Home News ಪ್ರೀತಿಸಿದ ಹುಡುಗನ ಜತೆ ಪರಾರಿಯಾಗಲು ಪೋಷಕರಿಗೆ ವಿಷವುಣಿಸಿದ ಯುವತಿ

ಪ್ರೀತಿಸಿದ ಹುಡುಗನ ಜತೆ ಪರಾರಿಯಾಗಲು ಪೋಷಕರಿಗೆ ವಿಷವುಣಿಸಿದ ಯುವತಿ

Hindu neighbor gifts plot of land

Hindu neighbour gifts land to Muslim journalist

ಬಾಯ್ ಫ್ರೆಂಡ್ ಜೊತೆ ಓಡಿ ಹೋಗಲು ಹೊಂಚು ಹಾಕಿದ ಯುವತಿಯೋರ್ವಳು ತನ್ನ ಕುಟುಂಬದವರಿಗೆ ವಿಷವುಣಿಸಿ ಆಪತ್ತಿಗೆ ಸಿಲುಕಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.

ಎಸ್ಎಸ್‍ಎಲ್‍ಸಿ ವರೆಗೆ ಓದಿರುವ 18 ವರ್ಷ ವಯಸ್ಸಿನ ಖುಷ್ಬು ತಾನು ವಾಸಿಸುತ್ತಿದ್ದ ಏರಿಯಾದ ಹುಡುಗ ಸಚಿನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಕಳೆದ ಎರಡು ವರ್ಷಗಳ ಹಿಂದೆ ಆತನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆಕೆಯ ಮನೆಯವರು ವಾಪಸ್ ಮನೆಗೆ ಕರೆದು ತಂದು ಬುದ್ಧಿವಾದ ಹೇಳಿದ್ದರು. ಹಾಗೂ ಸಚಿನ್ ಜೊತೆ ಸಂಪರ್ಕ ಕಡಿದುಕೊಳ್ಳುವಂತೆ ತಾಕಿತು ಮಾಡಿದ್ದರು.

ಖುಶ್ಬು ತನಗೆ 18 ವರ್ಷ ವಯಸ್ಸು ತುಂಬುವ ವರೆಗೆ ಮನೆಯಲ್ಲಿಯೇ ಇದ್ದಳು. ಇತ್ತೀಚಿಗೆ 18ನೇ ವರ್ಷಕ್ಕೆ ಕಾಲಿಟ್ಟು ಬರ್ತ್‍ಡೇ ಆಚರಿಸಿಕೊಂಡಿದ್ದಳು. ಹುಟ್ಟುಹಬ್ಬದ ಎರಡು ದಿನಗಳ ನಂತರ (ಸೆಪ್ಟೆಂಬರ್ 12) ಮನೆಯಿಂದ ಓಡಿ ಹೋಗಲು ಪ್ಲ್ಯಾನ್ ಮಾಡಿದ್ದಳು. ಅದಕ್ಕಾಗಿ ತಮ್ಮ ಮನೆಯವರಿಗೆ ಪ್ರಜ್ಞೆ ತಪ್ಪಿಸಲೆಂದು ಮೆಡಿಕಲ್ ಶಾಫ್‍ನಿಂದ ಕೆಲವೊಂದಿಷ್ಟು ಮಾತ್ರೆಗಳನ್ನು ತಂದು ಆಲೂ ಪರೋಟದಲ್ಲಿ ಬೆರೆಸಿದ್ದಳು. ಇದನ್ನು ಸೇವಿಸಿ ಆಕೆಯ ತಾಯಿ ಹಾಗೂ ಸಹೋದರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಸಚಿನ್ ಜೊತೆ ಪರಾರಿಯಾಗಿದ್ದಳು.

ಮರು ದಿನ ಮುಂಜಾನೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಹೆಂಡತಿ ಹಾಗೂ ಮಗನನ್ನು ಖುಶ್ಬು ತಂದೆ ( ಈತ ಪರೋಟ ಸೇವಿಸಿರಲಿಲ್ಲ) ಆಸ್ಪತ್ರೆಗೆ ದಾಖಲಿಸಿದ್ದರು. ಜೊತೆಗೆ ಮಗಳು ಕಾಣೆಯಾಗಿದ್ದನ್ನು ಗಮನಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟರಲ್ಲೆ ಖುಷ್ಬು ಕೂಡ ಮದುವೆಯಾಗಿ ಗಂಡನ ಜೊತೆ ಠಾಣೆಗೆ ಹಾಜರಾಗಿದ್ದಳು.