Home latest ಬರ್ತ್ ಡೇ ಪಾರ್ಟಿ ವಿಷಯದಲ್ಲಿ ಜಗಳ | ಫೇಸ್ಬುಕ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಪತಿರಾಯ| ಅಸಲಿಗೆ...

ಬರ್ತ್ ಡೇ ಪಾರ್ಟಿ ವಿಷಯದಲ್ಲಿ ಜಗಳ | ಫೇಸ್ಬುಕ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಪತಿರಾಯ| ಅಸಲಿಗೆ ನಡೆದ ಸಂಗತಿಯಾದರೂ ಏನು ?

Hindu neighbor gifts plot of land

Hindu neighbour gifts land to Muslim journalist

ಗಂಡ ಹೆಂಡತಿ ಜಗಳ‌ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಜಗಳ ಫೇಸ್ಬುಕ್ ನಲ್ಲಿ RIP ಎಂದು ಹಾಕುವವರೆಗೆ ಹೋಗಿದೆ.

ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ. ಮರುದಿನ‌ ಗಂಡ ತನ್ನ ಫೇಸ್ಬುಕ್ ಅಕೌಂಟ್ ನಲ್ಲಿ ಹೆಂಡತಿಯ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಊದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ‌ ತನ್ನ ಹೆಂಡತಿ ಲೀಲಾವತಿಯ ಫೋಟೋವನ್ನು ಫೇಸ್ಬುಕ್ ಅಕೌಂಟ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.

ಫೇಸ್ಬುಕ್ ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ಪೋಷಕರು, ಊರಿಗೆ ಬಂದು ಮಗಳ ಬಗ್ಗೆ ವಿಚಾರಿಸಿದಾಗ, ಎಲ್ಲೂ ಕಾಣದೇ ಹೋದಾಗ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಮುನಿಕೃಷ್ಣ ಸಹೋದರ ಮುನಿರಾಜು ಹೇಳುತ್ತಿರುವುದು ಈ ರೀತಿ ಇದೆ.’ ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಅಣ್ಣ ಅತ್ತಿಗೆ ನಡುವೆ ಜಗಳ ಆಗಿದೆ. ಮರುದಿನ ಕೂಡಾ ಬೆಳಿಗ್ಗೆ ಜಗಳ ಮುಂದುವರಿದಿದೆ. ಆಗ ಅಣ್ಣ ಅತ್ತಿಗೆಗೆ ಹೊಡೆದಿದ್ದಾನೆ . ಅನಂತರ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು, ಅತ್ತಿಗೆಯೇ ಅಣ್ಣನ ಫೇಸ್ಬುಕ್ ಅಕೌಂಟ್ ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ನಮ‌್ಮ ಅಣ್ಣನ ಪಾತ್ರ ಏನೂ ಇಲ್ಲ ಎಂದೂ ನನ್ನ ಅಣ್ಣನ ಮೊಬೈಲ್ ತೆಗೆದುಕೊಂಡು ಆಕೆಯೇ ಹೀಗೆ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.