳ್ಳುತ್ತಿರುವ ಬೆಕ್ಕಿನ ಬುದ್ಧಿವಂತಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ. ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಚಿರತೆ ಬಾವಿಯಲ್ಲಿ ಬಿದ್ದಿತು. ನಂತರ ಚಿರತೆಯನ್ನು ರಕ್ಷಿಸಲಾಗಿದೆ. ಅದರ ವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ನಾಸಿಕ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಂಕಜ್ ಎಎನ್ಐ ಸುದ್ದಿ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು 1 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬೆಕ್ಕಿನ ಶೌರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಬೆಕ್ಕು ಮನುಷ್ಯರಿಗಿಂತಲೂ ಧೈರ್ಯಶಾಲಿ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.