Home News ಬೈಕ್ -ಕಾರು ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲೇ ಸಾವು | ಅಪಘಾತದ ತೀವ್ರತೆಗೆ...

ಬೈಕ್ -ಕಾರು ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲೇ ಸಾವು | ಅಪಘಾತದ ತೀವ್ರತೆಗೆ ವಿದ್ಯುತ್ ತಂತಿಯಲ್ಲಿ ನೇತಾಡಿದ ಬೈಕ್ ಸವಾರ

Hindu neighbor gifts plot of land

Hindu neighbour gifts land to Muslim journalist

ತಮಿಳುನಾಡಿನ ನಿಲಕೊಟ್ಟೈ ಬಳಿ ಭಾನುವಾರ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತ ಭೀಕರ ವಾತಾವರಣ ಸೃಷ್ಟಿಸಿದೆ. ಆ ಅಪಘಾತದಲ್ಲಿ ಮಧುರೈನ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಚಿಮ್ಮಿದ ಒಬ್ಬಾತನ ದೇಹ ರಸ್ತೆ ಪಕ್ಕದ ವಿದ್ಯುತ್ ತಂತಿಯ ಮೇಲೆ ನೇತಾಡುತಿತ್ತು ಎಂದ್ರೆ ಅದ್ಯಾವ ವೇಗದಲ್ಲಿ ಅಪಘಾತ ನಡೆದಿತ್ತು ಎಂದು ಊಹಿಸಿಕೊಳ್ಳಬಹುದು. ಮಧುರೈನ ಪೆರುಂಗುಡಿಯ ವಿ ಕಾಮರಾಜ್ (28) ಮತ್ತು ಆತನ ಸ್ನೇಹಿತ ಪಿ ಅಜಿತ್ ಕಣ್ಣನ್ (20) ಎಂದು ಗುರುತಿಸಲಾಗಿದೆ.

ಇವರಿಬ್ಬರು ತಮ್ಮ ಕೆಲವು ಸ್ನೇಹಿತರೊಂದಿಗೆ ಕೊಡೈಕೆನಾಲ್‌ಗೆ ತೆರಳಿದ್ದರು ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಭಾನುವಾರ ಸಂಜೆ ಮಧುರೈಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಧುರೈನಿಂದ ವಾತಲಗುಂಡು ಮುಖ್ಯರಸ್ತೆಯ ನಿಲಕೊಟ್ಟೈ ಬಳಿಯ ಸಿಕ್ಕುವಾರಪಟ್ಟಿ ಎಂಬಲ್ಲಿ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ತೀವ್ರತೆಗೆ ಇಬ್ಬರು ಮೇಲಕ್ಕೆ ಎಸೆಯಲ್ಪಟ್ಟಿದ್ದು, ಕಾಮರಾಜ್ ವಿದ್ಯುತ್ ಕಂಬದ ತಂತಿಯಲ್ಲಿ ನೇತಾಡುತ್ತಿದ್ದರು.

ಸ್ಥಳಕ್ಕೆ ಧಾವಿಸಿದ ನಿಲಕೋಟೈ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಿಲಕೋಟ್ಟೈ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಶಿವಗಂಗೈಯಿಂದ ಕೊಡೈಕೆನಾಲ್ ಬಳಿ ಪನ್ನೈಕಾಡು ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ವಿರುದ್ದ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಮತ್ತು ಸಾರ್ವಜನಿಕ ದಾರಿಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.