Home News BSNL Recharge Plan : ಬಿಎಸ್‌ಎನ್‌ಎಲ್‌ ಗ್ರಾಹಕರೇ ಈ ರೀಚಾರ್ಜ್‌ ಪ್ಲ್ಯಾನ್‌ ಹಾಕಿ, 1095GB ಡೇಟಾ...

BSNL Recharge Plan : ಬಿಎಸ್‌ಎನ್‌ಎಲ್‌ ಗ್ರಾಹಕರೇ ಈ ರೀಚಾರ್ಜ್‌ ಪ್ಲ್ಯಾನ್‌ ಹಾಕಿ, 1095GB ಡೇಟಾ ನಿಮಗೆ ಉಚಿತ ! ಇನ್ನೂ ಹಲವಾರು ಪ್ರಯೋಜನಗಳು ನಿಮಗಾಗಿ!

Hindu neighbor gifts plot of land

Hindu neighbour gifts land to Muslim journalist

ಹಿಂದಿನಿಂದಲೂ ಭಾರೀ ಜನಪ್ರಿಯತೆಯನ್ನು ಪಡೆದ ಟೆಲಿಕಾಂ ಕಂಪನಿಯೆಂದರೆ ಅದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಆಗಿದೆ. ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಆಫರ್ಸ್​ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಇದೀಗ ಟೆಲಿಕಾಂ ಕಂಪನಿಗಳಲ್ಲಿ ಜಿಯೋ, ಏರ್​​ಟೆಲ್​, ವೊಡಫೋನ್ ಐಡಿಯಾ ಈ ರೀತಿಯ ಹಲವಾರು ಖಾಸಗಿ ಕಂಪನಿಗಳಿವೆ. ಆದರೆ ಇವೆಲ್ಲದಕ್ಕೆ ಪೈಪೋಟಿ ನೀಡುವಂತಹ ಸರ್ಕಾರಿ ಕಂಪನಿಯೆಂದರೆ ಬಿಎಸ್​​ಎನ್​ಎಲ್​ ಕಂಪನಿ ಆಗಿದೆ. ಸದ್ಯ ಬಿಎಸ್​ಎನ್​ಎಲ್​ ಇದೀಗ ತನ್ನ ಗ್ರಾಹಕರಿಗಾಗಿ ಭಾರೀ ಅಗ್ಗದ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.

ಹೌದು ಬಿಎಸ್​ಎನ್​ಎಲ್​ ಕಂಪನಿ ಗ್ರಾಹಕರಿಗೆ ರೂ 1,999 ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ಕಂಪನಿಯ ಈ ಯೋಜನೆಯು ಒಂದು ವರ್ಷದ ಮಾನ್ಯತೆಯೊಂದಿಗೆ 1,999 ರೂ ರಿಚಾರ್ಜ್ ಮಾಡಿದರೆ ಇದರ ಪ್ರಕಾರ ಗ್ರಾಹಕರು ತಿಂಗಳಿಗೆ ಕೇವಲ 166 ರೂಪಾಯಿ ಪಾವತಿಸದಂತಾಗುತ್ತದೆ. ಜೊತೆಗೆ ಈ ಯೋಜನೆಯ ಮೂಲಕ ಗ್ರಾಹಕರು ಒಂದು ವರ್ಷ ಯಾವುದೇ ನೆಟ್​ವರ್ಕ್​​ಗೆ ಅನಿಯಮಿತವಾಗಿ ಉಚಿತ ಕರೆಯನ್ನು ಮಾಡಬಹುದಾಗಿದೆ. ಒಮ್ಮೆ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ಯಾವುದೇ ಯೋಜನೆಗಳನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗಿಲ್ಲ. ಯೋಜನೆಯಂತೆ ರೂ 1,999 ಪಾವತಿಸಿದರೆ ಒಟ್ಟು 365 ದಿನಗಳು ಮಾನ್ಯತೆ ಪಡೆಯಬಹುದಾಗಿದೆ .

ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3ಜಿಬಿ ಡೇಟಾವನ್ನು ನೀಡಲಾಗುತ್ತದೆ. ಈ ಮೂಲಕ ಬಳಕೆಧಾರರು ವರ್ಷದಲ್ಲಿ ಒಟ್ಟು 1095 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ.
ಇದಲ್ಲದೆ, ಈ ಯೋಜನೆ ಮೂಲಕ ನೀವು ಪ್ರತಿದಿನ 100 ಎಸ್​ಎಮ್​ಎಸ್​ ಅನ್ನು ಉಚಿತವಾಗಿ ಮಾಡಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ ಪ್ರತಿದಿನ 3ಜಿಬಿ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವು 40Kbps ಗೆ ಕಡಿಮೆ ಆಗಲಿದೆ.

ಅಧಿಕ ಡೇಟಾ ಬಳಸುವವರಿಗೆ ಬಿಎಸ್​ಎನ್​ಎಲ್​ನ ಈ ಯೋಜನೆಯು ಬಹಳ ಉತ್ತಮವಾಗಿದೆ. ಇದರ ಹೊರತು ಬಿಎಸ್​ಎನ್​ಎಲ್​ನ ಈ ಯೋಜನೆ ಮತ್ತು ಇತರೆ ರೀಚಾರ್ಜ್​ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದರೆ ಕಂಪೆನಿಯ ಅಧಿಕೃತ ವೆರ್ಬಸೈಟ್​ನಲ್ಲಿ ನೋಡಬಹುದಾಗಿದೆ.

ಒಟ್ಟಿನಲ್ಲಿ ಬಿಎಸ್​ಎನ್​ಎಲ್​ನ ಕಡೆಯಿಂದ ಗ್ರಾಹಕರಿಗೆ ಒಳ್ಳೆಯ ರಿಚಾರ್ಜ್ ಆಫರ್ ನೀಡಲಾಗಿದೆ. ಈ ಮೇಲಿನ ರಿಚಾರ್ಜ್ ಮಾಡಿದಲ್ಲಿ ನಿಮಗೆ ಒಂದು ವರ್ಷ ರಿಚಾರ್ಜ್ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರಲ್ಲ.