Home News Tejaswini ananth kunar: ರಾಜ್ಯ ನಾಯಕರನ್ನೆಲ್ಲ ಬಿಟ್ಟು ನೇರವಾಗಿ ಮೋದಿಯನ್ನೇ ಭೇಟಿಯಾದ ತೇಜಸ್ವಿನಿ ಅನಂತ್ ಕುಮಾರ್...

Tejaswini ananth kunar: ರಾಜ್ಯ ನಾಯಕರನ್ನೆಲ್ಲ ಬಿಟ್ಟು ನೇರವಾಗಿ ಮೋದಿಯನ್ನೇ ಭೇಟಿಯಾದ ತೇಜಸ್ವಿನಿ ಅನಂತ್ ಕುಮಾರ್ – ಲೋಕಸಭಾ ಟಿಕೆಟ್ ಫಿಕ್ಸ್?!

BJP
Image source- Kannada news- news 18

Hindu neighbor gifts plot of land

Hindu neighbour gifts land to Muslim journalist

BJP :ಇತ್ತೀಚೆಗಷ್ಟೇ ಬಿಜೆಪಿ(BJP)ಯೊಂದಿಗೆ ಧೃಡವಾಗಿದ್ದೇನೆ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದ ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್​ ಕುಮಾರ್​(Tejaswini ananth kumar) ಈ ಬೆನ್ನಲ್ಲೇ ಯಾವ ನಾಯಕರನ್ನೂ ಸಂಪರ್ಕಿಸದೆ ನೇರವಾಗಿ ಪ್ರಧಾನಿ ಮೋದಿಯವರನ್ನೇ ಭೇಟಿ ಮಾಡಿ ತೀವ್ರ ಕುತೂಹಲಕ್ಕೆ ಕಾರಣರಾಗಿದ್ದಾರೆ.

 

ಹೌದು, ಪತಿಯ ನಿಧನದ ನಂತರ ಪಕ್ಷದಲ್ಲಿ ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ, ದಿನದಿಂದಲೂ ದಿನಕ್ಕೆ ಕಡೆಗಣಿಸಲಾಗತ್ತಿದೆ ಎಂದು ಮಾಜಿ ಮಾಜಿ ಅನಂತ್ ಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಕಾಂಗ್ರೆಸ್(Congress)ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ ಆ ಕೂಡಲೇ ತೇಜಸ್ವಿನಿ ಅವರು ಟ್ವೀಟ್ ಮಾಡಿ ‘ನಾನು ಎಲ್ಲೂ ಹೋಗುವುದಿಲ್ಲ, ಬಿಜೆಪಿಯಲ್ಲೇ ಧೃಡವಾಗಿದ್ದೇನೆ’ ಎಂದು ಹೇಳಿದ್ದರು, ಆದರೆ ಈ ಬೆನ್ನಲ್ಲೇ ತೇಜಸ್ವಿನಿ ಅನಂತ್​ ಕುಮಾರ್​ ಇದೀಗ ಪ್ರಧಾನಿ ಮೋದಿಯನ್ನು(PM Modi) ದೆಹಲಿಯ ಸಂಸತ್ ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದರಿಂದ ತೇಜಸ್ವಿನಿ ಅವರಿಗೆ ಲೋಕಸಭಾ ಟಿಕೆಟ್ ಫಿಕ್ಸ್ ಆಯ್ತಾ? ಎಂಬ ಕುತೂಹಲ ಗರಿಗೆದರಿದೆ.

 

ಅಂದಹಾಗೆ ಈಗ ಲೋಕಸಭಾ ಚುನಾವಣೆ(Parliament election) ಸಂಬಂಧಿಸಿದಂತೆ ಪಕ್ಷ ಸಂಘಟನೆಯ ಚರ್ಚೆಗಳು ಆರಂಭವಾದ ಬೆನ್ನಲ್ಲಿಯೇ ತೇಜಸ್ವಿನಿ ಅನಂತಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಆದರೆ, ಅವರ ಭೇಟಿ ಬಗ್ಗೆ ರಾಜ್ಯ ನಾಯಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ವಿಧಾನ ಸಭೆ ಚುನಾವಣೆಯಲ್ಲೂ ಅವಕಾಶ ಸಿಗಲಿಲ್ಲ. ಇದೀಗ ಪ್ರಧಾನಿ ಮೋದಿಯನ್ನು ಭೇಟಿ ಮಾಡಿರುವ ತೇಜಸ್ವಿನಿ ಅನಂತ್​ ಕುಮಾರ್​ ಅವರಿಗೆ ಮುಂದೆ ಅವಕಾಶ ಸಿಗುವುದೇ ಎನ್ನುವ ಪ್ರಶ್ನೆ ಇನ್ನೂ ನಿಗೂಢವಾಗಿದೆ.

 

ಇನ್ನೂ ತೇಜಸ್ವಿನಿ ಅನಂತ್ ಕುಮಾರ್‌ ಅವರು ಕುಟುಂಬ ಸಮೇತರಾಗಿ ತೆರಳಿ ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕುಟುಂಬ ಸಮೇತರಾಗಿ ಫೋಟೋ ತೆಗೆಸಿಕೊಂಡಿದ್ದು, ಪ್ರಧಾನಿ ಮೋದಿ, ಅನಂತ್ ಕುಮಾರ್‌ ಮೊಮ್ಮಗ ಅಪ್ರಮೇಯನ ಕಿವಿ ಹಿಂಡಿ ಪೋಸ್‌ ನೀಡಿದ್ದಾರೆ. ಈ ವೇಳೆ ಅನಂತ್‌ ಕುಮಾರ್‌ ಅವರ ಪುತ್ರಿ ಐಶ್ವರ್ಯಾ ಅನಂತ್ ಕುಮಾರ್, ಅಳಿಯ ದೇವೇಶ್‌ ಸಿಂಗ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ :Gruha jyothi: ‘ಗೃಹಜ್ಯೋತಿ’ಗೆ ಅರ್ಜಿ ಹಾಕಿದ್ರೂ ಇಂತವರಿಗೆ ಮುಂದಿನ ತಿಂಗಳು ಬಿಲ್ ಬರೋದು ಪಕ್ಕಾ !! ಕೊನೇ ಕ್ಷಣದಲ್ಲಿ ಸರ್ಕಾರದ ಹೊಸ ನಿರ್ಧಾರ!!