Home News CM Siddaramaiah : ಪಾಕಿಸ್ತಾನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಕುರಿತು ಬ್ರೇಕಿಂಗ್ ನ್ಯೂಸ್- ಕರ್ನಾಟಕ ಸಿಎಂ ಅನ್ನು...

CM Siddaramaiah : ಪಾಕಿಸ್ತಾನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಕುರಿತು ಬ್ರೇಕಿಂಗ್ ನ್ಯೂಸ್- ಕರ್ನಾಟಕ ಸಿಎಂ ಅನ್ನು ಕೊಂಡಾಡಿದ ನ್ಯೂಸ್ ಚಾನೆಲ್ ಗಳು

Hindu neighbor gifts plot of land

Hindu neighbour gifts land to Muslim journalist

CM Siddaramaiah : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಈಗಾಗಲೇ ಪಾಕ್ ಗೆ ಭಾರತವು ಕೆಲವು ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ. ಈ ಬೆನ್ನಲ್ಲೇ ಇಂಡಿಯಾ ಮತ್ತು ಪ್ಯಾಕ್ ಯುದ್ಧ ಆಗುವುದು ಪಕ್ಕ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ನಡುವೆಯೇ ಪಾಕಿಸ್ತಾನದ ನ್ಯೂಸ್ ಚಾನೆಲ್ ಗಳು, ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಕೊಂಡಾಡಿವೆ.

ಹೌದು, ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ನಡೆಯಲಿದೆ ಎಂದು ಹರಿದಾಡುತ್ತಿರುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದು, ʼಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾದಂತಹ ಅಗತ್ಯ ಇಲ್ಲ. ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಷ್ಟೆ. ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡುವಂತಹ ಕೆಲಸವನ್ನು ಮಾಡಬೇಕು. ಯುದ್ಧದ ಪರ ಇಲ್ಲ ನಾವು. ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು, ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕುʼ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ರಾಜ್ಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು ಹಾಗೂ ಇದೀಗ ಪಾಕಿಸ್ತಾನಕ್ಕೂ ಸಹ ತಲುಪಿದೆ. ಅಲ್ಲಿನ ಸುದ್ದಿ ವಾಹಿನಿಗಳು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದು, ಸಿದ್ದರಾಮಯ್ಯನವರ ಭಾರತದ ಯುದ್ಧ ಮಾಡುವ ಅಗತ್ಯವಿಲ್ಲ, ಬದಲಾಗಿ ಭದ್ರತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಸರಿ ಇದೆ ಹಾಗೂ ಪ್ರಬುದ್ಧವಾದ ಹೇಳಿಕೆ ಎಂದು ಸಿದ್ದರಾಮಯ್ಯನವರನ್ನು ಹೊಗಳಿವೆ.

ಇದರ ಬೆನ್ನಲ್ಲೇ ಕೆಲವು ನೆಟ್ಟಿಗರು ಸಿದ್ದರಾಮಯ್ಯ ಈ ರೀತಿ ಹೇಳಿಕೆಯನ್ನು ನೀಡಬಾರದಿತ್ತು, ಪಾಕಿಸ್ತಾನ ಈ ರೀತಿ ಭಿತ್ತರಿಸಬಾರದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.