Home News ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

Hindu neighbor gifts plot of land

Hindu neighbour gifts land to Muslim journalist

ಕೆಲವರಿಗೆ ತಮ್ಮ ಮರ್ಯಾದೆ ಎ ಲ್ಲದಂಕಿಂತ ಮುಖ್ಯ ವಾಗಿರುತ್ತದೆ.ಅದಕ್ಕಾಗಿ ಅವರು ಏನು ಮಾಡಲು ಹೇಸುವುದಿಲ್ಲ. ಇಂಥ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.ತಾನು ಸಾಕಿ ಬೆಳೆಸಿದ ಮಗಳು ಪ್ರೀತಿಸಿ ಮದುವೆ ಅದಲೆಂದು ಆಕೆಯ ತಂದೆ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಾನೆ.

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ತನ್ನ ಇಚ್ಛೆಯ ವಿರುದ್ಧವಾಗಿ ಮಗಳು ಮದುವೆಯಾಗಿದಕ್ಕೆ ಇಬ್ಬರು ಹೆಣ್ಣುಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳನ್ನು ಸೇರಿಸಿದಂತೆ ಕುಟುಂಬದ 7 ಮಂದಿಯನ್ನು ವ್ಯಕ್ತಿಯೋರ್ವ ಜೀವಂತವಾಗಿ ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ

.ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಜಫರ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮನ್ಜೂರ್ ಹುಸೇನ್ ಎಂದು ಗುರುತಿಸಲಾಗಿದೆ. ಮನ್ಜೂರ್ ಹುಸೇನ್ ಮನೆಗೆ ಬೆಂಕಿ ಹಚ್ಚಿದ್ದು, ಈ ವೇಳೆ ಮನೆಯಲ್ಲಿದ್ದ ಇಬ್ಬರು ಪುತ್ರಿಯರಾದ ಫೌಝಿಯಾ ಬೀಬಿ ಮತ್ತು ಖುರ್ಷಿದ್ ಮಾಯ್, ಆತನ ಪತ್ನಿ, ಮಗ, ತಾಯಿ, ತಂದೆ ಸೇರಿಸಿದಂತೆ ನಾಲ್ವರು ಅಪ್ರಾಪ್ತ ಮಕ್ಕಳು ಬೆಂಕಿಯಿಂದ

ಸಾವನ್ನಪ್ಪಿದ್ದಾರೆ.ಘಟನೆಯಿಂದ ಬಚಾವ್ ಆಗಿರುವ ಫೌಝಿಯಾ ಬೀಬಿ ಪತಿ ಮೊಹಬೂಬ್ ಅಹ್ಮದ್ ಈ ಕುರಿತಂತೆ ಮಾವ ಮನ್ಜೂರ್ ಹುಸೇನ್ ಮತ್ತು ಆತನ ಪುತ್ರ ಸಬೀರ್ ಹುಸೇನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ವ್ಯಾಪಾರಕ್ಕೆಂದು ಮುಲ್ತಾನ್‍ನಲ್ಲಿದ್ದೆ. ಆದರೆ ನಾನು ಹಿಂದಿರುಗಿ ಮನೆಯ ಬಳಿ ಬಂದಾಗ ಬೆಂಕಿಯಿಂದ ಮನೆ ಹೊತ್ತಿ ಉರಿಸುತ್ತಿರುವುದನ್ನು ನೋಡಿದೆ ಮತ್ತು ಮನ್ಜೂರ್ ಹುಸೇನ್, ಸಬೀರ್ ಹುಸೇನ್ ಇಬ್ಬರು ಹೋಗುತ್ತಿರುವುದನ್ನು ಕಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.