Home News Bill Passed: ಈ ರಾಜ್ಯದ ಬಾರ್‌ಗಳಲ್ಲಿ ಇನ್ನು ಮಹಿಳೆಯರಿಗೂ ಕೆಲಸ ಮಾಡಲು ಅವಕಾಶ!

Bill Passed: ಈ ರಾಜ್ಯದ ಬಾರ್‌ಗಳಲ್ಲಿ ಇನ್ನು ಮಹಿಳೆಯರಿಗೂ ಕೆಲಸ ಮಾಡಲು ಅವಕಾಶ!

Hindu neighbor gifts plot of land

Hindu neighbour gifts land to Muslim journalist

Bill Passed: ಮಮತಾ ಬ್ಯಾನರ್ಜಿ ಸರಕಾರವು ಬಾರ್‌ಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೂ ಅವಕಾಶ ನೀಡುವ ಮಸೂದೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ. ಹೀಗಾಗಿ ಇನ್ನು ಮುಂದೆ ಮಹಿಳೆಯರು ʼಆನ್‌ ಕ್ಯಾಟಗರಿʼ ಮದ್ಯದ ಅಂಗಡಿಗಳಲ್ಲಿ ಕೆಲಸ ಮಾಡಬಹುದಾಗಿದೆ.

ಬಾರ್‌ಕೌಂಟರ್‌ನಲ್ಲಿ ಹೊರ ದೇಶಗಳಲ್ಲಿ ಮಹಿಳೆಯರು ಇದ್ದಾರೆ. ಆದರೆ ಬಂಗಾಳದಲ್ಲಿ ಈವರೆಗೆ ಈ ನಿಯಮ ಇರಲಿಲ್ಲ. ಆದರೆ ಈಗ ನಿಯಮ ಬದಲಾಗಿದೆ. ಬಾರ್‌-ಕಮ್‌-ರೆಸ್ಟೋರೆಂಟ್‌, ಮದ್ಯದ ಅಂಗಡಿಗಳಲ್ಲಿ ಉದ್ಯೋಗಕ್ಕಾಗಿ ಹೊಸ ನಿಯಮಕ್ಕೆ ಅನುಮೋದನೆ ನೀಡಲಾಗಿದೆ.

ಬುಧವಾರ ವಿಧಾನಸಭೆಯಲ್ಲಿ ಪಶ್ಚಿಮ ಬಂಗಾಳ ಹಣಕಾಸು ಮಸೂದೆ 2025 ಅನ್ನು ಮಂಡಿಸಿದ ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಪುರುಷ ಮತ್ತು ಮಹಿಳೆ ಎಂಬ ತಾರತಮ್ಯಕ್ಕೆ ರಾಜ್ಯ ಸರಕಾರದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು.

ಆನ್‌, ಆಫ್‌ ಕೆಟಗರಿ ಏನಿದು?
ʼಆಫ್‌ʼ ಕೆಟಗರಿಯಲ್ಲಿ ಮಳಿಗೆಯಲ್ಲಿ ಮದ್ಯವನ್ನು ಮಾರಾಟ ಮಾಡಲು ಅವಕಾಶವಿದೆ.
ʼಆನ್‌ʼ ಕೆಟಗರಿಯಲ್ಲಿ ಮದ್ಯದಂಗಡಿಯ ಆವರಣದಲ್ಲೇ ಮದ್ಯ ಸೇವಿಸಲು ಅವಕಾಶವಿದೆ.