Home News ಉಡುಪಿ : ಕಾಲೇಜ್‌ ವಾರ್ಡನ್‌ನಿಂದ ಅಮಾನುಷ ಕೃತ್ಯ | ಈ ಕಾರಣಕ್ಕೆ ನಾಯಿಯನ್ನೇ ಕೊಂದ ಪಾಪಿ

ಉಡುಪಿ : ಕಾಲೇಜ್‌ ವಾರ್ಡನ್‌ನಿಂದ ಅಮಾನುಷ ಕೃತ್ಯ | ಈ ಕಾರಣಕ್ಕೆ ನಾಯಿಯನ್ನೇ ಕೊಂದ ಪಾಪಿ

Hindu neighbor gifts plot of land

Hindu neighbour gifts land to Muslim journalist

ಮನುಷ್ಯ ಯಾವಾಗ ಯಾವ ರೀತಿ ವರ್ತಿಸುತ್ತಾನೆ ಎನ್ನುವುದು ಊಹಿಸಲು ಸಹ ಸಾಧ್ಯವಿಲ್ಲ. ಕೆಲವೊಮ್ಮೆ ಕ್ರೂರ ಮೃಘ ಮತ್ತು ಮನುಷ್ಯ ನಿಗೆ ವ್ಯತ್ಯಾಸ ಇರುವುದಿಲ್ಲ. ಹೌದು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮೂಕ ಪ್ರಾಣಿ ನಾಯಿಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಕಾಲೇಜು ವಠಾರದಲ್ಲಿ ನಾಯಿಯೊಂದು ಹುಡುಗಿಯ ಜೊತೆ ಆಟವಾಡಿದ್ದಕ್ಕೆ ಕಾಲೇಜು ವಾರ್ಡನ್ ನಾಯಿಯನ್ನೇ ಕೊಂದಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಹಾಸ್ಟೆಲ್ ವಾರ್ಡನ್ ರಾಜೇಶ್ ಎಂಬಾತ ಹುಡುಗಿ ಜೊತೆ ಆಡಿದ್ದಕ್ಕೆ ನಾಯಿಯನ್ನೇ ಕೊಂದಿದ್ದು ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ವಾರ್ಡನ್ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಮಂಜುಳಾ ಕರ್ಕೇರ ಎಂಬುವರು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇನ್ನು ವಾರ್ಡನ್ ಮಾಡಿದ ಕೃತ್ಯ ಜಾಲತಾಣದಲ್ಲಿ ವೀಕ್ಷಿಸಿದ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತ ಪಡಿಸಿದ್ದು ಆತನಿಗೆ ಸರಿಯಾದ ಶಿಕ್ಷೆ ವಿಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.