Home News Lockdown : ಬಾಲಿವುಡ್ ನ ಈ ಹಾಡನ್ನು ಟಿಕ್ ಟಾಕ್ ಮಾಡಿ ಚೀನಿಯರ ತೀವ್ರ ಪ್ರತಿಭಟನೆ!!!

Lockdown : ಬಾಲಿವುಡ್ ನ ಈ ಹಾಡನ್ನು ಟಿಕ್ ಟಾಕ್ ಮಾಡಿ ಚೀನಿಯರ ತೀವ್ರ ಪ್ರತಿಭಟನೆ!!!

Hindu neighbor gifts plot of land

Hindu neighbour gifts land to Muslim journalist

ಕೋವಿಡ್ ಎಂಬ ಮಹಾಮಾರಿಯಿಂದ ಇಡೀ ಜಗತ್ತಿನಾದ್ಯಂತ ಒಂದು ಬಾರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಅದನ್ನು ತಡೆಗಟ್ಟಲು ಲಾಕ್ ಡೌನ್ ಎಂಬ ಪರಿಹಾರವನ್ನು ಕೂಡ ಕಂಡುಕೊಂಡಿದ್ದಾರೆ. ಆದರೆ ಇದೀಗ ಚೀನಾದ ಜನರು ಕಟ್ಟುನಿಟ್ಟಾದ ಕೋವಿಡ್ ಲಾಕ್ ಡೌನ್ ನಿಂದ ಬೇಸತ್ತಿದ್ದಾರೆ. ಅಲ್ಲಿನ ಸರ್ಕಾರ ಅತಿ ಕಠಿಣ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ.

ಎಷ್ಟು ಕಠಿಣವಾದ ನಿಯಮಗಳೆಂದರೆ, ಲಾಕ್ ಡೌನ್ ನಿಂದಾಗಿ ಜನರು ಮನೆಯಿಂದ ಹೊರಬರಲಾರದೆ ದಿನನಿತ್ಯದ ಸಾಮಾಗ್ರಿಗಳನ್ನು ಪಡೆಯಲು ಪರದಾಟ ಮಾಡುವಂಥ ಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿರುವುದರಿಂದ ಚೀನಾದ ಹೆನಾನ್ ಪ್ರಾಂತ್ಯದ ರಾಜಧಾನಿ ಝೆಂಗ್ಝೌ ನಲ್ಲಿರುವ ಐಫೋನ್ ತಯಾರಿಕಾ ಘಟಕದಿಂದ ಹತ್ತು ಮಂದಿ ಕಾರ್ಮಿಕರು ಪರಾರಿಯಾಗುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸರ್ಕಾರದ ಈ ನಿಯಮದಿಂದ ಬೇಸತ್ತು ಹೋದ ಜನರು ಟಿಕ್ ಟಾಕ್ ಮಾಡಿ ಈ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಗೀತ ದಿಗ್ಗಜ ಸಂಯೋಜಕ ಬಪ್ಪಿ ಲಹರಿ ಅವರ 1982 ರಲ್ಲಿ ಬಂದ ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ಸೂಪರ್ ಹಿಟ್ ಹಾಡಾದ ‘ ಜಿಮ್ಮಿ ಜಿಮ್ಮಿ’ ಈ ಹಾಡು ಈಗ ಚೀನಿಯರ ಪ್ರತಿಭಟನೆಯ ಕೂಗಿಗೆ ಧ್ವನಿಯಾಗಿದೆ.

ಚೀನಾದ ಜನಪ್ರಿಯ ಡೌಯಿನ್ (ಟಿಕ್ ಟಾಕ್) ಆ್ಯಪ್‌ನಲ್ಲಿ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಯ ವಿಡಿಯೋಗಳನ್ನು ಮನೆಯಲ್ಲಿಯೇ ಕುಳಿತು ಹಾಕುತ್ತಿದ್ದಾರೆ. ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ “ಜೀ ಮಿ, ಜೀ ಮಿ” ಹಾಡನ್ನು ಹಾಕಿ ನಟಿಸಿ ಜೋರಾಗಿಯೇ ಪ್ರತಿಭಟಿಸಿದ್ದಾರೆ. ಚೀನಾ ಭಾಷೆಯಲ್ಲಿ ಈ ಹಾಡಿನ ಅರ್ಥ ಏನಂದ್ರೆ “ನನಗೆ ಅನ್ನ ಕೊಡು, ಅನ್ನ ಕೊಡು” ಎಂದಾಗಿದೆ. ಜನರು ತಟ್ಟೆ, ಪಾತ್ರೆ ಹಿಡಿದುಕೊಂಡು ಅಮ್ಮನ ಬಳಿ “ಜೀ ಮಿ, ಜೀ ಮಿ” ( “ನನಗೆ ಅನ್ನ ಕೊಡು, ಅನ್ನ ಕೊಡು) ಎಂದು ಹೇಳುತ್ತಿರುವ ವಿಡಿಯೋಗಳು ವೈರಲ್ ಆಗಿದೆ.

https://twitter.com/ananthkrishnan/status/1586992843096297473?ref_src=twsrc%5Etfw%7Ctwcamp%5Etweetembed%7Ctwterm%5E1586992843096297473%7Ctwgr%5Efdf1a1a54ccac78bbf51e7bc3552e0cc0a0f6bda%7Ctwcon%5Es1_c10&ref_url=http%3A%2F%2Fapi-news.dailyhunt.in%2F