

Korean vlogger: ಯೂಟ್ಯೂಬರ್ಸ್ ಹಾಗೂ ವ್ಲಾಗರ್ ಗಳು(Korean vlogger) ರಾಜ್ಯ, ದೇಶಗಳನ್ನು ಸುತ್ತಿ ಅನೇಕ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬಳು ಕೊರಿಯನ್ ವ್ಲಾಗರ್ ನಮ್ಮ ಭಾರತದಲ್ಲಿ ವಿಡಿಯೋ ಮಾಡಿಕೊಂಡು ಸುತ್ತಾಡುವಾಗ ನೀಚನೊಬ್ಬ ಫಾಲೋ ಮಾಡಿಕೊಂಡು ಬಂದು ತನ್ನ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದೆ.
ಹೌದು, ರಾಜಸ್ಥಾನ(Rajasthan)ದ ಜೋಧ್ಪುರ(Jodpura)ದಲ್ಲಿ ಪ್ರವಾಸಿ ತಾಣಗಳನ್ನೆಲ್ಲ ವಿಡಿಯೋ ಮಾಡಿಕೊಂಡು ತಿರುಗುತ್ತಿದ್ದ ಕೊರಿಯನ್ ವ್ಲಾಗರ್ಗೆ ಹಿಂಬಾಲಿಸಿಕೊಂಡು ಬಂದ ಪುಂಡನೊಬ್ಬ ಚಡ್ಡಿ ಬಿಚ್ಚಿ ತನ್ನ ಗುಪ್ತಾಂಗ ಪ್ರದರ್ಶಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ.
ಅಂದಹಾಗೆ ಯುವಕ ಗುಪ್ತಾಂಗ ಪ್ರದರ್ಶಿಸಿದ ವಿಡಿಯೋವನ್ನು ಸಂತ್ರಸ್ತ ಕೊರಿಯನ್ ವ್ಲಾಗರ್ ಬಿಡುಗಡೆ ಮಾಡಿದ ಬಳಿಕ ಅದರ ಆಧಾರದ ಮೇಲೆ ಯುವಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಸ್ವಾತಿ ಮಾಲಿವಾಲ್ ಆಕ್ರೋಶ
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಕೊರಿಯನ್ ವ್ಲಾಗರ್‌ನ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಕನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿ ರಾಜಸ್ಥಾನದ ಮುಖ್ಯಮಂತ್ರಿಗೆ ಸ್ವಾತಿ ಮಾಲಿವಾಲ್ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿರುವುದಾಗಿ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
ಹಿಂಬಾಲಿಸಿ ಅನುಚಿತ ವರ್ತನೆ
ಜೋಧ್‌ಪುರದ ಪ್ರವಾಸಿ ತಾಣದಲ್ಲಿ ಕೊರಿಯನ್ ಯುವತಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಯುವಕನೊಬ್ಬ ಆಕೆಯ ಎದುರೇ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹದ್ದು ಮೀರಿದ ವರ್ತನೆ ತೋರಿದ್ದ. ವಿಡಿಯೋ ರೆಕಾರ್ಡ್ ಮಾಡಿದ್ದ ಯುವತಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ವಿಡಿಯೋ ವೈರಲ್ ಆಗಿ ಯುವಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಬಂಧಿಸುವಂತೆ ಒತ್ತಾಯ ಮಾಡಿದ್ದರು.
ಇದನ್ನು ಓದಿ: Treatment for stroke: ಸ್ಟ್ರೋಕ್ ಆದವರಿಗೆ ಸರಿಯಾದ ಚಿಕಿತ್ಸೆ ಯಾವುದು? ಇಲ್ಲಿದೆ ನೋಡಿ ಸಲಹೆ













