Home Karnataka State Politics Updates ” ಹಿಂದುಗಳ ಏರಿಯಕ್ಕೆ ನೀವ್ಯಾಕೆ ಹೋದದ್ದು ” ಎಂದ ಬಿಜೆಪಿ | ಮುಸಲ್ಮಾನರ ಏರಿಯಾದಲ್ಲಿ ಹಿಂದುಗಳು...

” ಹಿಂದುಗಳ ಏರಿಯಕ್ಕೆ ನೀವ್ಯಾಕೆ ಹೋದದ್ದು ” ಎಂದ ಬಿಜೆಪಿ | ಮುಸಲ್ಮಾನರ ಏರಿಯಾದಲ್ಲಿ ಹಿಂದುಗಳು ಬ್ಯಾನರ್ ಹಾಕಿದ್ದೇಕೆ ಎಂದ ಸಿದ್ದುಗೆ ಟಾಂಗ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಸಿದ್ದರಾಮಯ್ಯನವರೇ ಕೊಡಗಿನಲ್ಲಿ ನೀವು ಎದುರಿಸಿದ್ದು ಜನರ ಆಕ್ರೋಶ. ಬಹುಸಂಖ್ಯಾತ ಹಿಂದೂ ಸಮಾಜದ ವಿರುದ್ಧ ನೀವು ನೀಡಿದ ಹೇಳಿಕೆಗಳಿಗೆ ಪ್ರತಿರೋಧವಾಗಿ ಸಂವಿಧಾನದ ಆಶಯದಂತೆ ಜನರು ಪ್ರತಿಭಟಿಸಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಮುಸಲ್ಮಾನರ ಏರಿಯಾದಲ್ಲಿ ಹಿಂದೂಗಳು ಬ್ಯಾನರ್‌ ಹಾಕಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರದೇ ಮಾತನ್ನು ಅನುಸರಿಸಿದ ಕೊಡಗಿನ ಜನತೆ “ಹಿಂದೂಗಳ ಏರಿಯಾಕ್ಕೆ ಸಿದ್ದರಾಮಯ್ಯ ಬಂದಿದ್ದೇಕೆ” ಎಂದು ಪ್ರತಿಭಟಿಸಿದ್ದಾರೆ, ಪ್ರಶ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ, ಈ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ ಎಂದು ಬಿಜೆಪಿ ಕೇಳಿದೆ.

ಈ ಟ್ವೀಟ್ ಮಾಡಿರುವ ಬಿಜೆಪಿ,  ಸಿದ್ದರಾಮಯ್ಯ ಅವರೇ, ಕೊಡಗಿನಲ್ಲಿ ನೀವು ಎದುರಿಸಿದ್ದು ಜನರ ಆಕ್ರೋಶ, ಆದರೆ ಇಲ್ಲಿ ನೀವು ಬೆದರಿಕೆ ಹಾಕುತ್ತಿರುವುದು ಪ್ರಜಾಪ್ರಭುತ್ವದ ಲಕ್ಷಣವೇ? ಎಂದು ಪ್ರಶ್ನಿಸಿದೆ.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಮೃದ್ಧವಾಗಿದೆ. ಇದಕ್ಕೆ ಬಿಜೆಪಿ ಸರ್ಕಾರದ ರಚನಾತ್ಮಕ ನೀತಿಗಳೇ ಕಾರಣ.  ಆದರೆ ಸಿದ್ದರಾಮಯ್ಯ ತಮ್ಮ ಲಾಲಸೆಗಾಗಿ 26 ವರ್ಷಗಳಷ್ಟು ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದ ಕುದುರಿಸಿ, ನಾಡಿಗೆ ದ್ರೋಹ ಬಗೆದಿದ್ದಾರೆ. ಅವೆಲ್ಲವನ್ನೂ ರದ್ದುಪಡಿಸಲು ಬಸವರಾಜ ಬೊಮ್ಮಾಯಿ  ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದಿದೆ.

ಸಿದ್ದು ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ ಮಾಡಿಕೊಂಡಿರುವ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳು ಬೊಕ್ಕಸಕ್ಕೆ ಭಾರೀ ಹೊರೆಯಾಗಿವೆ. ತಾನು ಜನಪರ ಎಂದು ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಇಂಥ ಜನವಿರೋಧಿ ನೀತಿಯಿಂದ ರಾಜ್ಯಕ್ಕೆ ಬೇಕಿಲ್ಲದಿದ್ದರೂ 5,485 ಮೆಗಾವ್ಯಾಟ್ ವಿದ್ಯುತ್ ಖರೀದಿಸಬೇಕಾದ ದುರಾವಸ್ಥೆ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಎಂದು ಬಿಜೆಪಿ ಪ್ರಶ್ನಿಸಿದೆ.