Home News ಈತನನ್ನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ಕೇಳಿದರೆ, ಈತನ ಉತ್ತರ ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ!! | ಅಷ್ಟಕ್ಕೂ...

ಈತನನ್ನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ಕೇಳಿದರೆ, ಈತನ ಉತ್ತರ ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ!! | ಅಷ್ಟಕ್ಕೂ ಈತನ ಹುಡುಗಿ ಯಾವ ಸೀಮೆಯ ಸುರಸುಂದರಾಂಗಿ??

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸಚಿಂತನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ವೇದಿಕೆಯೂ ಹೌದು. ಇದೀಗ ಎಲ್ಲೆಡೆಯೂ ಸಾಮಾಜಿಕ ಜಾಲತಾಣಗಳ ವಿಡಿಯೋಗಳದ್ದೇ ಸದ್ದು.

ಸಾಮಾಜಿಕ ಮಾಧ್ಯಮಗಳ ಪ್ರಪಂಚವು ತಮಾಷೆಯ ವೀಡಿಯೊಗಳಿಂದ ತುಂಬಿದೆ. ಪ್ರತಿದಿನ ಇಲ್ಲಿ ಏನಾದರೂ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವ್ಯಕ್ತಿಯೊಬ್ಬನ ವಿಡಿಯೋ ಸಖತ್ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯು ಹೇಳುತ್ತಿರುವ ವಿಷಯಗಳನ್ನೂ ಕೇಳಿದರೆ ಯಾರೇ ಆದರೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ.

ವಾಸ್ತವವಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯನ್ನು ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯು, ಮೇಕಪ್ ಹೊಂದಿರುವ ಹುಡುಗಿ ಅಗತ್ಯವಿದೆ, ಅವರು ಕೆಂಪು ಲಿಪ್ಸ್ಟಿಕ್ ಮತ್ತು ಕಾಜಲ್ ಅನ್ನು ಹಾಕಿರಬೇಕು. ಜೀನ್ಸ್ ಧರಿಸಿರಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ಇಷ್ಟಕ್ಕೆ ನಿಲ್ಲಿಸದ ಈ ವ್ಯಕ್ತಿ ಮುಂದೆ ಏನು ಹೇಳಿದ್ದಾನೆ ಎಂದು ಕೇಳಿದರೆ ನಿಮಗೆ ನಗು ತಡೆಯಲು ಸಾಧ್ಯವಾಗುವುದಿಲ್ಲ.

ಈತನಿಗೆ ತೆಳ್ಳಗಿರುವ ಹುಡುಗಿ ಬೇಡವಂತೆ. ದಪ್ಪಗಿರುವ ಹುಡುಗಿಯೇ ಬೇಕಂತೆ. ಕಾರಣ ಏನೆಂದು ಕೇಳಿದರೆ ತೆಳ್ಳಗಿರುವ ಹುಡುಗಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋ ಜಾರ್ಖಂಡ್‌ನದ್ದು ಎಂದು ತೋರುತ್ತದೆ. ಹುಡುಗಿ ಎಲ್ಲಿರಬೇಕು ಎಂದು ಆತನನ್ನು ಕೇಳಿದಾಗ, ಆತ ಹುಡುಗಿ ರಾಂಚಿಯವರಾಗಿರಬೇಕು ಅಥವಾ ಮುಂಬೈನವರಾದರೂ ಪರವಾಗಿಲ್ಲ ಎಂದಿದ್ದಾನೆ. ಹುಡುಗಿಯ ಹೆಸರು ರವೀನಾ ಟಂಡನ್ ನಂತೆ ಇರಬೇಕಂತೆ !!

ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್ ಪುಟದಲ್ಲಿ bhutni_ke_memes ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಕೂಡ ವ್ಯಕ್ತಿಯ ಆಯ್ಕೆಯ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಚಿಕ್ಕಪ್ಪನ ಕಲ್ಪನೆಯು ಅದ್ಭುತವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಒಬ್ಬ ಬಳಕೆದಾರನು ತನ್ನ ಸ್ನೇಹಿತನನ್ನು ಟ್ಯಾಗ್ ಮಾಡಿ ಅವನ ಆಲೋಚನೆಗಳು ನಿಮ್ಮಂತೆಯೇ ಇರುತ್ತವೆ ಎಂದು ಬರೆದಿದ್ದಾರೆ.