Home News Amruta Snana: ಕುಂಭಮೇಳಕ್ಕೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಮನೆಯಲ್ಲಿದ್ದುಕೊಂಡೇ ಈ ಕೆಲಸ ಮಾಡಿ, ಅಮೃತ ಸ್ನಾನ...

Amruta Snana: ಕುಂಭಮೇಳಕ್ಕೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಮನೆಯಲ್ಲಿದ್ದುಕೊಂಡೇ ಈ ಕೆಲಸ ಮಾಡಿ, ಅಮೃತ ಸ್ನಾನ ಮಾಡಿದಷ್ಟ ಪುಣ್ಯ ನಿಮ್ಮದಾಗುತ್ತೆ

Hindu neighbor gifts plot of land

Hindu neighbour gifts land to Muslim journalist

Amruta Snana: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ದಲ್ಲಿ (Prayagraj) ಜನವರಿ 13 ರಿಂದ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ-ವಿದೇಶದಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ಮಹಾಕುಂಭಮೇಳ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ತ್ರಿವೇಣಿ ಸಂಗಮದಲ್ಲಿ 15 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಇನ್ನು ಇಂದು ಅಮೃತ ಸ್ನಾನ ನಡೆಯಲಿದ್ದು ಇದಕ್ಕಾಗಿ ಕೋಟ್ಯಂತರ ಜನ ಪ್ರಯಾಗ್ರಾಜ್ ಗೆ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ವಿಶೇಷ ರೈಲು ಸೌಲಭ್ಯವನ್ನು ಕಲ್ಪಿಸಿದೆ.

ಅಮೃತಸ್ನಾನಕ್ಕೆ ಆಧ್ಯಾತ್ಮದಲ್ಲಿ ಅನೇಕ ರೀತಿಯ ಮಹತ್ವಗಳಿವೆ. ಮೌನಿ ಅಮವಾಸ್ಯೆಯಂದು ಅಮೃತ ಸ್ನಾನ ಕೈಗೊಂಡವರು ತಪ್ಪದೇ ಈ ಒಂದಿಷ್ಟು ಕಾರ್ಯಗಳನ್ನು ಮಾಡಿಕೊಂಡು ಅಮೃತಸ್ನಾನದ ಲಾಭ ಪಡೆಯಬೇಕು ಎಂದು ಹೇಳಲಾಗುತ್ತದೆ. ಇನ್ನು ಅನೇಕ ಮಂದಿಗೆ ಕುಂಭಮೇಳದಲ್ಲಿ ಪಾಲ್ಗೊಂಡು ಅಮೃತ ಸ್ನಾನವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಿನ್ನೆಲೆಯಲ್ಲಿ ನೀವು ಮನೆಯಲ್ಲಿ ಇದ್ದುಕೊಂಡು ಈ ಕೆಲಸಗಳನ್ನು ಮಾಡಿದರೆ ಅಮೃತ ಸ್ನಾನ ಮಾಡಿದಷ್ಟೇ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ನೀವು ಮಾಡಬೇಕಾದ ಕೆಲಸವೇನು ಗೊತ್ತಾ. ಎಲ್ಲಿದೆ ನೋಡಿ ಡಿಟೇಲ್ಸ್.

ಧಾರ್ಮಿಕ ನಂಬಿಕೆ:
ಮೌನಿ ಅಮಾವಾಸ್ಯೆಯಂದು ಸ್ನಾನ ಮತ್ತು ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ ಎಂಬ ಹಿಂದೂ ಧಾರ್ಮಿಕ ನಂಬಿಕೆಯಿದೆ. ಈ ದಿನ, ಪೂರ್ವಜರಿಗೆ ಪಿಂಡ ಪ್ರದಾನವನ್ನು ಸಹ ಮಾಡಲಾಗುತ್ತದೆ. ಈ ದಿನದಂದು ಮಾಡುವ ತರ್ಪಣ ಮತ್ತು ಪಿಂಡದಾನದ ಮೂಲಕ ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಮೌನಿ ಅಮವಾಸ್ಯೆ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಮಾಸದ ಅಮಾವಾಸ್ಯೆಯ ದಿನವನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಮಾಘ ಮಾಸದ ಅಮಾವಾಸ್ಯೆಯು ಜನವರಿ 28 ರಂದು ಸಂಜೆ 7.35 ಕ್ಕೆ ಪ್ರಾರಂಭವಾಗಲಿದೆ. ಈ ದಿನಾಂಕವು ಜನವರಿ 29 ರಂದು ಸಂಜೆ 6:05 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯ ತಿಥಿಯ ಪ್ರಕಾರ ಜನವರಿ 29 ರಂದು ಮೌನಿ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಇರುತ್ತದೆ. ಅದೇ ದಿನ ಮಹಾಕುಂಭದಲ್ಲಿ ಎರಡನೇ ಅಮೃತ ಸ್ನಾನ ಕೂಡ ನಡೆಯಲಿದೆ.

ಈ ಕ್ರಮಗಳನ್ನು ಮಾಡಿ:
ಮೌನಿ ಅಮಾವಾಸ್ಯೆಯಂದು, ಕೆಲವು ಕಾರಣಗಳಿಂದ ನೀವು ಮಹಾಕುಂಭ ಅಥವಾ ಯಾವುದೇ ಸ್ಥಳಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ. ನಂತರ ಆ ಗಂಗಾಜಲದಿಂದ ಸ್ನಾನ ಮಾಡಿ. ಸ್ನಾನದ ಸಮಯದಲ್ಲಿ ಗಂಗಾ, ಯಮುನೆ, ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ದಹನ ಅಸ್ಮಿನ್ ಸನ್ನಿಧಿಂ ಕುರು । ಈ ಗಂಗಾ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನೀವು ಮಹಾಕುಂಭದ ಅಮೃತ ಸ್ನಾನಕ್ಕೆ ಸಮಾನವಾದ ಪುಣ್ಯವನ್ನು ಪಡೆಯಬಹುದು.