Home News ಹುಡುಗಿಯರು ಮಾತ್ರವಲ್ಲ, ಇನ್ನೂ ಹುಡುಗರೂ ಕೂಡಾ ಸೇಫ್ ಅಲ್ಲ!! ಡ್ರಾಪ್ ಕೊಡೋದಾಗಿ ಹೇಳಿ ಯುವಕನನ್ನೇ ರೇಪ್...

ಹುಡುಗಿಯರು ಮಾತ್ರವಲ್ಲ, ಇನ್ನೂ ಹುಡುಗರೂ ಕೂಡಾ ಸೇಫ್ ಅಲ್ಲ!! ಡ್ರಾಪ್ ಕೊಡೋದಾಗಿ ಹೇಳಿ ಯುವಕನನ್ನೇ ರೇಪ್ ಮಾಡಿದ ಕಾಮಾಂಧ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಇತ್ತೀಚೆಗೆ ಸಾಲು ಸಾಲು ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದೂ, ಈ ವರೆಗೆ ಯುವತಿಯರ, ಬಾಲಕಿಯರ, ಮಹಿಳೆಯರ ಮೇಲೆ ನಡೆಯುತ್ತಿದ್ದ ಇಂತಹ ಪ್ರಕರಣ, ಒಂದು ವಿಚಿತ್ರವಾಗಿ ಪರಿಣಮಿಸಿದ್ದು,ಹರೆಯಕ್ಕೆ ಬಂದ ಯುವಕನನ್ನೂ ಬಿಡದೆ ಕಾಮಿಯೋರ್ವ ಅತ್ಯಾಚಾರ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.

ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೇ ಈ ಅತ್ಯಾಚಾರದ ಸಂತ್ರಸ್ತ. ಯುವಕ ತನ್ನ ತಂಗಿಯ ಮನೆಗೆ ತೆರಳಲು ಪ್ರಯಾಣಿಕರ ವಾಹನಕ್ಕೆ ಕಾಯುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ರಾಜು ಆಚರಟ್ಟಿ ಎಂಬಾತ ತನ್ನ ಬೈಕ್ ನಲ್ಲಿ ಡ್ರಾಪ್ ಕೊಡೋದಾಗಿ ತಿಳಿಸಿದ್ದು, ಯುವಕ ಬೈಕು ಹತ್ತಿದ ಕೂಡಲೇ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ.

ಆರೋಪಿ ಯುವಕನ ಕೆನ್ನೆಗೆ ಕಚ್ಚಿ, ದೇಹದಲೆಲ್ಲಾ ಪರಚಿದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಆರೋಪಿ ರಾಜು ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ತನಿಖೆ ಮುಂದುವರಿದಿದೆ.

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ