Home News Mangaluru: ಕಾರು ಡಿಕ್ಕಿ ಹೊಡೆಸಿ ನೆರೆಮನೆಯಾತನ ಕೊಲೆಗೆ ಯತ್ನ ಪ್ರಕರಣ; ಆರೋಪಿಗೆ ನ್ಯಾಯಾಂಗ ಬಂಧನ!

Mangaluru: ಕಾರು ಡಿಕ್ಕಿ ಹೊಡೆಸಿ ನೆರೆಮನೆಯಾತನ ಕೊಲೆಗೆ ಯತ್ನ ಪ್ರಕರಣ; ಆರೋಪಿಗೆ ನ್ಯಾಯಾಂಗ ಬಂಧನ!

Hindu neighbor gifts plot of land

Hindu neighbour gifts land to Muslim journalist

Mangaluru: ಬೈಕ್‌ ಸವಾರನಿಗೆ ಗುದ್ದಿ ಆತನ ಜೊತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಆರೋಪಿ ಸತೀಶ್‌ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಘಟನೆ ಮಂಗಳೂರಿನ ಬಿಜೈ ಕಾಪಿಕಾಡ್‌ 6ನೇ ಕ್ರಾಸ್‌ನಲ್ಲಿ ನಡೆದಿದೆ.

ಮುರಳಿ ಪ್ರಸಾದ್‌ ಎನ್ನುವಾತ ಬೈಕ್‌ ಮೇಲೆ ತೆರಳುತ್ತಿದ್ದು, ಈತನಿಗೆ ಗುದ್ದಿ ಹತ್ಯೆ ಮಾಡುವ ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಕಾಂಪೌಂಡ್‌ ಮೇಲೆ ಬಿದ್ದು ನೇತಾಡಿದ್ದಾಳೆ. ನಂತರ ಸ್ಥಳೀಯರು ಓಡೋಡಿ ಬಂದಿದ್ದು ಮಹಿಳೆಯ ರಕ್ಷಣೆ ಮಾಡಿದ್ದಾರೆ.

ಕಾರು ಚಾಲಕ ಸತೀಶ್‌ ಕುಮಾರ್‌ ಈ ಅಪಘಾತ ಮಾಡಿದ ವ್ಯಕ್ತಿ.

ಅಕ್ಕಪಕ್ಕ ಮನೆಯವರಾದ ಮುರಳಿ ಪ್ರಸಾದ್‌, ಸತೀಶ್‌ ಕುಮಾರ್‌ ನಡುವೆ ತಕರಾರು ಇತ್ತು. ಈ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಹಾಗಾಗಿ ಸತೀಶ್‌ ಕುಮಾರ್‌ ಮುರಳಿ ಪ್ರಸಾದ್‌ನನ್ನು ಕೊಲ್ಲುವ ಸ್ಕೆಚ್‌ ಹಾಕಿದ್ದ. ಆದರೆ ಮಾ.13 ರಂದು ಮುರಳಿ ಪ್ರಸಾದ್‌ ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡಿದ ಸತೀಶ್‌ ಕುಮಾರ್‌ ಕಾರಿನಿಂದ ಗುದ್ದಲು ಪ್ರಯತ್ನ ಮಾಡಿದ್ದಾನೆ. ಗುದ್ದಿದ ಹೊಡೆತಕ್ಕೆ ಬೈಕ್ ಸವಾರ ಸತೀಶ್‌ ಕುಮಾರ್‌ ಅವರು ಮುಂದಕ್ಕೆ ಹೋಗಿ ಕೆಳಗೆ ಬಿದ್ದಿದ್ದಾರೆ. ಆದರೆ ರಸ್ತೆಯನ್ನು ನಡೆದುಕೊಂಡು ಹೋಗುವ ಮಹಿಳೆಗೂ ವ್ಯಕ್ತಿ ಅತಿ ರಭಸದಿಂದ ಗುದ್ದಿದ್ದಾನೆ. ಇದು ವೀಡಿಯೋದಲ್ಲಿ ಸೆರೆಯಾಗಿದೆ.

ಕಾರು ಚಾಲಕ ಸತೀಶ್‌ ಕುಮಾರ್‌ ವಿರುದ್ಧ ಉರ್ವಾ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಕೇಸ್‌, ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಹಿಟ್‌ ಆಂಡ್‌ ರನ್‌ ಕೇಸ್‌ ಬುಕ್‌ ಆಗಿದೆ. ಗಾಯಗೊಂಡ ಪಾದಾಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.