Home News BJP: ಶಾಸಕ ಮುನಿರತ್ನಗೆ ಶೋಕಾಸ್ ನೋಟಿಸ್ ಕಳಿಸಿದ ಬಿಜೆಪಿ !!

BJP: ಶಾಸಕ ಮುನಿರತ್ನಗೆ ಶೋಕಾಸ್ ನೋಟಿಸ್ ಕಳಿಸಿದ ಬಿಜೆಪಿ !!

Hindu neighbor gifts plot of land

Hindu neighbour gifts land to Muslim journalist

BJP: ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಕೊಲೆ ಬೆದರಿಕೆ, ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ, ಮಹಿಳೆಯರ ವಿರುದ್ದ ಅಶ್ಲೀಲ ಭಾಷೆ ಬಳಕೆ ಸಂಬಂಧದ ಆರೋಪದಡಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಆರೋಪ ಹಾಗೂ ಬಂಧನನದ ಬೆನ್ನಲ್ಲೇ ತನ್ನ ಶಾಸಕ ಮುನಿರತ್ನಗೆ ಬಿಜೆಪಿ ಶೋಕಾಸ್ ನೋಟಿಸ್ ಕಳಿಸಿದೆ.

ಹೌದು, ಬಿಜಿಪಿ(BJP) ರಾಜ್ಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್(show cause notice) ಜಾರಿ ಮಾಡಲಾಗಿದ್ದು, ಜಾತಿನಿಂದನೆ, ಜೀವ ಬೆದರಿಕೆ ಆರೋಪದ ಕುರಿತು ಸ್ಪಷ್ಠಿಕರಣ ಕೋರಿದೆ. ಬಿಜೆಪಿ ಶಾಸಕ ಮುನಿರತ್ನ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ, ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಚಲುವರಾಜು ಅವರು ಪೊಲೀಸರು ದೂರು ನೀಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಮಹತ್ವದ ಕ್ರಮ ಕೈಗೊಂಡಿದೆ.

https://x.com/ANI/status/1834943312236888126?t=Oc1Aum_kgLahfiXB6Y_yiw&s=08

ಅಂದಹಾಗೆ ಶಾಸಕ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರಿಂದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದಂತೆ ಕೊಲೆ ಮಾಡುವ ಜೀವ ಬೆದರಿಕೆ ಹಾಗೂ ಕಿರುಕುಳವಿದೆ ಎಂದು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಕುರಿತು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ ಅವರಿಗೂ ಲಿಖಿತ ದೂರು ಸಲ್ಲಿಸಿದ್ದು, ಮುನಿರತ್ನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.